Monday, January 20, 2025
ಸುದ್ದಿ

ಅಖಿಲ ಭಾರತ ಅಂತರ ವಿ.ವಿ. ಪುರುಷರ ವಾಲಿಬಾಲ್ ಚಾಂಪಿಯನ್ ಶಿಪ್‌ ಪ್ರಾರಂಭ: ಕುರುಕ್ಷೇತ್ರ ವಿವಿಗೆ ಭರ್ಜರಿ ಜಯ – ಕಹಳೆ ನ್ಯೂಸ್

ಉಡುಪಿ : ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ, ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿರುವ ಐದು ದಿನಗಳ ಅಖಿಲ ಭಾರತ ಅಂತರ ವಲಯ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ವಾಲಿಬಾಲ್ ಚಾಂಪಿಯನ್ ಶಿಪ್‌ ಇಂದು ವಿದ್ಯುಕ್ತವಾಗಿ ಪ್ರಾರಂಭಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆರಂಭಿಕ ಪಂದ್ಯದಲ್ಲಿ ಹಾಲಿ ರನ್ನರ್‌ ಅಪ್ ಹರ್ಯಾಣದ ಕುರುಕ್ಷೇತ್ರ ವಿವಿ ತಂಡವು ಭರ್ಜರಿ ಜಯ ದಾಖಲಿಸಿ ಶುಭಾರಂಭ ಮಾಡಿದೆ.

ಎ ಗುಂಪಿನ ಮೊದಲ ಪಂದ್ಯದಲ್ಲಿ ಕುರುಕ್ಷೇತ್ರ ವಿವಿಯು ಪೂರ್ವ ವಲಯದ ಕೊಲ್ಕತ್ತಾ ಅದಮಾಸ್ ವಿವಿ ತಂಡವನ್ನು ಮೂರು ನೇರ ಸೆಟ್‌ಗಳಲ್ಲಿ ಹಿಮ್ಮೆಟ್ಟಿಸಿತು.

ಮೊದಲ ಸೆಟ್‌ನ್ನು ಏಕಪಕ್ಷೀಯವಾಗಿ ಗೆದ್ದ ಕುರುಕ್ಷೇತ್ರ ವಿವಿ ಅಂತಿಮವಾಗಿ 25-11, 25-22, 25-23ರ ಅಂತರದ ಜಯ ದಾಖಲಿಸಿತು.

ಮೊದಲ ಸೆಟ್ ಹಿನ್ನಡೆಯ ಬಳಿಕ ಚೇತರಿಸಿಕೊಂಡ ಕೊಲ್ಕತ್ತಾ ತಂಡ ಮುಂದಿನೆರಡು ಸೆಟ್‌ಗಳಲ್ಲಿ ತೀವ್ರ ಹೋರಾಟ ನೀಡಿ ಸೋಲೊಪ್ಪಿಕೊಂಡಿತು.

ಮದ್ರಾಸ್ ವಿವಿಗೆ ರಾಜಸ್ಥಾನ ವಿವಿ ವಿರುದ್ಧ ಗೆಲುವು

ದಿನದ ಎರಡನೇ ಪಂದ್ಯದಲ್ಲಿ ದಕ್ಷಿಣ ವಲಯದ ಮದ್ರಾಸ್ ವಿವಿ ಚೆನ್ನೈ ತಂಡವು ಎದುರಾಳಿ ಪಶ್ಚಿಮ ವಲಯವನ್ನು ಪ್ರತಿನಿಧಿಸುತ್ತಿರುವ ಜೈಪುರದ ರಾಜಸ್ಥಾನ ವಿವಿ ತಂಡವನ್ನು 3-1 ಸೆಟ್‌ಗಳಿಂದ ಸೋಲಿಸಿತು.

ಮದ್ರಾಸ್ ವಿವಿ ತನ್ನ ಆರಂಭಿಕ ಪಂದ್ಯವನ್ನು 21-25, 26-24 25-23, 25-19ರ ಅಂತರದಿಂದ ಪರಾಭವಗೊಳಿಸಿತು.