Thursday, January 23, 2025
ಸುದ್ದಿ

ಜ. 9ರಿಂದ 12ರ ವರೆಗೆ ಚೆನ್ನೈನ ತಮಿಳುನಾಡು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆಯಲಿರುವ ನೈರುತ್ಯ ವಲಯ ಅಂತರ್ ವಿಶ್ವವಿದ್ಯಾನಿಲಯ ಅತ್ಲೆಟಿಕ್ ಚಾಂಪಿಯನ್‍ಶಿಪ್ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ 6 ವಿದ್ಯಾರ್ಥಿಗಳು ಆಯ್ಕೆ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ 6 ವಿದ್ಯಾರ್ಥಿಗಳು ನೈರುತ್ಯ ವಲಯ ಅಂತರ್ ವಿಶ್ವವಿದ್ಯಾನಿಲಯ ಅತ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜ. 9ರಿಂದ 12ರ ವರೆಗೆ ಚೆನ್ನೈನ ತಮಿಳುನಾಡು ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಈ ಕ್ರೀಡಾ ಕೂಟವು ನಡೆಯಲಿದೆ.

ತೃತೀಯ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಅಭಿರಂಜನ್.ಎಚ್ 100ಮೀಟರ್ ಓಟ ಹಾಗೂ 4100ಮೀ ರಿಲೇ ಮತ್ತು ಕೀರ್ತಿರಾಜ್.ಕೆ.ಎಸ್ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ, ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಲೋಹಿತ್ ಆರ್ ಗೌಡ 100ಮೀಟರ್ ಓಟ ಹಾಗೂ 4100ಮೀ ರಿಲೇ ಸ್ಪರ್ಧೆಯಲ್ಲಿ, ದ್ವಿತೀಯ ವರ್ಷದ ಎಂಬಿಎ ವಿಭಾಗದ ವಿದ್ಯಾರ್ಥಿನಿಯರಾದ ರಕ್ಷಿತಾ.ಐ 20 ಕಿ ಮೀ ನಡಿಗೆ ಸ್ಪರ್ಧೆಯಲ್ಲಿ, ಜಯಶ್ರೀ. ಬಿ ಹೆಪ್ಟತ್ಲಾನ್ ಸ್ಪರ್ಧೆಯಲ್ಲಿ ಹಾಗೂ ಪವಿತ್ರಾ.ಜಿ ಉದ್ದಜಿಗಿತ ಮತ್ತು ತ್ರಿವಿಧ ಜಿಗಿತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಾರೆ.

ಕಳೆದ ತಿಂಗಳು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಸುಮಾರು 200 ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಅತ್ಯುತ್ತಮವಾಗಿ ಸಾಧನೆಯನ್ನು ಮಾಡಿದ ಈ 6 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.

ಒಂದೇ ಕಾಲೇಜಿನ 6 ವಿದ್ಯಾರ್ಥಿಗಳು ಅಂತರ್ ವಿಶ್ವವಿದ್ಯಾನಿಲಯ ಅತ್ಲೆಟಿಕ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿರುವುದು ಇದೇ ಮೊದಲು. ಈ ವಿದ್ಯಾರ್ಥಿಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಮಟ್ಟದ ಅಂತರ್ಕಾಲೇಜು ಕ್ರೀಡಾ ಕೂಟದಲ್ಲಿ 6 ಕೂಟ ದಾಖಲೆಗಳನ್ನು ಮಾಡಿ ಸಮಗ್ರ ತಂಡ ಪ್ರಶಸ್ತಿಯನ್ನು ಗಳಿಸಿಕೊಂಡಿದ್ದರು. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.