ಪರಭಾಷಿಕರ ಎದುರು ಮತ್ತೊಮ್ಮೆ ಭೇಷ್ ಗಿರಿ ಗಿಟ್ಟಿಸಿಕೊಂಡ ಕಿರಿಕ್ ಬೆಡಗಿ : ರಶ್ಮಿಕಾ ಮಂದಣ್ಣ ಸಖತ್ ಸಿಂಪಲ್ ಎಂದ ಕಾಲಿವುಡ್ ಮಂದಿ – ಕಹಳೆ ನ್ಯೂಸ್
ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ಸಿನಿಮಾ ಯಶಸ್ಸಿನ ಜೊತೆ ಜೊತೆಯಲ್ಲಿ ಒಂದಿಲ್ಲೊಂದು ಕಿರಿಕ್ಗಳನ್ನು ಮಾಡಿಕೊಳ್ಳುವ ಮೂಲಕ ಸುದ್ದಿಯಾಗುತ್ತಲೇ ಇರ್ತಾರೆ. ಪೊಗರು ಸಿನಿಮಾದ ಬಳಿಕ ಸ್ಯಾಂಡಲ್ವುಡ್ನಿಂದ ಅಂತರ ಕಾಯ್ದುಕೊಂಡಿರುವ ರಶ್ಮಿಕಾ ಮಂದಣ್ಣ ಕಾಲಿವುಡ್ ಹಾಗೂ ಬಾಲಿವುಡ್ನಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ತಮಿಳು ಭಾಷೆಯ ವಾರಿಸು ಸಿನಿಮಾದಲ್ಲಿ ದಳಪತಿ ವಿಜಯ್ಗೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ .
ಕೆಲವು ದಿನಗಳ ಹಿಂದೆಯಷ್ಟೇ ವಾರಿಸು ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ನಟಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಪೂರೈಸಿದ ಬಳಿಕ ಕಾರಿನಲ್ಲಿ ತೆರಳುತ್ತಿದ್ದ ರಶ್ಮಿಕಾ ಮಂದಣ್ಣರನ್ನು ಅಭಿಮಾನಿಗಳು ಬೈಕ್ನಲ್ಲಿ ಫಾಲೋ ಮಾಡಿದ್ದಾರೆ. ಯುವಕರು ಕಾರು ಫಾಲೋ ಮಾಡ್ತಿರೋದನ್ನು ಗಮನಿಸಿದ ರಶ್ಮಿಕಾ ಕಾರು ನಿಲ್ಲಿಸಿ ಕೊಟ್ಟ ಪ್ರತಿಕ್ರಿಯೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಚೆನ್ನೈನ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ರಶ್ಮಿಕಾ ಮಂದಣ್ಣ ಆಡಿಯೋ ಲಾಂಚ್ ಕಾರ್ಯಕ್ರಮ ಮುಗಿಸಿ ಹೋಟೆಲ್ಗೆ ತೆರಳುತ್ತಿದ್ದ ವೇಳೆಯಲ್ಲಿ ಕೆಲವು ಯುವಕರು ರಶ್ಮಿಕಾರನ್ನು ಫಾಲೋ ಮಾಡಿದ್ದಾರೆ. ಕಾರು ನಿಲ್ಲಿಸಿ ಯುವಕರನ್ನು ಮಾತನಾಡಿಸಿದ ರಶ್ಮಿಕಾ ಮಂದಣ್ಣ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಿ ಅಂತಾ ಸಲಹೆ ನೀಡಿದ್ದಾರೆ. ಅದಕ್ಕೆ ಅಭಿಮಾನಿಗಳು ಓಕೆ ಎಂದಿದ್ದಾರೆ. ಈಗಲೇ ಹೆಲ್ಮೆಟ್ ಹಾಕಿಕೊಳ್ಳಿ ಎಂದು ಹೇಳಿದ ರಶ್ಮಿಕಾ ಹೋಟೆಲ್ನತ್ತ ಮುಖ ಮಾಡಿದ್ದಾರೆ. ರಶ್ಮಿಕಾ ಮಂದಣ್ಣರಿಗೆ ಸೊಕ್ಕು ಎಂದು ಯಾರೇ ಹೇಳಿದರೂ ಈ ವಿಡಿಯೋ ನೋಡಿದ್ರೆ ಸಾಕು ಅವರ ಸಾಮಾಜಿಕ ಕಳಕಳಿ ಏನು ಎಂಬುದು ಅರ್ಥವಾಗುತ್ತೆ ಅಂತಾ ಕಾಲಿವುಡ್ ಮಂದಿ ಮಾತನಾಡಿಕೊಳ್ತಿದ್ದಾರೆ.