Monday, January 20, 2025
ಸುದ್ದಿ

ಮೂಡಬಿದ್ರೆಯಲ್ಲಿ ಗೋವುಗಳ ಆಕ್ರಮ ಕಸಾಯಿಖಾನೆ : ಕಸಾಯಿಖಾನೆ ವಿರುದ್ದ ಕ್ರಮಕೈಗೊಳ್ಳುವಂತೆ ಹಿಂದೂ ಜಾಗರಣಾ ವೇದಿಕೆಯಿಂದ ಪೋಲೀಸರಿಗೆ ಮನವಿ -ಕಹಳೆ ನ್ಯೂಸ್

ಮೂಡಬಿದ್ರೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಗೋವುಗಳ ಆಕ್ರಮ ಕಳ್ಳಸಾಗಾಣಿಕೆ ಮತ್ತು ಗೋವುಗಳ ಆಕ್ರಮ ಕಸಾಯಿಖಾನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಗಟ್ಟುವಂತೆ ಹಿಂದೂ ಜಾಗರಣಾ ವೇದಿಕೆ ಪೋಲಿಸರಿಗೆ ಮನವಿಯನ್ನು ಸಲ್ಲಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡಬಿದ್ರೆಯ ಆಲಂಗಾರಿ ಆಶ್ರಯ ಕಾಲೋನಿಯಯಲ್ಲಿ ಗಿಲ್ಬರ್ಟ್ ಮಿರಾಂದ ಅವರ ಮನೆಯಲ್ಲಿ ನಡೆಯುತ್ತಿದ್ದ ಗೋವುಗಳ ಆಕ್ರಮ ಕಸಾಯಿಖಾನೆಗೆ ಬೆಳ್ಳಂಬೆಳ್ಳಗ್ಗೆ ದಾಳಿ ನಡೆಸಿದ ಕಾರ್ಯಕರ್ತರು ಪೋಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ದಾಳಿಯ ಸಂದರ್ಭದಲ್ಲಿ ಗಿಲ್ಬರ್ಟ್ ಮಿರಾಂದ ಅವರ ಮನೆಯಲ್ಲಿ ವಧೆ ಮಾಡಿದ ಆರುವತ್ತು ಕೆ ಜಿ ಗೋವಿನ ಮಾಂಸ, ತಲೆಬುರುಡೆ ಮತ್ತು ವಧೆ ಮಾಡಲು ಕಟ್ಟಿ ಹಾಕಿದ ನಾಲ್ಕೂ ಗೋವುಗಳು ಪತ್ತೆಯಾಗಿದ್ದು, ಜೊತೆಗೆ ಹಿತ್ತಿಲಲ್ಲಿ ಕಾರ್ಯಕರ್ತರು ಶೋಧಿಸಿದಾಗ ಈ ಹಿಂದೆ ಕಡಿದ ಗೋವಿನ ರುಂಡವು ಪತ್ತೆಯಾಗಿದೆ. ಮೂಡಬಿದ್ರೆ ಪೋಲೀಸ್ ಠಾಣಾ ವ್ಯಾಪ್ತಿಯ ಒಳಗಡೆ ಸುಮಾರು 20 ಕ್ಕಿಂತಲೂ ಅಧಿಕ ಆಕ್ರಮ ಕಸಾಯಿಖಾನೆಗಳಿದ್ದು, ಮೂಡಬಿದ್ರೆ ಪೋಲೀಸರು ಈ ಆಕ್ರಮ ಕಸಾಯಿಖಾನೆಯ ವಿರುದ್ದ ಯಾವುದೇ ಕಾನೂನು ಕ್ರಮವನ್ನು ಜರಗಿಸದೇ ಆಕ್ರಮ ಗೋವುಗಳ ಕಸಾಯಿಖಾನೆಯನ್ನು ನಡೆಸುವವರಿಗೆ ಸಹಕಾರ ನೀಡುತ್ತಿರುವುದನ್ನು ಹಿಂದೂ ಜಾಗರಣಾ ವೇದಿಕೆಯು ತ್ರೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ಹಿಂದೂ ಜಾಗರಣಾ ವೇದಿಕೆಯು ಈಗಾಗಲೇ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ಮೂಡಬಿದ್ರೆ ಪೋಲೀಸರಿಗೆ ದೂರನ್ನು ನೀಡಿದ್ದು, ದೂರಿನಲ್ಲಿ ಆಕ್ರಮ ಕಸಾಯಿಖಾನೆ ಹಾಗೂ ಕಳ್ಳಸಾಗಾಟಣೆಗೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ. ಆಕ್ರಮ ಕಸಾಯಿಖಾನೆ ಮತ್ತು ಗೋವುಗಳ ಕಳ್ಳಸಾಗಾಟಣೆಯಿಂದಾಗಿ ಮೂಡಬಿದ್ರೆಯಲ್ಲಿ ಶಾಂತಿ ಸೌಹಾರ್ದಕ್ಕೆ ಧಕ್ಕೆ ಉಂಟಾಗುತ್ತಿದೆ. ಕ್ಲಾರೆನ್ಸ್ ಆಲ್ವನ್ ಲೋಬೋ ಮತ್ತು ಗಿಲ್ನಟ್ ð ಮೀರಾಂದ ಅವರು ತಮ್ಮ ಮನೆ ಮತ್ತು ಜಮೀನಿಲ್ಲಿ ರಾಜಾರೋಷವಾಗಿ ಯಾವುದೇ ಭಯವಿಲ್ಲದೆÀ ಆಕ್ರಮ ಗೋವುಗಳ ಕಸಾಯಿಖಾನೆಯನ್ನು ನಿರ್ಮಾಣ ಮಾಡಿದ್ದು, ಮೂಡಬಿದ್ರೆ ಪೋಲೀಸರು ಗಿಲ್ಬರ್ಟ್ ಮಿರಾಂದ ಅವರ ಜಮೀನನು ಪರಿಶೀಲನೆ ಮಾಡಿದಾಗ ಅನೇಕ ಗೋವುಗಳು ಹತ್ಯೆಯಾಗಿರುವ ಆವಶೇಷಗಳು ಕಂಡು ಬಂದಿದೆ. ಈ ರೀತಿಯಾಗಿ ದೊಡ್ಡ ಮಟ್ಟದಲ್ಲಿ ಗೋವುಗಳ ಆಕ್ರಮ ಕಸಾಯಿಖಾನೆಗಳು ನಡೆಯುತ್ತಿರುವ ವಿಚಾರ ಪೋಲೀಸರಿಗೆ ತಿಳಿದಿದ್ದರೂ ಈ ಬಗ್ಗೆ ಯಾವುದೇ ಕಾನೂನು ಕ್ರಮ ಕೈಗೊಳ್ಳದೆ ಇದ್ದಲ್ಲಿ ಇಂತಹ ಆಕ್ರಮ ಗೋವುಗಳ ಕಸಾಯಿಖಾನೆಯ ವಿರುದ್ದ ಹಿಂದೂ ಜಾಗರಣಾ ವೇದಿಕೆ ಸಂಘಟನೆಯು ಉಗ್ರ ಹೋರಾಟವನ್ನ ಮಾಡಲು ಸಿದ್ದವಾಗಿದೆ. ಗೋವುಗಳ ಆಕ್ರಮ ಕಸಾಯಿಖಾನೆಯನ್ನು ಜಮೀನು ಮತ್ತು ಮನೆಯಲ್ಲಿ ನಡೆಸುತ್ತಿರುವ ಗಿಲ್ಬರ್ಟ್ ಮಿರಾಂದ ಅವರ ವಿರುದ್ದ ಕಠಿಣ ಕಾನೂನು ಕ್ರಮವನ್ನು ಕೈಗೊಂಡು ಗೋವುಗಳ ಆಕ್ರಮ ಕಸಾಯಿಖಾನೆ ಉಪಯೋಗ ಮಾಡಿದಂತಹ ಜಮೀನು ಮತ್ತು ಮನೆಯನ್ನು ಮುಟ್ಟುಗೊಲು ಹಾಕಿ ಕಠಿಣ ಕಾನೂನು ಕ್ರಮ ಕೈಗೋಳ್ಳಬೇಕಾಗಿ ಪೋಲೀಸ್ ಇಲಾಖೆಗೆ ಹಿಂದೂ ಜಾಗರಣಾ ವೇದಿಕೆ ಮನವಿಯನ್ನು ಸಲ್ಲಿಸಿದೆ.