Sunday, January 19, 2025
ಕ್ರೈಮ್ರಾಜ್ಯರಾಮನಗರಸುದ್ದಿ

ದೈಹಿಕ ಸಂಬಂಧದ ದೃಶ್ಯಗಳನ್ನು ವೀಡಿಯೋ ಮಾಡಿಟ್ಟುಕೊಂಡು ಪದೇಪದೆ ಅಕ್ರಮ ಸಂಬಂಧಕ್ಕಾಗಿ ವಿವಾಹಿತ ಮಹಿಳೆಯ ಬ್ಲಾಕ್​ಮೇಲ್​ ; ಒಲ್ಲೆ ಎಂದ್ರೂ ಅಕ್ರಮ ಸಂಬಂಧ ಮುಂದುವರಿಸಲು ಪೀಡಿಸುತ್ತಿದ್ದ ಮಹಿಳೆಯ ದುರಂತ ಅಂತ್ಯ..! – ಕಹಳೆ ನ್ಯೂಸ್

ಕನಕಪುರ: ವಿವಾಹಿತ ಮಹಿಳೆಯ ಹತ್ಯೆ ಪ್ರಕರಣವನ್ನು ಒಂದೇ ದಿನದಲ್ಲಿ ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಗರದ ಕುರುಪೇಟೆ ಕೆರೆಬೀದಿ ನಿವಾಸಿ ಹನುಮಂತ(30) ಕೊಲೆ ಆರೋಪಿ. ಶ್ರುತಿ(32) ಕೊಲೆಯಾದವಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕನಕಪುರ ನಗರದ ಕುರುಪೇಟೆಯ ಶ್ರುತಿ ಪಕ್ಕದ ಬೀದಿಯ ಹನುಮಂತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.

ಈಕೆ ವಿವಾಹಿತೆ. ಹನುಮಂತನೊಂದಿಗೆ ಕಳೆದ ಖಾಸಗಿ ಕ್ಷಣಗಳನ್ನ ವಿಡಿಯೋ ಮಾಡಿಟ್ಟುಕೊಂಡಿದ್ದ ಶ್ರುತಿ ಮದುವೆ ಆಗುವಂತೆ ಪೀಡಿಸುತ್ತಿದ್ದಳು. ಅಲ್ಲದೆ ಆಗಾಗ ಮಧ್ಯರಾತ್ರಿ ಬರುವಂತೆಯೂ ಒತ್ತಾಯಿಸುತ್ತಿದ್ದಳು. ಸಾಕು ಇನ್ಮುಂದೆ ಅಕ್ರಮ ಸಂಬಂಧ ಮುಂದುವರಿಸೋಕೆ ಇಷ್ವವಿಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದ ಹನುಮಂತನಿಗೆ, ನೀನು ತನ್ನೊಂದಿಗೆ ಕಳೆದ ಖಾಸಗಿ ಕ್ಷಣಗಳ ವಿಡಿಯೋ ನನ್ನ ಬಳಿ ಇದೆ. ನಾನು ಕರೆದ ಕೂಡಲೇ ಬರಬೇಕು. ಇಲ್ಲವಾದರೆ ಅದನ್ನು ಜಾಲತಾಣಗಳಿಗೆ ಹರಿಬಿಡುತ್ತೇನೆಂದು ಬ್ಲಾಕ್​​ಮೇಲ್​ ಮಾಡುತ್ತಿದ್ದಳು.

ಶ್ರುತಿ ಬೇರೆಯದೇ ದಂಧೆಯಲ್ಲಿ ತೊಡಗಿದ್ದಾಳೆಂದು ತಿಳಿದ ಹನುಮಂತ, ವಿವಾಹಿತೆಯ ಜತೆ ಸಂಬಂಧ ಬೇಡವೆಂದು ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದ. ಆದರೆ ಅಕ್ರಮ ಸಂಬಂಧಕ್ಕಾಗಿ ಶ್ರುತಿ ಬ್ಲಾಕ್​ಮೇಲ್​ ಮಾಡುತ್ತಾ ಪದೇಪದೆ ಚಿತ್ರಹಿಂಸೆ ನೀಡುತ್ತಿದ್ದಳಂತೆ. ಇವಳ ವರ್ತನೆಯಿಂದ ಬೇಸತ್ತು ಹನುಮಂತ, ಭಾನುವಾರ(ಡಿ.25) ಅವಳಿಗೆ ಮದ್ಯಪಾನ ಮಾಡಿಸಿ, ದೈಹಿಕ ಸಲುಗೆ ಬೆಳೆಸಿ ಮಾರಣ್ಣನದೊಡ್ಡಿ ಗೇಟ್​ ರಸ್ತೆ ಬಳಿ ಕರೆದೊಯ್ದಿದ್ದ. ಬಳಿಕ ಬೆಲ್ಟ್​ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದ.

ಸೋಮವಾರ ಬೆಳಗ್ಗೆ ವಿಷಯ ತಿಳಿದ ಸಾತನೂರು ಪೊಲೀಸರು ಹಾಗೂ ಸರ್ಕಲ್​ ಇನ್​ಸ್ಪೆಕ್ಟರ್​ ಕೆ.ಎಲ್​.ಕೃಷ್ಣ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ದೊರೆತ ಮೊಬೈಲ್​ನಿಂದ ಆರೋಪಿಯನ್ನು 24 ತಾಸಿನಲ್ಲಿ ಅಂದರೆ ಸೋಮವಾರ ತಡರಾತ್ರಿಯೇ ಬಂಧಿಸಿದ್ದಾರೆ. ದೈಹಿಕ ಸಂಬಂಧದ ದೃಶ್ಯಗಳನ್ನು ವೀಡಿಯೋ ಮಾಡಿಟ್ಟುಕೊಂಡು ಪದೇಪದೆ ಅಕ್ರಮ ಸಂಬಂಧಕ್ಕಾಗಿ ಬ್ಲಾಕ್​ಮೇಲ್​ ಮಾಡುತ್ತಿದ್ದಳು. ಇದನ್ನು ತಡೆಯಲಾಗದೆ ಆಕೆಯನ್ನ ಕೊಲೆ ಮಾಡಿದ್ದಾಗಿ ಆರೋಪಿ ಪೊಲೀಸರ ಬಳಿ ಬಾಯ್ಬಿಟ್ಟಿದ್ದಾನೆ.