ಮೂಗಿನಲ್ಲಿ ಸಮಸ್ಯೆ ಇದ್ದ ಹಿನ್ನೆಲೆ ಆಸ್ಪತ್ರೆಗೆ ದಾಖಲು : ಶಸ್ತ್ರಚಿಕಿತ್ಸೆ ಬಳಿಕ ಯುವತಿ ಸಾವು : ಕುಟುಂಬಸ್ಧರಿಂದ ಪತ್ರಿಭಟನೆ –ಕಹಳೆ ನ್ಯೂಸ್
‘ವೈದ್ಯೋ ನಾರಾಯಣೋ ಹರಿ’ಎನ್ನುತ್ತೇವೆ. ನಮ್ಮ ಜೀವ ಉಳಿಸುವ ದೇವರು ಅಂದ್ರೆ ಅದು ವೈದ್ಯರು. ಆದ್ರೆ ಇದೇ ವೈದ್ಯರು ಯುವತಿಯೊಬ್ಬಳ ಜೀವನದಲ್ಲಿ ಚೆಲ್ಲಾಟವಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ.
ಮೂಗಿನಲ್ಲಿ ಏನೋ ಸಮಸ್ಯೆ ಇದ್ದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 18 ವರ್ಷದ ಯುವತಿ ರಾಜೇಶ್ವರಿ ಸಾವನ್ನಪ್ಪಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಮೂಗಿನ ಸಮಸ್ಯೆ ಅಂತ ರಾಜೇಶ್ವರಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಳು. ನಾಲ್ಕು ದಿನ ದಾಖಲು ಮಾಡಿಕೊಂಡು ವೈದ್ಯರು ಆಪರೇಷನ್ ಮಾಡಿದ್ದರು. ಆದರೆ, ಇದೀಗ ರಾಜೇಶ್ವರಿ ಮೃತಪಟ್ಟಿದ್ದಾಳೆ.
ಡಾ.ರಾಜಶೇಖರ್ ಪಾಟೀಲ್ ನಿರ್ಲಕ್ಷ್ಯದಿಂದಲೇ ಬಾಲಕಿ ಸಾವನ್ನಪಿರುವುದಾಗಿ ಮನೆಮಂದಿ ಆರೋಪ ಮಾಡುತ್ತಿದ್ದು, ಆಸ್ಪತ್ರೆಯ ಮುಂದೆಯೇ ಮೃತದೇಹವನ್ನ ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ರಾಜೇಶ್ವರಿ ರಿಮ್ಸ್ ಆಸ್ಪತ್ರೆಯಲ್ಲಿ ನರ್ಸಿಂಗ್ ಸೀಟ್ ಪಡೆದಿದ್ದು ಜನವರಿ 10ಕ್ಕೆ ನರ್ಸಿಂಗ್ ಅಡ್ಮಿಷನ್ ಮಾಡಿಸೋಕೆ ಸಿದ್ಧತೆ ಮಾಡಿಕೊಂಡಿದ್ದಳು. ರಿಮ್ಸ್ ನಲ್ಲಿ ಸೀಟ್ ಸಿಕ್ಕಿದೆ ಎಂಬ ಕಾರಣಕ್ಕೆ ರಾಜೇಶ್ವರಿ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದಾಖಾಲಾಗಿದ್ದಳು. ಆದ್ರೆ ಹುಡುಗಿ ಇದೀಗ ಮೃತಪಟ್ಟಿದ್ದಾಳೆ. ಆಸ್ಪತ್ರೆಯ ಮುಂದೆ ರಾಜೇಶ್ವರಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಆ ದೃಶ್ಯ ನೋಡುಗರ ಮನ ಕಲಕುವಂತಿತ್ತು.