ಹೆಲ್ಮೆಟ್ ಹಾಕದ ಬೈಕ್ ಸವಾರನಿಗೆ ದಂಡ ಪಾವತಿಯ ನೋಟಿಸ್ ಕೊಡುವ ಬದಲು ಕಾರು ಚಾಲಕನಿಗೆ ನೋಟಿಸ್ ನೀಡಿದ ವಿದ್ಯಮಾನ ಬೆಳಕಿಗೆ ಬಂದಿದೆ. ಸಂಚಾರ ಪೊಲೀಸರ ಈ ಎಡವಟ್ಟು ಚರ್ಚೆಗೆ ಗ್ರಾಸ ಒದಗಿಸಿದೆ.
ನಗರದ ಮಂಗಳಾದೇವಿಯಲ್ಲಿ ನ.29ರಂದು ಕಾರಿನ ಮಾಲಕರೊಬ್ಬರು ತೆರಳಿದ್ದು, ಅವರಿಗೆ ಸಂಚಾರ ಠಾಣೆಯಿಂದ ಸಹ ಸವಾರ ಹೆಲ್ಮೆಟ್ ಹಾಕಿಲ್ಲ ಎಂಬ ಕಾರಣವೊಡ್ಡಿ ಡಿ.22ರಂದು 500ರೂ. ದಂಡಪಾವತಿಗೆ ನೋಟಿಸ್ ಹೋಗಿದೆ. ಇದರಿಂದ ವಿಚಲಿತರಾದ ಕಾರಿನ ಮಾಲಕರು ಪರಿಶೀಲನೆ ನಡೆಸಿದಾಗ ಅಟೋಮೇಶನ್ ಸೆಂಟರ್‌ನಲ್ಲಿ ಎಡವಟ್ಟಾಗಿರುವುದು ಬಯಲಾಗಿದೆ.
ಕಾರಿನ ಮಾಲಕರು ತೆರಳುತ್ತಿದ್ದಾಗ ಇಬ್ಬರು ಯುವಕರು ಬೈಕ್‌ನಲ್ಲಿ ತೆರಳುತ್ತಿದ್ದರು ಎನ್ನಲಾಗಿದೆ. ಇವರಲ್ಲಿ ಒಬ್ಬ ಹೆಲ್ಮೆಟ್ ಧರಿಸಿರಲಿಲ್ಲ. ಆ ವಾಹನದ ಮೇಲೆ ದಂಡ ಹಾಕುವ ಬದಲು ಕಾರಿನ ಮಾಲಕರಿಗೆ ದಂಡದ ನೋಟಿಸು ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.