Thursday, January 23, 2025
ಸುದ್ದಿ

ಕೋವಿಡ್ ವೈರಾಣುವಿಂದ ಹೈರಾಣು: ಯುದ್ಧ ಮಾಡ್ತೀನಿ ಅಂತಿದ್ದ ಚೀನಾಗೆ ನೆರವಿನ ಹಸ್ತ ಚಾಚಿದ ತೈವಾನ್…! –ಕಹಳೆ ನ್ಯೂಸ್

ಕೋವಿಡ್-19 ಸೋಂಕಿನಿಂದ ನಲುಗುತ್ತಿರುವ ಚೀನಾ ಏಕಾ ಏಕಿ ತನ್ನ ಶೂನ್ಯ ಕೋವಿಡ್ ನೀತಿಯನ್ನು ಕೈಬಿಟ್ಟ ಬೆನ್ನಲ್ಲೇ ತೈವಾನ್ ತನ್ನ ಶತ್ರುರಾಷ್ಟ್ರದಂತಿರುವ ಚೀನಾಗೆ ನೆರವಿನ ಹಸ್ತ ಚಾಚಿದೆ. ತೈವಾನ್: ಕೋವಿಡ್-19 ಸೋಂಕಿನಿಂದ ನಲುಗುತ್ತಿರುವ ಚೀನಾ ಏಕಾ ಏಕಿ ತನ್ನ ಶೂನ್ಯ ಕೋವಿಡ್ ನೀತಿಯನ್ನು ಕೈಬಿಟ್ಟ ಬೆನ್ನಲ್ಲೇ ತೈವಾನ್ ತನ್ನ ಶತ್ರುರಾಷ್ಟ್ರದಂತಿರುವ ಚೀನಾಗೆ ನೆರವಿನ ಹಸ್ತ ಚಾಚಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೋವಿಡ್ ಸೋಂಕಿನ ವಿರುದ್ಧ ಹೋರಾಡಲು ತೈವಾನ್ ಚೀನಾಗೆ ನೆರವು ನೀಡಲು ಸಿದ್ಧ ಎಂದು ತೈವಾನ್ ನ ಅಧ್ಯಕ್ಷ್ಯೆ ತ್ಸೈ ಇಂಗ್-ವೆನ್ ಘೋಷಿಸಿದ್ದು, “ಮಾನವೀಯ ಆಧಾರದಲ್ಲಿ ಚೀನಾಗೆ ನಾವು ಅಗತ್ಯ ನೆರವು ನೀಡಲು ಬಯಸುತ್ತಿದ್ದೇವೆ, ಈ ಮೂಲಕ ಹೆಚ್ಚು ಜನರು ಪ್ಯಾಂಡಮಿಕ್ ನಿಂದ ಹೊರಬಂದು ಹೊಸ ವರ್ಷವನ್ನು ಆರೋಗ್ಯಕರ, ಶಾಂತಿಯುತವಾಗಿ ಬದುಕಬಹುದು ಎಂದು ತ್ಸೈ ಹೇಳಿದ್ದಾರೆ. ತ್ಸೈ ನೆರವು ನೀಡುವಿದಾಗಿಯೇನೋ ಹೇಳಿದ್ದಾರೆ, ಆದರೆ ಚೀನಾಗೆ ತೈವಾನ್ ನೀಡಲು ಬಯಸುತ್ತಿರುವುದು ಎಂತಹ ನೆರವು ಎಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಚೀನಾ ಕೋವಿಡ್ ಸೋಂಕಿನಿಂದ ಈಗಾಗಲೇ ಸಾಕಷ್ಟು ನಲುಗಿದೆ. ಅಲ್ಲಿನ ಆರೋಗ್ಯ ವ್ಯವಸ್ಥೆ ಕುಸಿಯತೊಡಗಿದ್ದು, ಔಷಧಗಳ ಕೊರತೆ ಉಂಟಾಗಿದೆ. ಇಷ್ಟೆಲ್ಲದರ ನಡುವೆ ಚೀನಾ ತನ್ನಲ್ಲಿಗೆ ಬರುವ ವಿದೇಶಿಗರಿಗೆ ಕ್ವಾರಂಟೈನ್ ನಿಯಮಗಳನ್ನು ಸಡಿಲಿಸಿದೆ ಹಾಗೂ ಜ.08 ರಿಂದ ತನ್ನಲ್ಲಿಂದ ವಿದೇಶಗಳಿಗೆ ಹೋಗುವವರಿಗೆ ಅವಕಾಶವನ್ನೂ ಕಲ್ಪಿಸಲಿದೆ. ಒಂದು ಅಂದಾಜಿನ ಪ್ರಕಾರ ಚೀನಾದಲ್ಲಿ ದಿನವೊಂದಕ್ಕೆ 9,000 ಮಂದಿ ಸಾವನ್ನಪ್ಪುತ್ತಿದ್ದಾರೆ.