Monday, January 20, 2025
ಸುದ್ದಿ

ಶ್ರೀ ದುರ್ಗಾನುಗ್ರಹ ಭಜನಾ ಮಂದಿರ ಮುಗೇರಡ್ಕ ಮೊಗ್ರು : ಡಿ.31 ರಿಂದ ಜ.01 ರವರೆಗೆ ನಡೆಯಲಿರುವ ನವೀಕೃತ ಮಂದಿರದ ಪ್ರವೇಶೋತ್ಸವ –ಕಹಳೆ ನ್ಯೂಸ್

ಶ್ರೀ ದುರ್ಗಾನುಗ್ರಹ ಭಜನಾ ಮಂದಿರ ಮುಗೇರಡ್ಕ ಮೊಗ್ರು, ಬೆಳ್ತಂಗಡಿ ಇದರ ನವೀಕೃತ ಮಂದಿರದ ಪ್ರವೇಶೋತ್ಸವವು ಡಿ.31 ರಿಂದ ಜ.01 ಆದಿತ್ಯವಾರದವರೆಗೆ ನಡೆಯಲಿದೆ. ಮಂದಿರದ ಪ್ರವೇಶೋತ್ಸವವು ಶ್ರೀ ಅನಂತಕೃಷ್ಣ ಉಡುಪ ಮುದ್ಯ ಇವರ ಪೌರೋಹಿತ್ಯದಲ್ಲಿ ನೆರವೇರಲಿದೆ. ಡಿ. 31 ರಂದು ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ , ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ನಡೆಯಲಿದ್ದು, ನಂತರ ಅನ್ನಸಂತರ್ಪಣೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜ.01-01-2023 ನೇ ಆದಿತ್ಯವಾರದಂದು ಪೂರ್ವಾಹ್ನ ಗಣಹೋಮ, ಚಂಡಿಕಾ ಹೋಮ ನಡೆದ ಬಳಿಕ ಶ್ರೀ ದುರ್ಗಾನುಗ್ರಹ ನವೀಕೃತ ಭಜನಾ ಮಂದಿರದ ಪ್ರವೇಶೋತ್ಸವ ನಡೆಯಲಿದೆ. ಈ ಸಂದರ್ಭ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೂಜ್ಯ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಆಶೀರ್ವಚನ ನಿಡಲಿದ್ದಾರೆ. ಬಳಿಕ ಭಜನಾ ಸಂಕೀರ್ತನೆ ಹಾಗೂ ವಿವಿಧ ಧಾರ್ಮಿಕ ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಮಂದಿರದ ಪ್ರವೇಶೋತ್ಸವವು ಸಂಪನ್ನಗೊಳ್ಳಲಿದೆ. ಭಕ್ತಾಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ಜಗನ್ಮಾತೆಯ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯು ವಿನಂತಿಸಿದೆ.