Thursday, January 23, 2025
ದಕ್ಷಿಣ ಕನ್ನಡಸುದ್ದಿ

ಶಿರಾಡಿ ರಸ್ತೆ ಚತುಷ್ಪಥಕ್ಕೆ 1,976 ಕೋ.ರೂ. ಬಿಡ್‌ : ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲ್ ಸತತ ಪ್ರಯತ್ನ ಫಲ – ಸಚಿವ ನಿತಿನ್‌ ಗಡ್ಕರಿ ಪತ್ರ – ಕಹಳೆ ನ್ಯೂಸ್

ಮಂಗಳೂರು: ಶಿರಾಡಿ ಘಾಟಿ ವಿಭಾಗದ ಮಾರನಹಳ್ಳಿ -ಅಡ್ಡಹೊಳೆ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸುಮಾರು 1,976 ಕೋಟಿ ರೂ. ಮೊತ್ತದ ಬಿಡ್‌ ಆಹ್ವಾನಿಸಲಾಗಿದೆ ಎಂದು ಕೇಂದ್ರ ಹೆದ್ದಾರಿ, ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಕಟೀಲು ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚತುಷ್ಪಥ ಕಾಮಗಾರಿಯ ಜತೆ ಮಂಗಳೂರು- ಬೆಂಗಳೂರು ನಡುವಿನ ಸಂಚಾರಕ್ಕೆ ಸಂಚಾರ, ಸಾರಿಗೆ ವೆಚ್ಚವನ್ನು ಕಡಿಮೆ ಮಾಡಲಿರುವ ಶಿರಾಡಿ ಘಾಟಿ ಸುರಂಗಮಾರ್ಗ ಯೋಜನೆ ಯನ್ನು 15,000 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿ ಕೊಳ್ಳಲಾಗುವುದು. 23 ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ 2023ರ ಎಪ್ರಿಲ್‌ ಒಳಗಾಗಿ ಸಾಧ್ಯತ ವರದಿ (ಡಿಪಿಆರ್‌) ಅಂತಿಮಗೊಳಿಸಿ ಮೇ ತಿಂಗಳಿನಲ್ಲಿ ಬಿಡ್‌ಗಳನ್ನು ಆಹ್ವಾನಿಸುವುದಾಗಿ ಸಚಿವ ಗಡ್ಕರಿ ತಿಳಿಸಿದ್ದಾರೆ.

ಅಲ್ಲದೆ ಸಕಲೇಶಪುರದಿಂದ ಮಾರನಹಳ್ಳಿಯ ಭಾಗದ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಕೂಡಲೇ ದುರಸ್ತಿ ನಡೆಸಲು ನಿರ್ಧರಿಸಲಾಗಿದ್ದು, ದುರಸ್ತಿ ಕಾಮಗಾರಿಗೆ 12.20 ಕೋಟಿ ರೂ. ಬಿಡ್‌ನ‌ ಮೌಲ್ಯಮಾಪನ ಮಾಡ ಲಾಗುತ್ತಿದೆ. ಅಸ್ತಿತ್ವದಲ್ಲಿರುವ ರಸ್ತೆ ನಿರ್ವಹಣೆಗಾಗಿ ಗುತ್ತಿಗೆದಾರರು ಪ್ಯಾಚ್‌ ವರ್ಕ್‌ ನಡೆಸಲು ಮುಂದಾಗಿದ್ದಾರೆ ಎಂದು ಗಡ್ಕರಿಯವರು ನಳಿನ್‌ ಅವರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಈ ಹಿಂದೆ ಡಿ. 8ರಂದು ಸಂಸತ್ತಿನಲ್ಲಿ ನಿತಿನ್‌ ಗಡ್ಕರಿ ಅವರು ಸಂಸದ ನಳಿನ್‌ ಕುಮಾರ್‌ ಅವರ ಪ್ರಶ್ನೆಗೆ ಉತ್ತರಿಸುವಾಗ ಶಿರಾಡಿ ಘಾಟಿ ಸುರಂಗ ಮಾರ್ಗ ಕಾರ್ಯಸಾಧ್ಯವಲ್ಲ ಎಂದಿದ್ದರು.