Recent Posts

Monday, January 20, 2025
ಸಿನಿಮಾಸುದ್ದಿ

ಹಲೋ 2023 – ಸ್ಥಳ ಒಂದೇ, ಫೋಟೋ ಬೇರೆ | ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಫೋಟೋ ವೈರಲ್..! – ಕಹಳೆ ನ್ಯೂಸ್

ವದಂತಿಯ ಲವ್‌ಬರ್ಡ್‌ಗಳಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಪರಸ್ಪರರೊಂದಿಗಿನ ಸಂಬಂಧವನ್ನು ಎಂದಿಗೂ ದೃಢಪಡಿಸಿಲ್ಲ. ಹೊಸ ವರ್ಷವನ್ನು ಸ್ವಾಗತಿಸುವ ಅವರ ಇತ್ತೀಚಿನ ಪೋಸ್ಟ್‌ಗಳು ಇಬ್ಬರೂ ನಿಜವಾಗಿಯೂ ಡೇಟಿಂಗ್ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ ಲೈಗರ್ ಅವರೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ವಿಜಯ್, ಅಪಾರ ಅಭಿಮಾಣಿಗಳನ್ನು ಹೊಂದಿದ್ದಾರೆ. ಹೊಸ ವರ್ಷದ ಶುಭಾಶಯ ತಿಲೀಸಿರುವ ವಿಜಯ್‌ ಒಂದು ಕೊಳದಲ್ಲಿ ನಿಂತು ಶರ್ಟ್‌ಲೆಸ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ, “ಈ ವರ್ಷ ನಾವೆಲ್ಲ ಗಟ್ಟಿಯಾಗಿ ನಕ್ಕಿದ್ದೇವೆ, ಸದ್ದಿಲ್ಲದೆ ಅತ್ತಿದ್ದೆವೆ, ಬೆನ್ನಟ್ಟಿದ ಗುರಿಗಳು ಹಲವು, ಕೆಲವು ಈಡೇರಿವೆ, ಕೆಲವು ಹಾಗೆ ಉಳಿದಿವೆ. ನಾವು ಎಲ್ಲವನ್ನೂ ಆಚರಿಸಬೇಕಾಗಿದೆ, ಅದು ಜೀವನ. ಹೊಸ ವರ್ಷದ ಶುಭಾಶಯಗಳು” ಎಂದು ಶುಭಕೋರಿದ್ದಾರೆ.

ಇನ್ನು ಇತ್ತ ರಶ್ಮಿಕಾ ಮಂದಣ್ಣ ಸಹ ತಮ್ಮ ಫ್ಯಾನ್ಸ್‌ಗೆ ನ್ಯೂ ಇಯರ್‌ ವಿಶ್‌ ಮಾಡಿದ್ದು, ಕಪ್ಪು ಉಡುಪಿನಲ್ಲಿ ಕೊಳದ ಬಳಿ ಮಲಗಿರುವ ಫೋಟೋ ಹಂಚಿಕೊಂಡಿದ್ದಾರೆ. “ಹಲೋ 2023” ಎಂದು ಬಿಳಿ ಹೃದಯದ ಎಮೋಜಿಯೊಂದಿಗೆ ಶೀರ್ಷಿಕೆ ನೀಡಿದ್ದಾರೆ.

ಈ ಎರಡೂ ಫೋಟೋಗಳನ್ನು ನೋಡಿದ ಅಭಿಮಾಣಿಗಳಲ್ಲಿ ಸ್ಟಾರ್‌ಗಳಿಬ್ಬರು ಗೌಪ್ಯವಾಗಿ ಮಾಲ್ಡೀವ್ಸ್‌ನಲ್ಲಿ ಹೊಸ ವರ್ಷ ಆಚರಿಸಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಆದರೆ ನಟಿ ರಶ್ಮಿಕಾ ಮಂದಣ್ಣ ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಮಾಲ್ಡೀವ್ಸ್ ಪ್ರವಾಸಕ್ಕೆ ಹೋಗಿದ್ದರು, ಆಗಲೂ ಇದೇ ಹೊಟೇಲ್‌ನಲ್ಲಿ ಫೋಟೊಶೇರ್‌ ಮಾಡಿದ್ದರು. ಆಗಿನ ಫೋಟೊ ಜತೆ ವಿಜಯ್ ದೇವರಕೊಂಡ ಅವರ ಈಗಿನ ಫೋಟೋ ಸೇರಿ ಟ್ರೋಲ್‌ ಆಗುತ್ತಿದೆ.

ವಾರಿಸು ಚಿತ್ರದ ಬಳಿಕ ಸದ್ಯ ರಶ್ಮಿಕಾ ಕೈಯಲ್ಲಿರುವುದು ಕೇವಲ ಮೂರು ಸಿನಿಮಾಗಳು. ಹಿಂದಿಯ ಅನಿಮಲ್, ಮಿಷನ್ ಮಜ್ನು ಬಿಟ್ರೆ ತೆಲುಗಿನ ಪುಷ್ಪ ದಿ ರೂಲ್ ಸಿನಿಮಾಗಳಲ್ಲಿ ಕಿರಿಕ್‌ ಬೆಡಗಿ ಬ್ಯುಸಿಯಾಗಿದ್ದಾರೆ. ಅದು ಬಿಟ್ರೆ ರಶ್ಮಿಕಾ ಅವರ ಬೇರಾವ ಸಿನಿಮಾಗಳೂ ಇನ್ನೂ ಅನೌನ್ಸ್‌ ಆಗಿಲ್ಲ.