ಕಲ್ಲಡ್ಕ : ಬಿ.ಸಿ.ಎ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣಾ ಕಾರ್ಯಕ್ರಮ ಅಜಿತಕುಮಾರ ಸಭಾಭವನದಲ್ಲಿ ನಡೆಯಿತು. ಒಟ್ಟು 62 ವಿದ್ಯಾರ್ಥಿಗಳ ಪೈಕಿ 32 ವಿದ್ಯಾರ್ಥಿಗಳಿಗೆ ಮೊದಲ ಹಂತದಲ್ಲಿ ಲ್ಯಾಪ್ ಟಾಪ್ ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ಅವರು ಮಾತನಾಡಿ, ಸಮಕಾಲೀನ ಜೀವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನವು ಅತ್ಯಗತ್ಯ ಪಾತ್ರವನ್ನು ಹೊಂದಿದೆ ಮತ್ತು ಮಾನವ ನಾಗರಿಕತೆಯನ್ನು ಆಳವಾಗಿ ತಲುಪುವ ಮೂಲಕ ಅವು ಪ್ರಭಾವ ಬೀರಿವೆ.
ಆಧುನಿಕ ಜಗತ್ತು ಕ್ಷಿಪ್ರವಾಗಿ ಮುಂದುವರೆಯುತ್ತಿದ್ದ ಹಾಗೆ ತಂತ್ರಜ್ಞಾನವು ನಿಮಿಷಕ್ಕೊಮ್ಮೆ ಬದಲಾಗುತ್ತಿದೆ. ಮರದ ಬೇರು ಆಳಕ್ಕೆ ಹೋದಷ್ಟು ಮರ ಗಟ್ಟಿಯಾದ ಹಾಗೆ ತಂತ್ರಜ್ಞಾನ ಎμÉ್ಟೀ ಮುಂದುವರೆದರೂ ಕೂಡ ಆಧುನಿಕತೆಗೆ ನಮ್ಮನ್ನು ನಾವು ತೆರೆದುಕೊಳ್ಳುತ್ತಾ ಆಳವಾದ ಮೂಲ ಚಿಂತನೆಯೊಂದಿಗೆ ಮಾನವೀಯತೆಯ ಕಡೆಗೆ ಸಾಗಬೇಕು.ಸಂಸ್ಕøತಿ , ವೇದಗಳನ್ನು ಇಟ್ಟುಕೊಂಡು ನಾವು ಎತ್ತರಕ್ಕೆ ಏರುತ್ತಾ ಯಾವ ದಿಕ್ಕಿಗೂ ಸಾಗಿದರೂ ನಮ್ಮ ವಿದ್ಯಾ ಸಂಸ್ಥೆಯನ್ನು ಎಂದಿಗೂ ಮರೆಯಬಾರದು ಎಂದರು.
ವೇದಿಕೆಯಲ್ಲಿ ದೈವಾರಾಧನಾ ಸಮಿತಿ ಪಾಣಾರ ಯಾನೆ ನಲಿಕೆ ಸಮಾಜ ಸೇವಾ ಸಂಘ ಮೂಡುಬಿದಿರೆ ದ.ಕ. ಇದರ ಜಿಲ್ಲಾಧ್ಯಕ್ಷರಾದ ಜನಾರ್ದನ ಬುಡೋಳಿ, ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕರಾದ ಶ್ರೀ ವಸಂತ ಮಾಧವ, ಸಹಸಂಚಾಲಕ ಶ್ರೀ.ರಮೇಶ್ ಹಾಗೂ ಪ್ರಾಂಶುಪಾಲ ಶ್ರೀ ಕೃಷ್ಣಪ್ರಸಾದ್ ಇವರು ಉಪಸ್ಥಿತರಿದ್ದರು. ಕು.ಹರ್ಷಿತಾ ಅಂತಿಮ ಬಿ.ಎಸ್ಸಿ, ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.