ಮಂಗಳೂರು : 800 ಬೀದಿನಾಯಿಗಳ ಊಟಕ್ಕೆ ಸೀಮೆಎಣ್ಣೆ ಸುರಿದ ಕಿಡಿಗೇಡಿ ಮಹಿಳೆ : ಬೇಸರ ವ್ಯಕ್ತಪಡಿಸಿದ ಶ್ವಾನ ಪ್ರಿಯೆ ರಜನಿ ಶೆಟ್ಟಿ ಬೇಸರ – ಕಹಳೆ ನ್ಯೂಸ್
ಮಂಗಳೂರು : ನಾಯಿಗಳಿಗೆಂದು ಬೇಯಿಸಿಟ್ಟ ಅನ್ನಕ್ಕೆ ಮಹಿಳೆಯೋರ್ವರು ಸೀಮೆಎಣ್ಣೆ ಸುರಿದಿರುವ ಅಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಬಳ್ಳಾಲ್ ಭಾಗ್ ನಿವಾಸಿಯಾಗಿರುವ ರಜನಿ ಶೆಟ್ಟಿಯವರು ಮನೆಯಲ್ಲಿಯೇ 38 ಬೀದಿ ನಾಯಿ ಸಹಿತ, ಬೆಕ್ಕು, ಗಿಡುಗ, ಕಾಗೆಗಳಿಗೆ ಆಶ್ರಯ ನೀಡಿದ್ದಾರೆ.
ಇವುಗಳಲ್ಲಿ ಬಹುತೇಕ ಪ್ರಾಣಿಗಳಿ ಗಾಯಾಳಿಂದ ಬಳಲುತ್ತಿವೆ. ಗಾಯಗಳಿಂದ ಬಳಲುತ್ತಿರುವ ಪ್ರಾಣಿಗಳಿಗೆ ಆರೈಕೆಯನ್ನೂ ಮಾಡುತ್ತಿದ್ದಾರೆ. ನಾಯಿಗಳು ಬೊಗಳುವುದರಿಂದ ಕಿರಿಕಿರಿ ಆಗುತ್ತಿದೆ ಎಂಬ ನೆಪವನ್ನೊಡ್ಡಿ ಸ್ಥಳೀಯ ಮಹಿಳೆ ಅಗ್ಗಾಗ್ಗೆ ಕಿರಿಕಿರಿ ಮಾಡುತ್ತಿದ್ದರು. ಅಲ್ಲದೇ ಆ ಕಿಡಿಗೇಡಿ ಮಹಿಳೆ ಸಹಿಸಿಕೊಳ್ಳಲು ಆಗದೆ ನಾಯಿಗಳಿಗೆ ಉಣಬಡಿಸಲು ಬೇಯಿಸಿಟ್ಟ ಆಹಾರಕ್ಕೇ ಸೀಮೆಎಣ್ಣೆ ಸುರಿದಿದ್ದಾಳೆ. ಪ್ರತಿನಿತ್ಯ 60 ಕೆ.ಜಿ. ಅನ್ನ ತಯಾರಿಸುವ ರಜನಿ ಶೆಟ್ಟಿಯವರು, ನಿತ್ಯ 800ಕ್ಕೂ ಅಧಿಕ ನಾಯಿಗಳಿಗೆ ಆಹಾರ ನೀಡುತ್ತಾರೆ.
ಸ್ವಾರ್ಥರಹಿತವಾಗಿ ಕೆಲಸ ಮಾಡುತ್ತಿರುವ ರಜನಿ ಶೆಟ್ಟಿ ಇದೀಗ ಸ್ಥಳೀಯ ಮಹಿಳೆಯ ಉಪಟಳ ಸಹಿಸಲಾರದೆ ಮನೆಯ ಸುತ್ತ ನಾಲ್ಕು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಅಲ್ಲದೇ ನಾಯಿಗಳು ಹೊರಹೋಗದಂತೇ ಬೇಲಿಯನ್ನು ಅಳವಡಿಸಿದ್ದಾರೆ. ಹಾಗೂ ಅಮಾನವೀಯವಾಗಿ ವರ್ತಿಸುವ ಸ್ಥಳೀಯ ಮಹಿಳೆಯ ವಿರುದ್ಧ ರಜನಿ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
800 ನಾಯಿಗಳಿಗೆ ಪ್ರತಿದಿನ ಊಟದ ವ್ಯವಸ್ಥೆ
ಕಳೆದ ಇಪ್ಪತ್ತೆರೆಡು ವರ್ಷಗಳಿಂದ ನಾಯಿಗಳಿಗೆ ಆಹಾರ ಹಾಕುತ್ತಿರುವ ರಜನಿ ಶೆಟ್ಟಿ, ಯಾವುದೇ ಸ್ವಾರ್ಥವಿಲ್ಲದೇ 800 ನಾಯಿಗಳಿಗೆ ಪ್ರತಿದಿನ ಊಟ ಹಾಕುತ್ತಿದ್ದಾರೆ. ಮೂಕ ಪ್ರಾಣಿಗಳ ಹಸಿವಿನ ರೋಧನೆ ನೋಡಿ ಆಹಾರ ಹಾಕಲು ಆರಂಭಿಸಿದ ಅವರು, ನಿತ್ಯ 60 ಕೆ.ಜಿ. ಅಕ್ಕಿ, ಚಿಕನ್ ವೇಸ್ಟ್ ಅನ್ನು ಬೇಯಿಸಿ ಆಹಾರ ತಯಾರು ಮಾಡುತ್ತಾರೆ. ಲಾಕ್‍ಡೌನ್ ಬಳಿಕ ರಜನಿ ಶೆಟ್ಟಿಯವರಿಗೆ ಸಾರ್ವಜನಿಕರ ಸಹಾಯಹಸ್ತ ಸಿಗಲಾರಂಭಿಸಿದೆ.
ಪ್ರಾಣಿ, ಪಕ್ಷಿಗಳ ಆರೈಕೆ ಮಾಡುತ್ತಿರುವ ರಜನಿ
ಕೇವಲ ಆಹಾರ ಮಾತ್ರವಲ್ಲದೇ ಪ್ರಾಣಿಗಳ ರಕ್ಷಣೆ ಮಾಡುವ ರಜನಿ ಶೆಟ್ಟಿ ಗಾಯಗೊಂಡಿರುವ, ಅನಾರೋಗ್ಯ ಪೀಡಿತ ಪ್ರಾಣಿ, ಪಕ್ಷಿಗಳ ಆರೈಕೆ ಮಾಡಿಕೊಂಡು ಬರುತ್ತಿದ್ದಾರೆ. ಅಲ್ಲದೆ ಬಾವಿಗೆ ಬಿದ್ದಿರುವ ಹಾವು, ಪ್ರಾಣಿಗಳ ರಕ್ಷಣೆ ಮಾಡುತ್ತಾರೆ. ಮನೆಯಲ್ಲಿ ಬೆಕ್ಕು, ನಾಯಿ, ಗಿಡುಗ, ಕಾಗೆ, ಆಮೆಗಳನ್ನು ಸಾಕಿ ಅವುಗಖ ಆರೈಕೆಯನ್ನು ಸದ್ಯ ರಜನಿಶೆಟ್ಟಿಯವರೇ ಮಾಡುತ್ತಿದ್ದಾರೆ. ಪ್ರತಿ ದಿನವೂ ಮೂಕ ಪ್ರಾಣಿಗಳ ಸಂರಕ್ಷಣೆ ಮಾಡುತ್ತಿದ್ದು, ರಜನಿ ಶೆಟ್ಟಿಯವರ ಈ ಮಹತ್ವದ ಕಾರ್ಯಕ್ಕೆ ಇಡೀ ಕುಟುಂಬವೇ ಬೆನ್ನೆಲುಬಾಗಿ ನಿಂತಿದೆ. ಪತಿ ದಾಮೋದರ್ ಶೆಟ್ಟಿ ವೃತ್ತಿಯಲ್ಲಿ ಡ್ರೈವರ್ ಆಗಿದ್ದು, ರಜನಿ ಶೆಟ್ಟಿ ಕುಟುಂಬ ನಂಬಿಕೊಂಡಿರುವುದು ಪತಿಯ ದುಡಿಮೆಯನ್ನೇ. ಆದರೂ ಸಹ ರಜನಿ ಶೆಟ್ಟಿಯವರ ಮನೆಯಲ್ಲಿ 34ಕ್ಕೂ ಹೆಚ್ಚು ಶ್ವಾನಗಳು, 10ಕ್ಕೂ ಹೆಚ್ಚು ಬೆಕ್ಕುಗಳು, ನಾಲ್ಕೈದು ಹದ್ದುಗಳಿವೆ. ಇವೆಲ್ಲವೂ ಬೀದಿಯಲ್ಲಿ ಯಾರೋ ಬಿಟ್ಟು ಹೋಗಿರುವುದು ಮತ್ತು ರಸ್ತೆಯಲ್ಲಿ ಗಾಯವಾಗಿ ಬಿದ್ದಿದ್ದವು ಎಂದು ತಿಳಿದುಬಂದಿದೆ. ಕಷ್ಟದ ಜೀವನದ ನಡುವೆಯೇ ರಜನಿ ಶೆಟ್ಟಿಯವರ ಮನೆ ಈ ಪ್ರಾಣಿಗಳಿಗೆ ಅರಮನೆ ಆಗಿದೆ.
800ಕ್ಕೂ ಅಧಿಕ ಬೀದಿನಾಯಿಗಳ ಪೆÇೀಷಣೆ
ಕಳೆದ 22 ವರ್ಷಗಳ ಹಿಂದೆ ಪ್ರಾಣಿಗಳೊಂದಿಗೆ ಬಾಂಧವ್ಯ ಬೆಳೆಸಿಕೊಂಡ ರಜಿನಿ ಶೆಟ್ಟಿ ಇದೀಗ 800ಕ್ಕೂ ಹೆಚ್ಚು ಬೀದಿನಾಯಿಗಳ ತಾಯಿಯಾಗಿ ನಿಂತಿದ್ದಾರೆ. ಬೀದಿ ಬದಿಯ ನಾಯಿಗಳಿಗೆ ಅನ್ನ, 60 ಕೆ.ಜಿ.ಅಕ್ಕಿ ಸೇರಿ ಒಟ್ಟು 200 ಕೆಜಿಯಷ್ಟು ಆಹಾರ ನೀಡಿ ಹೊಟ್ಟೆ ತಣಿಸುತ್ತಾರೆ. ಸಂಜೆಯಾಗುತ್ತಲೇ ಮಕ್ಕಳ ಸಹಾಯವೋ, ಪತಿಯ ಸಹಾಯವನ್ನು ಪಡೆದು ವಿವಿಧೆಡೆಗಳಿಗೆ ಹೋಗಿ ನಾಯಿಗಳಿಗೆ ಆಹಾರ ಕೊಡುತ್ತಾರೆ. ಮಧ್ಯಾಹ್ನದ ಬಳಿಕ ದೊಡ್ಡ ಪಾತ್ರೆಯಲ್ಲಿ ಕುಚ್ಚಲಕ್ಕಿ ಅನ್ನ ಬೇಯಿಸುವುದಕ್ಕೆ ಶುರು ಮಾಡಲಾಗುತ್ತದೆ. ಕೋಳಿ ಮಾಂಸಕ್ಕೆ ಅರಶಿಣ, ಉಪ್ಪು ಸೇರಿದಂತೆ ಮಸಾಲೆಯನ್ನು ಹಾಕಿ ಬೇಯಿಸುತ್ತಾರೆ. ರಾತ್ರಿ 9 ಗಂಟೆಯಾಗುತ್ತಿದ್ದಂತೆ ಬಕೆಟ್‍ನಲ್ಲಿ ಸಿದ್ದವಾದ ಆಹಾರವನ್ನು ತುಂಬಿಸಿಕೊಂಡು ಆಯಕ್ಟೀವಾ ಅಥವಾ ಆಟೋದಲ್ಲಿ ಹೋಗುತ್ತಾರೆ.
ರಜನಿಗೆ ಆಸರೆಯಾಗಿ ನಿಂತ ಸ್ಥಳೀಯರು
ಇವರಿಗೆ ದಿನವೊಂದಕ್ಕೆ ಸುಮಾರು ಮೂರು ಸಾವಿರ ಖರ್ಚು ತಗುಲುತ್ತದೆ. ರಜನಿ ಶೆಟ್ಟಿಯವರು ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ ಬಳಿಕ ಇವರ ಈ ಸೇವೆಯನ್ನು ತಿಳಿದು ಒಂದಷ್ಟು ಮಂದಿ ಸಹಾಯವನ್ನು ಮಾಡುತ್ತಿದ್ದಾರೆ. ಈ ನಡುವೆಯೂ ಸಾರ್ವಜನಿಕರ ಕಿರಿಕಿರಿ ರಜನಿಯವರಲ್ಲಿ ಬೇಸರ ಮೂಡಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಸ್ಥಳೀಯರು ಎಲ್ಲರೂ ತೊಂದರೆ ಮಾಡುತ್ತಿಲ್ಲ. ಆದರೆ ಒರ್ವ ಮಹಿಳೆ ಪ್ರತಿ ದಿನ ತೊಂದರೆ ನೀಡುತ್ತಿದ್ದಾರೆ. ನೀವು ಬಾಡಿಗೆ ಮನೆಯಲ್ಲಿ ಇರುವುದು, ನಾವು ಸ್ವಂತ ಮನೆಯಲ್ಲಿ ಇರುವುದು. ಬಾಡಿಗೆ ಮನೆಯಲ್ಲಿ ನಾಯಿ ಸಾಕಬೇಡಿ ಅಂತಾ ಪ್ರತಿ ದಿನ ಜಗಳ ಮಾಡುತ್ತಿದ್ದಾರೆ. ಇತ್ತೀಚೆಗμÉ್ಟೀ ನಾಯಿಗಳಿಗೆ ಆಹಾರ ಹಾಕುವಾಗ ಪ್ರತಿದಿನ ಸೀಮೆ ಎಣ್ಣೆಯ ವಾಸನೆ ಬರುತ್ತಿದೆ. ನಾನು ಮನೆಯಲ್ಲಿ ಇಲ್ಲದೇ ಇರುವಾಗ ಅವರು ನಾಯಿಗಳಿಗೆ ಹೊಡೆದು, ಆಹಾರಕ್ಕೆ ಸೀಮೆ ಎಣ್ಣೆ ಹಾಕಿರುವ ಬಗ್ಗೆಯೂ ಗೊತ್ತಾಗಿದೆ. ಇದಕ್ಕಾಗಿ ಮನೆಯ ಸುತ್ತ ನಾಲ್ಕು ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದೇನೆ. ಅನ್ನ ಬೇಯುವ ಸ್ಥಳದಲ್ಲೇ ಸಿಸಿ ಕ್ಯಾಮೆರಾಗಳನ್ನು ಹಾಕಿದ್ದೇನೆ ಎಂದು ತಿಳಿಸಿದರು.