ಮರಿಗಳಿಗೆ ಜನ್ಮ ನೀಡಿದ ಬಿಎಸ್‌ಎಫ್ ಸ್ನಿಫರ್ ಶ್ವಾನ : ತನಿಖೆ ನಡೆಸಿ ವಿಚಾರಣೆ ನಡೆಸುವಂತೆ ನ್ಯಾಯಾಲಯ ಆದೇಶ -ಕಹಳೆ ನ್ಯೂಸ್
ಮೇಘಾಲಯ : ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ವಾನ ಮೂರು ಮರಿಗಳಿಗೆ ಜನ್ಮ ನೀಡಿದ ಹಿನ್ನಲೆಯಲ್ಲಿ ಈ ಬಗ್ಗೆ ವಿಚಾರಣೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ.
ಮೇಘಾಲಯದ ಶಿಲ್ಲಾಂಗ್ ಪ್ರದೇಶದ ಬಾಂಗ್ಲಾದೇಶ ಗಡಿಯಲ್ಲಿರುವ ಬಾರ್ಡರ್ ಔಟ್‌ಪೋಸ್ಟ್ ನಲ್ಲಿ ಸೇವಾ ಉದ್ದೇಶಕ್ಕೆ ನಿಯೋಜಿಸಲಾಗಿದ್ದ ಬಿಎಸ್‌ಎಫ್ ಸ್ನಿಫರ್ ಶ್ವಾನವು ಮೂರು ಮರಿಗಳಿಗೆ ಜನ್ಮ ನೀಡಿದೆ. ಆದರೆ ಇದು ನಿಯಮಕ್ಕೆ ವಿರುದ್ದವಾದ ಘಟನೆಯಾಗಿರುವುದರಿಂದ ವಿಚಾರಣೆಗೆ ನ್ಯಾಯಾಲಯ ಆದೇಶಿಸಿದೆ.
ನಿಯಮ ಪ್ರಕಾರ ಬಿಎಸ್‌ಎಫ್ ಶ್ವಾನವು ಹೈ ಸೆಕ್ಯುರಿಟಿ ವಲಯದಲ್ಲಿರುತ್ತದೆ. ಅದನ್ನು ಜಾಗರೂಕತೆಯಾಗಿ ನೋಡಿಕೊಳ್ಳಬೇಕಿದೆ. ದಳದ ಪಶುವೈದ್ಯ ವಿಭಾಗದ ಸಲಹೆ ಹಾಗೂ ಮೇಲ್ವಿಚಾರಣೆಯ ಹೊರತಾಗಿ ಶ್ವಾನಗಳನ್ನು ಸಂತಾನೋತ್ಪತ್ತಿಗೆ ಬಿಡಲು ಅವಕಾಶವಿಲ್ಲ.
ಆದರೆ ಇದೀಗ ಬಿಎಸ್‌ಎಫ್‌ನ ಶ್ವಾನವು ಗರ್ಭಿಣಿಯಾಗಿದ್ದಲ್ಲದೆ, ಮೂರು ಮರಿಗಳಿಗೆ ಜನ್ಮ ನೀಡಿದೆ. ಈ ನಿಟ್ಟಿನಲ್ಲಿ ಕೋರ್ಟ್ ತನಿಖೆಗಾಗಿ ಕಮಿಟಿ ರಚಿಸಿದೆ. ಅಲ್ಲದೆ ಬಿಎಸ್‌ಫ್‌ನ 170 ಬೆಟಾಲಿಯನ್, ಧನಕಗಿರಿ, ಮೇಘಾಲಯದ ಕಚೇರಿಯು ಉಪ ಕಮಾಂಡೆAಟ್‌ಗೆ ಪತ್ರ ಬರೆದಿದ್ದು, ಘಟನೆ ಬಗ್ಗೆ ವಿವರ ನೀಡುವಂತೆ ಕೇಳಿದೆ.