Recent Posts

Sunday, January 19, 2025
ಸುದ್ದಿ

ಸೀರೆಯುಟ್ಟು ಮಿರ ಮಿರ ಮಿಂಚುತ್ತಾ ವಾಕಿಂಗ್ ಮಾಡಿದ್ರು ಮಂಗಳೂರಿನ ನಾರಿಮಣಿಯರು – ಕಹಳೆ ನ್ಯೂಸ್

ಮಂಗಳೂರು, ಆಗಸ್ಟ್ 13: ಸೀರೆಯುಟ್ಟು ವಾಕಿಂಗ್ ಹೋಗೋಕೆ ಕಂಫರ್ಟಬಲ್ ಅನಿಸಲ್ಲ ಅನ್ನುವ ಕಾರಣಕ್ಕೆ ಮಹಿಳೆಯರು ಜಾಗ್ ಹೋಗೋಕೆ ದೂರ ಸರಿಯುತ್ತಾರೆ. ಇಂತಹ ಮಹಿಳೆಯರನ್ನು ನಡಿಗೆಗೆ ಪ್ರೋತ್ಸಾಹಿಸಲು ಮಂಗಳೂರಿನಲ್ಲೊಂದು ಪ್ರಯತ್ನ ನಡೆಸಲಾಗಿದೆ. ಹೌದು, “ಸಾರಿ ಉಟ್ಟರೆ ನಡೆದಾಡಲು ಅಷ್ಟು ಹಿತಕರ ಅನಿಸುವುದಿಲ್ಲ” ಎಂದು ಬಹಳಷ್ಟು ಮಹಿಳೆಯರ ದೂರುತ್ತಿರುವ ಕಾರಣಕ್ಕೋ ಏನೋ ಇದಕ್ಕೆ ಅಪವಾದ ಎಂಬಂತೆ ಮಂಗಳೂರಿನ ಮಹಿಳೆಯರು ಸೀರೆಯಲ್ಲೇ ವಾಕಿಂಗ್ ಮಾಡಿದ್ದಾರೆ.


ಮಂಗಳೂರಿನ “ಮೆಡಿಮೈಡ್ ಸೊಲ್ಯುಷನ್ ಅಸೋಸಿಯೇಷನ್ ಕ್ಲಬ್” ವತಿಯಿಂದ ಸೀರೆ ನಡಿಗೆ ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ನೂರಾರು ಮಹಿಳೆಯರು ಬೆಳ್ಳಂಬೆಳಗ್ಗೆ ಸೀರೆಯುಟ್ಟು ಹಾಜರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಡಿ ಮಳೆಯ ನಡುವೆಯೂ ನಗರದ ಮಣ್ಣಗುಡ್ಡೆಯಿಂದ ಸೀರೆಯಲ್ಲೇ ವಾಕಿಂಗ್ ಆರಂಭಿಸಿದ ಸುಮಾರು 600ಕ್ಕಿಂತ ಹೆಚ್ಚು ಮಹಿಳೆಯರು ಮಂಗಳಾ ಕ್ರೀಡಾಂಗಣ ಮೂಲಕ ಮತ್ತೆ ಮಣ್ಣಗುಡ್ಡ ತಲುಪಿ ಎರಡು ಕಿ.ಮೀ. ವಾಕಿಂಗ್ ಪೂರ್ತಿಗೊಳಿಸಿದರು. ಶೂ, ಟ್ರಾಕ್ ಸೂಟ್, ಟೀ ಶರ್ಟ್ ಅಲ್ಲದೆ ಸೀರೆಯಲ್ಲೂ ವಾಕಿಂಗ್ ಮಾಡಬಹುದು ಅನ್ನೋದನ್ನು ಮಹಿಳೆಯರು ಸಾಬೀತುಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು