Recent Posts

Monday, January 20, 2025
ಸುದ್ದಿ

ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಉಳ್ಳಾಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುರಿಯದಲ್ಲಿ ಸ್ವಚ್ಛತಾ ಕಾರ್ಯ ಸ್ವಚ್ಛತೆ – ಕಹಳೆ ನ್ಯೂಸ್

ಪುತ್ತೂರು: ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಉಳ್ಳಾಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಕುರಿಯದಲ್ಲಿ ಸ್ವಚ್ಛತಾ ಕಾರ್ಯ ಸ್ವಚ್ಛತೆ ಎಂಬುದು ಭಾರತೀಯ ಸಂಸ್ಕೃತಿಯ ಒಂದು ಅಂಗವಾಗಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಇಡೀ ದೇಶವೇ ಮತ್ತೊಮ್ಮೆ ಸ್ಪೂರ್ತಿ ಪಡೆದುಕೊಂಡು ಸ್ವಚ್ಛ ದೇಶವಾಗುತ್ತ ಕಾಲಿಡುತ್ತಿದೆ ಎಂದು ಉಳ್ಳಾಲ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಮಧು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಳ್ಳಾಲ ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನ ಕುರಿಯ ಗ್ರಾಮ ಮತ್ತು ವಿಷ್ಣು ಸೇವಾ ಸಮಿತಿ ಕುರಿಯ ಇದರ ಸಹಕಾರದೊಂದಿಗೆ 14ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವದ ಪ್ರಯುಕ್ತ ನರೇಂದ್ರ ಪದವಿಪೂರ್ವ ಕಾಲೇಜು ತೆಂಕಿಲ ಇದರ ಗ್ರಾಮ ವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ಕರ‍್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ತಿರುಮಲೇಶ್ವರ ಭಟ್, ಶ್ರೀಕೃಷ್ಣ ಬೊಳಂತಿಮಾರು, ಗ್ರಾಮಸ್ಥರಾದ ಪ್ರೀತಮ್ ಮತ್ತು ವಿನ್ಯಾಸ್, ಗ್ರಾಮವಿಕಾಸ ಸಮಿತಿಯ ಸಂಯೋಜಕರಾದ ಸತೀಶ್,ಉಪನ್ಯಾಸಕರಾದ ಕಾರ್ತಿಕ್ ಕುಮಾರ್ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಬಳಿಕ ನರೇಂದ್ರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ದೇವಸ್ಥಾನದ ಅಂಗಣ ಹಾಗೂ ಪರಿಸರ ಶುಚಿಗೊಳಿಸಿದರು.