Saturday, November 23, 2024
ಕ್ರೈಮ್ರಾಷ್ಟ್ರೀಯಸುದ್ದಿ

​ಜಮ್ಮು ಮತ್ತು ಕಾಶ್ಮೀರದ ಸಿದ್ರಾದಲ್ಲಿ ಟ್ರಕ್​ನಲ್ಲಿ ಅಡಗಿದ್ದ ಮೂವರು ಜಿಹಾದಿ ಭಯೋತ್ಪಾದಕರ ಎನ್​ಕೌಂಟರ್ – ಕಹಳೆ ನ್ಯೂಸ್


ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸಿದ್ರಾದಲ್ಲಿ ಅಡಗಿಕೊಂಡಿದ್ದ ಮೂವರು ಭಯೋತ್ಪಾದಕರನ್ನು ಭಾರತೀಯ ಭದ್ರತಾಪಡೆ ಎನ್​ಕೌಂಟರ್​ ಮಾಡಿದೆ.

ಸಿದ್ರಾದಲ್ಲಿ ಬುಧವಾರ ಬೆಳಗ್ಗೆ ಅನುಮಾನಾಸ್ಪದವಾಗಿ ಚಲನೆ ಮಾಡುತ್ತಿದ್ದ ಟ್ರಕ್​ ಅನ್ನು ಚೆಕ್​ಪೋಸ್ಟ್​ ಬಳಿ ಭದ್ರತಾ ಪಡೆ ತಡೆದಿದ್ದು, ವಾಹನ ತಪಾಸಣೆ ವೇಳೆ ಚಾಲಕ ಪರಾರಿಯಾಗಿದ್ದಾನೆ.

ಟ್ರಕ್​ನಲ್ಲಿದ್ದ ಮೂವರು ಉಗ್ರರು ಗುಂಡಿನ ದಾಳಿ ನಡೆಸಿದ್ದು, ಭದ್ರತಾಪಡೆಯೂ ಪ್ರತಿ ದಾಳಿ ಮಾಡಿದೆ.

ಮಿಂಚಿನ ಕಾರ್ಯಾಚರಣೆ ನಡೆಸಿದ ಭಾರತೀಯ ಸೇನಾಪಡೆ, ಮೂವರು ಉಗ್ರರನ್ನು ಹೊಡೆದುರುಳಿಸಿದೆ ಜಮ್ಮು-ಕಾಶ್ಮೀರದ ಎಡಿಜಿಪಿ ಹೇಳಿದ್ದಾರೆ. ಎನ್‌ಕೌಂಟರ್ ಸ್ಥಳದಿಂದ ಒಬ್ಬ ಭಯೋತ್ಪಾದಕನ ಶವವನ್ನು ಈಗಾಗಲೇ ಹೊರತೆಗೆಯಲಾಗಿದೆ. ಗುಂಡಿನ ಚಕಮಕಿಯಲ್ಲಿ ಟ್ರಕ್​ಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಕರೆಸಲಾಗಿದೆ. ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳೊಂದಿಗೆ ಉಗ್ರರು ಅಡಗಿದ್ದಾರೆಂದು ಭದ್ರತಾ ಪಡೆ ಶಂಕಿಸಿದ್ದು, ಈ ಪ್ರದೇಶವನ್ನು ಬಂದ್​ ಮಾಡಿದ್ದು, ಹೆದ್ದಾರಿಯಲ್ಲಿ ವಾಹನ ಸಂಚಾರವನ್ನೂ ನಿಷೇಧಿಸಲಾಗಿದೆ. (ಏಜೆನ್ಸೀಸ್​)