Sunday, January 19, 2025
ಸುದ್ದಿ

ಬಲಿಷ್ಠ ಭಾರತ ವಿಶ್ವ ಭೂಪಟದಲ್ಲಿ ಪ್ರಜ್ವಲಿಸುತ್ತಿದೆ ; ಐತಿಹಾಸಿಕ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ – ಕಹಳೆ ನ್ಯೂಸ್

ಆ,15: ರಾಷ್ಟ್ರ ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ಧ್ವಜಾರೋಹಣ ಮಾಡಿದರು. ಭಾಷಣದ ಪ್ರಾರಂಭದ ಮೊದಲು ತಮಿಳು ಕವಿ ಸುಬ್ರಹ್ಮಣ್ಯ ಭಾರತೀಯಾರ್‌ ಅವರ ಕವಿತೆಯ ಸಾಲುಗಳನ್ನು ತಮಿಳಿನಲ್ಲೇ ವಾಚಿಸಿದರು. ಬಳಿಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು ಭಾರತ ಭವ್ಯ ರಾಷ್ಟ್ರವಾಗಿ ಉದಯಿಸಿ ಇತರರಿಗೆ ಸ್ಫೂರ್ತಿಯಾಗಲಿದೆ. ಆ ದೆಸೆಯಲ್ಲಿ ನಾವು ಮುನ್ನಡೆಯಬೇಕು ಎಂದರು. ಭಾರತ ವಿಶ್ವದ ಭೂಪಟದಲ್ಲಿ ತನ್ನದೇ ರೀತಿಯಲ್ಲಿ ಛಾಪು ಮೂಡಿಸಿದೆ. ಇಂದು ಭಾರತ ಸಾಮಾನ್ಯ ಭಾರತದ ಬದಲಿ ಒಂದು ಬಲಿಷ್ಠ ಭಾರತವಾಗಿ ಪ್ರಜ್ವಲಿಸುತ್ತಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶವಾಸಿಗಳು ಆತ್ಮ ವಿಶ್ವಾಸವನ್ನು ತಳೆದಿದ್ದು, ಹೊಸ ಕನಸುಗಳು ಮತ್ತು ಸಂಕಲ್ಪದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ ಎಂದರು. ದೇಶದಲ್ಲಿ ಯಾವುದೇ ಜಾಗದಲ್ಲಿ ಅತಿವೃಷ್ಠಿ, ಅನಾವೃಷ್ಠಿ ಸಂಭವಿಸಿದರೆ ನಮ್ಮ ಯೋಧರು ಅಲ್ಲಿಗೆ ಹೋಗುತ್ತಾರೆ. ಗಡಿದಾಟಿ ಸರ್ಜಿಕಲ್ ಸ್ಟ್ರೈಕ್ ಮಾಡುವ ತಾಕತ್ತು ನಮ್ಮ ಸೇನೆಗಿದೆ. ಒಂದು ನಿರ್ದಿಷ್ಠ ಗುರಿ ಸೇನೆಗಿದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶದ ಸುಪ್ರೀಂಕೋರ್ಟ್​ನಲ್ಲಿ ಮೂರು ಮಹಿಳಾ ನ್ಯಾಯಮೂರ್ತಿಗಳಿದ್ದಾರೆ. ಮಹಿಳಾ ಸ್ಥಾಯಿ ಕಮೀಟಿ ಘೋಷಣೆ. ಶಕ್ತಿಶಾಲಿ ಭಾರತ ನಿರ್ಮಾಣಕ್ಕೆ ಮಹಿಳೆಯರಿಗೆ ಆದ್ಯತೆ, ಗ್ರಾಮ ಪಂಚಾಯಿತಿಯಿಂದ ಸಂಸತ್ ವರೆಗೆ ಮಹಿಳೆಯರು ಅಧಿಕಾರ ನಡೆಸಬೇಕು ಎಂದು ಮೋದಿ ಹೇಳಿದ್ದಾರೆ. ನಮ್ಮ ದೇಶದ ತಾಯಂದಿರಿಗೆ ನಮ್ಮ ನಮನಗಳು.ನಮ್ಮ ನೌಕಾಪಡೆಯ 6 ಹೆಣ್ಣು ಮಕ್ಕಳು ಸಪ್ತ ಸಾಗರಗಳನ್ನು ದಾಟಿ ಬಂದಿದ್ದಾರೆ. ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದರು. 2022 ರ ವೇಳೆಗೆ ಬಾಹ್ಯಾಕಾಶ ಕ್ಷೇತ್ರಕ್ಕೆ ಭಾರತದ ನೌಕೆಯನ್ನು ಕಳುಹಿಸಿ ಅಲ್ಲಿಯೂ ತ್ರಿವರ್ಣ ಧ್ವಜ ಹಾರಿಸುವ ಗುರಿ ನಮ್ಮದಾಗಿದೆ ಎಂದರು.