Sunday, January 19, 2025
ದಕ್ಷಿಣ ಕನ್ನಡಪುತ್ತೂರುರಾಜ್ಯಸುದ್ದಿ

ಹಿಂದೂ ಭಜಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ಅಮಾನತ್ತುಗೊಳಿಸಿ, ಬಂಧಿಸಲು ಹಿಂದೂ ಸಂಘಟನೆಗಳ ಆಗ್ರಹ ; ಸರಕಾರಕ್ಕೆ ಒಂದು ದಿನದ ಗಡುವು – ಸ್ಥಳೀಯ ಶಾಸಕ, ಸಚಿವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ ಹಿಂದೂ ಸಂಘಟನೆಗಳು – ಕಹಳೆ ನ್ಯೂಸ್

ಪುತ್ತೂರು: ಹಿಂದೂ ಭಜಕರ ವಿರುದ್ಧ ಅವಹೇಳನಕಾರಿ ಬರಹ ಇದೀಗ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಅರಣ್ಯ ಇಲಾಖೆ ಅಧಿಕಾರಿಯ ಅಮಾನತಿಗೆ ಹಿಂದೂ ಸಂಘಟನೆಗಳ ಪಟ್ಟು ಹಿಡಿದಿವೆ. ನಾಳೆ ತನಕ ಅಧಿಕಾರಿ ಹಾಗು ಜನಪ್ರತಿನಿಧಿಗಳಿಗೆ ಗಡುವು ನೀಡಲಾಗಿದೆ. ತಪ್ಪಿದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಐದು ಪೋಲೀಸ್ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಭಜರಂಗದಳ ದಕ್ಷಿಣ ಪ್ರಾಂತ ಸಹಸಂಯೋಜಕ್ ಮುರಳೀಕೃಷ್ಣ ಹಸಂತಡ್ಕ ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ಭಜಕರ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಅರಣ್ಯ ಅಧಿಕಾರಿ ಸಂಜೀವ ಪೂಜಾರಿ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಪ್ರವಾದಿ ಬಗ್ಗೆ ಪೋಸ್ಟ್ ಮಾಡಿದ ಹಿಂದೂ ಯುವಕನನ್ನು ಪೋಲೀಸರು ತಕ್ಷಣ ಬಂಧಿಸಿದ್ದಾರೆ.

ಆದರೆ ಹಿಂದೂಗಳ ಆಚರಣೆಯ ಬಗ್ಗೆ ಬರೆದ ಅಧಿಕಾರಿಯ ಮೇಲೆ ಕ್ರಮಕ್ಕೆ ಮೀನಾಮೇಷ ಎಣಿಸಲಾಗುತ್ತಿದೆ. ಅಲ್ಲದೆ ಹಿಂದೂ ಭಜಕರ ಅವಹೇಳನಕಾರಿಯಾಗಿ ಬರೆದ ಅಧಿಕಾರಿಯನ್ನು ಸಮರ್ಥಿಸುವ ಕೆಲಸ ಆಗುತ್ತಿದೆ. ಕಾಂಗ್ರೆಸ್ ಮುಖಂಡ ಬಿ.ಕೆ.ಹರಿಪ್ರಸಾದ್, ಯು.ಟಿ.ಖಾದರ್ ಅಧಿವೇಶನದಲ್ಲಿ ಅಧಿಕಾರಿಯ ಪರ ಮಾತನಾಡುತ್ತಾರೆ.

ಹಿಂದೂಗಳ ಆಚರಣೆ ಬಗ್ಗೆ ಬರೆದವನ ಪರ ವಹಿಸುವ ಈ ಮುಖಂಡರು ಹಿಂದೂ ಯುವಕನ ಪರ ಯಾಕೆ ಮಾತಾಡಿಲ್ಲ? ಎಂದವರು ವಾಗ್ದಾಳಿ ನಡೆಸಿದರು.

ಅಧಿಕಾರಿಯನ್ನು ಅಮಾನತು ಮಾಡದೇ ಹೋದಲ್ಲಿ ಪ್ರತಿಭಟನೆಯನ್ನು ಹಂತ ಹಂತವಾಗಿ ಮಾಡಲಾಗುವುದು.

10 ಸಾವಿರ ಭಜಕರನ್ನು ಸೇರಿಸಿ ರಸ್ತೆ ತಡೆ ನಡೆಸಲಾಗುವುದು. ಅರಣ್ಯ ಇಲಾಖೆಯ ಎಲ್ಲಾ ಕಛೇರಿ ಮುಂದೆಯೂ ಪ್ರತಿಭಟಿಸಲಾಗುವುದು ಎಂದು ಸರಕಾರ ಮತ್ತು ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದ್ದಾರೆ.