Wednesday, January 22, 2025
ಸುದ್ದಿ

ಸಿನೆಮಾದಲ್ಲಿ ನಟಿಸಲು ಬಣ್ಣ ಹಚ್ಚಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ : ಯಾವ ಸಿನೆಮಾ.? ಖಾವಂದರ ಪಾತ್ರ ಏನು..? – ಕಹಳೆ ನ್ಯೂಸ್

ಧರ್ಮಸ್ಥಳ : ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಸಿನೆಮಾವೊಂದರಲ್ಲಿ ಅತಿಥಿ ಪಾತ್ರದಲ್ಲಿ ನಡಿಸಲು ಬಣ್ಣ ಹಚ್ಚಿದ್ದಾರೆ. ಈ ಫೋಟೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಖಾವಂದರು ಸಿನೆಮಾದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂದು ಹಲವರು ಕುತೂಹಲ ವ್ಯಕ್ತಪಡಿಸಿದ್ದಾರೆ.
ಸ್ಯಾಂಡಲ್ ವುಡ್‌ನ ಖ್ಯಾತ ನಿರ್ದೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಕನ್ನಡ, ತುಳು ಭಾಷೆ ಸೇರಿದಂತೆ ಹಲವು ಭಾಷೆಗಳಲ್ಲಿ ಮೂಡಿ ಬರಲಿರುವ ಬಹು ನಿರೀಕ್ಷಿತ ಸಿನಿಮಾ ‘ವೀರ ಕಂಬಳ’ದ ಚಿತ್ರಿಕರಣ ಭರದಿಂದ ಸಾಗುತ್ತಿದ್ದು, ರಾಜ್ಯ ಸಭಾ ಸದಸ್ಯ, ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ಡಿ.ವೀರೇಂದ್ರ ಅತಿಥಿ ಕಾಣಿಸಿಕೊಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

‘ವೀರ ಕಂಬಳ’ದ ಚಿತ್ರ ತಂಡದಲ್ಲಿ ಬಹಳ ದೊಡ್ಡ ಮಟ್ಟದ ತಾರಾ ಬಳ ಇದ್ದು ಚಿತ್ರವು ಅದ್ಧೂರಿಯಾಗಿ ಮೂಡಿ ಬರಲಿದೆ.

ಇದೀಗ ಸಿನೆಮಾದಲ್ಲಿ ಪೂಜ್ಯ ಹೆಗ್ಗಡೆಯವರು ಬಣ್ಣ ಹಚ್ಚಿದ್ದು ಇವರ ಅಭಿನಯವನ್ನು ಕಣ್ತುಂಬಿಕೊಳ್ಳುವುದಕ್ಕೆ ಧರ್ಮಸ್ಥಳ ಕ್ಷೇತ್ರ ಭಕ್ತರು ಹಾಗು ಪೂಜ್ಯ ಖಾವಂದರ ಅಭಿಮಾನಿಗಳು ಬಹಳ ಕಾತುರದಿಂದ ಕಾಯ್ತಾ ಇದ್ದಾರೆ.