Monday, January 20, 2025
ಸುದ್ದಿ

‘ಭವ್ಯವಾದ ಶತಮಾನವು ದೇವರ ಪಾದ ಸೇರಿದೆ’ : ತಾಯಿ ನಿಧನಕ್ಕೆ ಭಾವುಕರಾಗಿ ಮೋದಿ ಟ್ವೀಟ್ -ಕಹಳೆ ನ್ಯೂಸ್

ಕಳೆದ 2 ದಿನಗಳಿಂದ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾತಿ ಚಿಕಿತ್ಸೆ ಪಡೆಯುತ್ತಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ತಾಯಿ ಹೀರಾ ಬೇನ್ ಚಿಕಿತ್ಸೆ ಫಲಿಸದೆ ಅಹಮದಾಬಾದ್‌ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಾಯಿ ನಿಧನಕ್ಕೆ ಭಾವುಕರಾಗಿರುವ ಮೋದಿ ಟ್ವೀಟ್ ಮೂಲಕ ನೋವನ್ನ ವ್ಯಕ್ತಪಡಿಸಿದ್ದಾರೆ. ‘ಭವ್ಯವಾದ ಶತಮಾನವು ದೇವರ ಪಾದ ಸೇರಿದೆ. ಅಮ್ಮನಲ್ಲಿಯೇ ನಾನು ಆ ತ್ರಿಮರ‍್ತಿಗಳನ್ನು ಕಾಣುತ್ತಿದೆ. ತಪಸ್ವಿಯ ಪ್ರಯಾಣ, ನಿಸ್ವರ‍್ಥ ರ‍್ಮಯೋಗಿಯ ಸಂಕೇತ ಮತ್ತು ಮೌಲ್ಯಗಳಿಗೆ ಬದ್ಧವಾಗಿರುವ ಜೀವನವನ್ನು ಒಳಗೊಂಡಿತ್ತು’ ಎಂದು ಪ್ರಧಾನಿ ನರೇಂದ್ರಮೋದಿ ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.

ಅಮ್ಮನ 100ನೇ ಹುಟ್ಟುಹಬ್ಬದಂದು ನಾನು ಅಮ್ಮನನ್ನು ಭೇಟಿಯಾಗಿದ್ದೆ. ಬುದ್ಧಿವಂತಿಕೆಯಿಂದ ಕೆಲಸ ಮಾಡಿ, ಶುದ್ಧತೆಯಿಂದ ಬದುಕು ಅಂತಾ ಅಮ್ಮಾ ಬುದ್ಧಿ ಮಾತು ಹೇಳಿದ್ದರು ಅಂತಾ ಟ್ವೀಟ್‌ನಲ್ಲಿ ಹೇಳಿದ್ದಾರೆ.