Sunday, January 19, 2025
ಬೆಂಗಳೂರುರಾಜ್ಯಸುದ್ದಿ

ಅಡಕೆ ಬೆಳೆಗೆ ಇನ್ನು ಮುಂದೆ ಭವಿಷ್ಯವಿಲ್ಲ.! ಸರ್ಕಾರ ಜಾಗೃತಿ ಮೂಡಿಸುವುದು ಒಳ್ಳೆಯದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ – ಕಹಳೆ ನ್ಯೂಸ್ 

ಬೆಳಗಾವಿ: ಅಡಕೆ ಬೆಳೆಗೆ ಇನ್ನು ಮುಂದೆ ಭವಿಷ್ಯವಿಲ್ಲ. ಆದ್ದರಿಂದ ಈ ಬಗ್ಗೆ ಸರ್ಕಾರ ಜಾಗೃತಿ ಮೂಡಿಸುವುದು ಒಳ್ಳೆಯದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಡಕೆ ಬೆಳೆ ಬಗ್ಗೆ ಚರ್ಚೆ ನಡೆಯುವ ಹೊತ್ತಿನಲ್ಲಿ ಮಧ್ಯಪ್ರವೇಶಿಸಿದ ಸಚಿವರು, ಆಂಧ್ರಪ್ರದೇಶದಲ್ಲಿ 2 ಲಕ್ಷ ಹೆಕ್ಟೇರ್​ನಲ್ಲಿ ಅಡಕೆ ಹಾಕಲಾಗಿದೆ.

ಬಯಲು ಸೀಮೆಯಲ್ಲಿ ಅಡಕೆ ಕೃಷಿ ವ್ಯಾಪಿಸಿಕೊಳ್ಳುತ್ತಿದೆ. ವರ್ಷದಲ್ಲಿ 1 ಕೋಟಿ ಅಡಕೆ ಸಸಿ ನರ್ಸರಿಗಳಲ್ಲಿ ಖಾಲಿಯಾಗಿವೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಇನ್ನು 5-10 ವರ್ಷದಲ್ಲಿ ಅಡಕೆ ಬೆಳೆಗಾರರು ಬೀದಿಗೆ ಬರುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅಡಕೆಗೆ ಭಾರಿ ಬೆಲೆ ಬಂದಿದ್ದು ದೊಡ್ಡ ಸಮಸ್ಯೆಯಾಗಿದೆ. ಎಲ್ಲರೂ ಸಾಲಸೋಲ ಮಾಡಿಯಾದರೂ ಅಡಕೆ ಕೃಷಿಗೆ ಮುಂದಾಗುತ್ತಿದ್ದಾರೆ. ಆದರೆ, ಮುಂಬರುವ ದಿನಗಳಲ್ಲಿ ಅಡಕೆ ಕೃಷಿಕನ ಕೈ ಹಿಡಿಯದು. ಸರ್ಕಾರ ಈಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ನಿಯಮ 69 ಅಡಿಯಲ್ಲಿ ನಡೆಯುತ್ತಿದ್ದ ಚರ್ಚೆಯಲ್ಲಿ ಪಾಲ್ಗೊಂಡ ಶಾಸಕ ಎಚ್.ಡಿ. ರೇವಣ್ಣ, ನಾನು ಕೂಡ 40 ಎಕರೆಯಲ್ಲಿ ಅಡಕೆ ಹಾಕಿದ್ದೇನೆ ಎಂದದ್ದು ಚರ್ಚೆ ಇನ್ನಷ್ಟು ಕಾವೇರಲು ಕಾರಣವಾಯಿತು. ಕೇಂದ್ರ ಸರ್ಕಾರ ಅಡಕೆ ಆಮದನ್ನು ನಿಲ್ಲಿಸಬೇಕು ಎಂದು ಜೆಡಿಎಸ್​ನ ಅನ್ನದಾನಿ ಆಗ್ರಹಿಸಿದರು.