Recent Posts

Sunday, January 19, 2025
ಯಕ್ಷಗಾನ / ಕಲೆಸಿನಿಮಾಸುದ್ದಿ

ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ಶೆಟ್ಟಿ ಆಸೆ; ಮಂಗಳೂರಿನ ಪಿಲಿನಲಿಕೆ ಪ್ರದರ್ಶಿಸಿದ ಪುತ್ತೂರಿನ “ಟೀಮ್ ಕಲ್ಲೇಗ ಟೈಗರ್ಸ್”- ಕಹಳೆ ನ್ಯೂಸ್

ಪುತ್ತೂರಿನಲ್ಲಿ ಎಲ್ಲರ ಮನಗೆದ್ದು ಹತ್ತೂರಿಗೆ ಹೆಸರುವಾಸಿಯಾಗಿರುವ ಕಲ್ಲೇಗ ಟೈಗರ್ಸ್ ಇದೀಗ ಬಿಗ್‌ಬಾಸ್ ವೇದಿಕೆಯಲ್ಲಿ ಕಮಾಲ್ ಎಬ್ಬಿಸಿದೆ. ಹೌದು ಕನ್ನಡದ ಒಟಿಟಿಯಲ್ಲಿ ನಡೆದ ಬಿಗ್‌ಬಾಸ್‌ನಲ್ಲಿ ಗೆದ್ದು, ಬಿಗ್‌ಬಾಸ್ ಸೀಸನ್9ರ ಸ್ಪರ್ಥಿಯಾಗಿ ಬಿಗ್ ಮನೆಗೆ ಕಾಲಿಟ್ಟ ನಟ ರೂಪೇಶ್ ಶೆಟ್ಟಿ ಒಂದಿಲ್ಲೊಂದು ವಿಚಾರಗಳ ಮೂಲಕ ಸುದ್ದಿಯಾಗಿ ಪ್ರೇಕ್ಷಕರಿಗೆ ನೂರಕ್ಕೆ ನೂರರಷ್ಟು ಮನರಂಜನೆಯನ್ನ ನೀಡುತ್ತಾ ಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಬಿಗ್‌ಬಾಸ್ ಸೀಸನ್9 ಪೈನಲ್ ಹಂತಕ್ಕೆ ತಲುಪಿದ್ದು, ಕೊನೆಯ ವಾರದ ಅಖಾಡಕ್ಕೆ ಸ್ಫರ್ಥಿಗಳು ಎಂಟ್ರಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ರೂಪೇಶ್ ಶೆಟ್ಟಿ ತನ್ನ ಆಸೆಯನ್ನ ಬಿಗ್‌ಬಾಸ್ ಮನೆಯಲ್ಲಿ ಇಡೇರಿಸುವಂತೆ ಕೇಳಿಕೊಂಡಿದ್ದಾರೆ.

ಅದೇನಪ್ಪ ಅಂದ್ರೆ ‘ಮಂಗಳೂರು ದಸರಾ ಪ್ರಮುಖ ವಿಶೇಷತೆ ಹುಲಿ ನೃತ್ಯ. ಆ ಹುಲಿ ವೇಷ ಧರಿಸಿ ಬಿಗ್‌ಬಾಸ್ ಮನೆಯಲ್ಲಿ ಹುಲಿ ನೃತ್ಯಗಾರರೊಂದಿಗೆ ತಾನೂ ಹುಲಿ ನೃತ್ಯ ಮಾಡಬೇಕು’ ಎಂದು ಹೇಳಿಕೊಂಡಿದ್ದಾರೆ.

ಇದೀಗ ಬಿಗ್‌ಬಾಸ್ ಮನೆಯಲ್ಲಿ ತಾಸೆಯ ಪೆಟ್ಟಿಗಳು ಪಿಲಿನಲಿಕೆಯ ಅಬ್ಬರ ಜೋರಾಗಿ ಕೇಳಿಸಿದ್ದು, ಕಲ್ಲೇಗ ಟೈಗರ್ಸ್ ತಂಡ ಜಬರ್ದಸ್ತ್ ಆಗಿ ಕುಣಿದಿದೆ. ಈ ಎಪಿಸೋಡ್ ನಾಳೆ ಪ್ರಸಾರವಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.