Recent Posts

Sunday, January 19, 2025
ದಕ್ಷಿಣ ಕನ್ನಡಬಂಟ್ವಾಳ

ವಾಹನದಲ್ಲಿ ಗೋ ಸಾಗಾಟ ಮಾಡಿದ್ರೆ ಸಿಕ್ಕಿಬೀಳುತ್ತೇವೆ..! ರಸ್ತೆಯಲ್ಲಿ ನಡೆಸಿಕೊಂಡು ಹೋಗಿ ಅಕ್ರಮ ಗೋ ಸಾಗಾಟಕ್ಕೆ ಯತ್ನ : ಹೊಸ ಪ್ಲಾನ್ ಮಾಡಿದ ಖದೀಮನನ್ನ ಪೋಲೀಸರಿಗೆ ಒಪ್ಪಿಸಿದ ವಿಶ್ವಹಿಂದೂ ಪರಿಷತ್ ಬಜರಂಗದಳ – ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ರಮ ಗೋ ಸಾಗಾಟ ಮಾಡಿ ಇದೀಗ ಆರೋಪಿ ಪೊಲೀಸರ ವಶವಾಗಿರುವ ಘಟನೆ ಕಾವೂರಿನಲ್ಲಿ ನಡೆದಿದೆ. ಅಕ್ರಮ ವಧೆವಾಗಿ ಗೋವುಗಳನ್ನ ವಾಹನದಲ್ಲಿ ತೆಗೆದುಕೊಂಡು ಹೋದರೆ ಸಿಕ್ಕಿಬೀಳುತ್ತೇವೆ ಎಂದು, ಗೋವಿನ ಕುತ್ತಿಗೆಗೆ ಹಗ್ಗ ಕಟ್ಟಿ ನಡೆಸಿಕೊಂಡು ಹೋಗುತ್ತಿದ್ದ ಶಿವಾನಂದ ಎಂಬ ಖದೀಮನನ್ನ ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ್ದಾರೆ.

ಇಂದು ಮದ್ಯಾಹ್ನ ಕಾವೂರಿನ ಆಕಾಶಭವನ ನಂದನಪುರವಾಗಿ ವ್ಯಕ್ತಿಯೊಬ್ಬರು ತೆರಳುತ್ತಿದ ಸಂದರ್ಭದಲ್ಲಿ, ರಸ್ತೆಯಲ್ಲಿ ಶಿವಾನಂದ ದನವನ್ನ ಎಳೆದುಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಬಳಿಕ ಈತನನ್ನ ನಿಲ್ಲಿಸಿ ದನವನ್ನ ರಸ್ತೆಯಲ್ಲಿ ಓಡಿಸಿಕೊಂಡು ಹೋಗುತ್ತಿರುವ ಬಗ್ಗೆ ವಿಚಾರಿಸಿದಾಗ ಆ ವ್ಯಕ್ತಿಯೂ ಗಲಿಬಿಲಿಗೊಂಡಿದ್ದಾನೆ. ಮತ್ತೆ ಮತ್ತೆ ವಿಚಾರಿಸಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ಮುಲ್ಲಕಾಡು ಬಳಿಯಲ್ಲಿದ್ದ ಜಾನುವಾರನ್ನು ಕಳ್ಳತನ ಮಾಡಿ, ವಧೆ ಮಾಡೋದಿಕ್ಕಾಗಿ ಕುಂಜತ್ತಬೈಲ್ ರಿಯಾಜ್ ಎಂಬವರಿಗೆ ಮಾರಾಟ ಮಾಡಲು ದನವನ್ನ ತೆಗೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿಸಿದ್ದಾನೆ.

ವಿಚಾರ ತಿಳಿಯುತ್ತಿದ್ದಂತೆ ಈ ಬಗ್ಗೆ ವಿಶ್ವಹಿಂದೂ ಪರಿಷತ್ ಬಜರಂಗದಳದವರಿಗೆ ಮಾಹಿತಿ ನೀಡಲಾಗಿದ್ದು, ಶಿವನಂದನನ್ನ ಪೊಲೀಸರಿಗೆ ಒಪ್ಪಿಸಲಾಗಿದೆ. ಈತ ತೆಗೆದುಕೊಂಡು ಹೋಗುತ್ತಿದ್ದ ಹೋರಿಯನ್ನ ಕಾವೂರು ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ..

ವಾಹನದಲ್ಲಿ ಅಕ್ರಮ ಗೋ ಸಾಗಾಟ ಮಾಡಿದ್ರೆ ಸಿಕ್ಕಿಬೀಳುತ್ತೇವೆ ಎನ್ನುವ ಉದ್ದೇಶದಿಂದ ಗೋಖದೀಮ ಹೊಸ ಪ್ಲಾನ್ ಮಾಡಿ ದನವನ್ನ ರಸ್ತೆಯಲ್ಲಿ ನಡೆಸಿಕೊಂಡು ಹೋಗಿದ್ದಾನೆ. ಆದ್ರೆ ಸದಾ ಗೋಮಾತೆಯ ರಕ್ಷಣೆಯನ್ನ ಮಾಡುತ್ತಾ ಬಂದಿರುವ ವಿಶ್ವಹಿಂದೂ ಪರಿಷತ್ ಬಜರಂಗದಳ ಕಾರ್ಯಕರ್ತರು ಗೋ ಸಾಗಾಟ ಮಾಡ್ತಾ ಇದ್ದ ಖದೀಮನನ್ನ ಖಾಕಿ ಕೈಗೊಪ್ಪಿಸಿದೆ.