Wednesday, January 22, 2025
ಸುದ್ದಿ

ಬಿಗ್ ಬಾಸ್ ಸೀಸನ್-9 ಕಿರೀಟ ಅಲಂಕರಿಸಿಕೊಂಡ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ –ಕಹಳೆ ನ್ಯೂಸ್

ಮಂಗಳೂರು: ಖ್ಯಾತ ಕಿರುತೆರೆ ಕಾರ್ಯಕ್ರಮ ಬಿಗ್ ಬಾಸ್ ಒಂಬತ್ತನೇ ಸೀಸನ್ ಗೆ ಅಧಿಕೃತ ತೆರೆಬಿದ್ದಿದ್ದು, ಹಲವು ತುಳುಚಿತ್ರಗಳಲ್ಲಿ ನಟಿಸಿರುವ ಕರಾವಳಿ ಮೂಲದ ರೂಪೇಶ್ ಶೆಟ್ಟಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕನ್ನಡ ಮತ್ತು ತುಳು ಚಿತ್ರರಂಗದ ಪ್ರತಿಭಾವಂತ ನಾಯಕ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಬಿಗ್ ಬಾಸ್ -9ರ ಆರಂಭದಿಂದಲೂ ಉತ್ತಮವಾಗಿಯೇ ಮನೋರಂಜನೆ ನೀಡಿದ್ದು, ಬಿಗ್ ಬಾಸ್ ಮನೆಯ ಆಟ ಸಾಕಷ್ಟು ಟ್ವಿಸ್ಟ್ ಗಳನ್ನ ಪಡೆದು ಅಂತಿಮ ಹಂತದ ತನಕವೂ ಕೂಡ ರೂಪೇಶ್ ಶೆಟ್ಟಿ ನಿರೀಕ್ಷೆಯನ್ನು ಉಳಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ನಡೆಯುವ ಎಲ್ಲಾ ಚಟುವಟಿಕೆಗಳಲ್ಲಿ ರೂಪೇಶ್ ಶೆಟ್ಟಿ ಕರುನಾಡಿನ ಅಭಿಮಾನಿಗಳಿಗೆ ನಿರೀಕ್ಷೆಗೂ ಮೀರಿ ಮನೋರಂಜನೆ ನೀಡುತ್ತಿದ್ದರು.

ಫಿನಾಲೆಯಲ್ಲಿ 5 ಜನರ ನಡುವೆ ಹಣಾಹಣಿ ನಡೆದಿದ್ದು, ಕೊನೆಯಲ್ಲಿ ಟಾಪ್ 5 ಸ್ಪರ್ಧಿಗಳ ನಡುವೆ ವಿಜಯಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವ ಮೊದಲೇ ಸಿನಿಮಾ ರಂಗದಲ್ಲಿ ಅಭಿಮಾನಿಗಳ ಸಾಗರವನ್ನೇ ಹೊಂದಿರುವ ಕರಾವಳಿಯ ಪ್ರತಿಭೆ ರೂಪೇಶ್ ಶೆಟ್ಟಿಯವರು ಇದೀಗ ಕರುನಾಡಿನಾದ್ಯಂತ ಮನೆ ಮಗನಾಗಿ ಗುರುತಿಸಿಕೊಂಡಿದ್ದಾರೆ.