Tuesday, November 26, 2024
ಸುದ್ದಿ

ಜನವರಿ 5ರಂದು ನಡೆಯಲಿದೆ ಶ್ರೀ ವರಲಕ್ಷ್ಮೀ ನಿಲಯದ 11 ಮನೆಯ ಗೃಹಪ್ರವೇಶ : ರಾಜು ಮರವಂತೆಗೆ ಸೂರು ಕಲ್ಪಿಸಿಕೊಟ್ಟ ಸಂಘಟನಾ ಮುಖಂಡರಾದ ಗೋವಿಂದ ಬಾಬು ಪೂಜಾರಿ –ಕಹಳೆ ನ್ಯೂಸ್

ಬಡತನದಿಂದ ಬಳಲುತ್ತಿರುವ ಕುಟುಂಬಕ್ಕೆ ಸೂರು ಕಲ್ಪಿಸಿಕೊಡುವ ಮೂಲಕ ಆಸರೆಯಾಗುತ್ತಿರುವ ಗೋವಿಂದ ಬಾಬು ಪೂಜಾರಿಯವರು ಇದೀಗ, ಶ್ರೀ ವರಲಕ್ಷ್ಮೀ ನಿಲಯದ 11 ಮನೆಯ ಗೃಹಪ್ರವೇಶವನ್ನ ನೆರವೇರಿಸಲು ಸಿದ್ದತೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗಾಂಧಿ ಕುಟೀರ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ರಿ. ಉಪ್ಪುಂದ ಶೈಕ್ಷಣಿಕ, ಸಾಮಾಜಿಕ ಸೇವಾ ಸಂಸ್ಥೆ ಟ್ರಸ್ಟ್ ಮೂಲಕ ತೀರಾ ಅಗತ್ಯವುಳ್ಳವರಿಗೆ ಶಾಶ್ವತ ಸೂರು ನಿರ್ಮಿಸಿಕೊಡುವ ಕೈಂಕರ್ಯವನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಇದೀಗ ಮರವಂತೆಯ ರಾಜು ಇವರಿಗೆ ಮನೆ ನಿರ್ಮಿಸಿದ್ದು, ಜನವರಿ 5ರಂದು ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ಮರವಂತೆಯ ಹಿಂದೂ ಸಂಘಟನಾ ಚತುರ ಸಂಘಟನಾ ಬಲವಾಗಿದ್ದ ರಾಜು ಮರವಂತೆ ಅವರು ತಮ್ಮ ಕುಟುಂಬದ ಆಧಾರವಾಗಿದ್ದರು. ಆದ್ರೆ ಅಪಘಾತದಲ್ಲಿ ತನ್ನ ಕಾಲಿನ ಬಲವನ್ನೆ ಕಳೆದುಕೊಂಡು 2 ವರ್ಷಗಳಿಂದ ದುಡಿಮೆ ಇಲ್ಲದೇ ಮನೆಯ ಸ್ಥಿತಿ ಚಿಂತಾಜನಕ ಪರಿಸ್ಥಿತಿಯಲ್ಲಿತ್ತು.

ಸಂಘಟನೆ ಮತ್ತು ಮನೆಯ ಬಲವಾಗಿದ್ದ ರಾಜು ಮರವಂತೆಯವರಿಗೆ ಸೂರಿನ ಸಮಸ್ಯೆಯೂ ಕಾಡುತ್ತಿತು. ಇಂತಹ ಸಂಕಷ್ಟದ ಪರಿಸ್ಥಿತಿಯ ಬಗ್ಗೆ ಸಂಘಟನಾ ಮುಖಂಡರಾದ ಡಾ. ಗೋವಿಂದ ಬಾಬು ಪೂಜಾರಿಯವರ ಗಮನಕ್ಕೆ ತಂದ ಮರುದಿನವೇ, ಇವರ ಮನಗೆ ಬೇಟಿ ನೀಡಿ ಸೂರು ನಿರ್ಮಿಸುವ ಭರವಸೆ ನೀಡಿದ್ದರು. ಇದೀಗ ಟ್ರಸ್ಟ್ ಮೂಲಕ 11 ನೇ ಸುಸಜ್ಜಿತ ಮನೆ ನಿರ್ಮಿಸಲಾಗಿದ್ದು, ಜನವರಿ 5 ರಂದ ಪ್ರವೇಶೋತ್ಸವ ಜರುಗಲಿದೆ.

ಶ್ರೀ ವರಲಕ್ಷಿ್ಮೀ ನಿಲಯದ 11ನೇ ಮನೆ ಪ್ರವೇಶೋತ್ಸವ ದಿನಾಂಕ 5-01-2023 ನೇ ಗುರುವಾರ ಮಧ್ನಾಹ 3 ಗಂಟೆ, ಗಾಂಧಿನಗರ ಮರವಂತೆಯಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಯುವ ಬ್ರಿಗೇಡ್ ಸಂಸ್ಥಾಪಕರಾದ ಚಕ್ರವರ್ತಿ ಸೂಲಿಬೆಲೆ, ಅವಧೂತ ಶ್ರೀ ವಿನಯ್ ಗುರೂಜಿ ಗೌರಿಗದ್ದೆ, ಶ್ರೀ ಅಭಿನವ್ ಹಾಲಾಶ್ರೀ, ಚೈತ್ರ ಕುಂದಾಪುರ, ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್, ಹಿಂದೂ ಜಾಗರಣಾ ವೇದಿಕೆ ದಕಿÀ್ಷಣ ಪ್ರಾಂತ್ಯ ಸಹ ಸಂಚಾಲಕರಾದ ಪ್ರಕಾಶ್ ಕುಕ್ಕೆಹಳ್ಳಿ ಭಾಗಿಯಾಗಲಿದ್ದಾರೆ.