Recent Posts

Sunday, January 19, 2025
ಸುದ್ದಿ

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಗೆ ಆಸರೆಯಾದ ಸನ್ನಿ ಲಿಯೋನ್ – ಕಹಳೆ ನ್ಯೂಸ್

ಮುಂಬೈ: ನೀಲಿ ಚಿತ್ರತಾರೆ ಸನ್ನಿ ಲಿಯೋನ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ತಮ್ಮ ಸಿನಿಮಾ ತಂಡದಲ್ಲಿ ಕೆಲಸ ಮಾಡುತ್ತಿದ್ದ ಪ್ರಭಾಕರ್ ಅವರಿಗೆ ಸನ್ನಿ ಲಿಯೋನ್ ಸಹಾಯ ಮಾಡಿದ್ದಾರೆ. ಈ ಬಗ್ಗೆ ಸನ್ನಿ ಲಿಯೋನ್ ತನ್ನ ಇನ್ಸ್ ಸ್ಟಾಗ್ರಾಂ ಮತ್ತು ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಭಾಕರ್ ಅವರು ಕಳೆದ ಒಂದು ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ಆದರೆ ಇದುವರೆಗೂ ಅವರ ಸಹಾಯಕ್ಕೆ ಯಾರು ಮುಂದೆ ಬರಲಿಲ್ಲ. ಆದರೆ ಈಗ ಸ್ವತಃ ಸನ್ನಿ ಲಿಯೋನ್ ಅವರೇ ಸಹಾಯ ಹಸ್ತ ಚಾಚಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಕಿಡ್ನಿ ವೈಫಲ್ಯದ ವಿರುದ್ಧ ಹೋರಾಡುತ್ತಿರುವ ಸಿಬ್ಬಂದಿ ಮತ್ತು ಸ್ನೇಹಿತ ಪ್ರಭಾಕರರಿಗೆ ಸಹಾಯ ಮಾಡಲು ನನ್ನ ಪತಿ ಮತ್ತು ನಾನು ಪ್ರಯತ್ನಿಸುತ್ತಿದ್ದೇವೆ. ಅವರು ನಿಸ್ವಾರ್ಥ ವ್ಯಕ್ತಿಯಾಗಿದ್ದು, ಅನೇಕ ವರ್ಷಗಳ ಕಾಲ ನನ್ನ ಸಿನಿಮಾ ತಂಡದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಒಬ್ಬ ನಿಷ್ಠವಂತ ಸ್ನೇಹಿತರಾಗಿದ್ದಾರೆ.

ನಾವು ಒಂದು ವರ್ಷದವರೆಗೆ ಅವರ ಡಯಾಲಿಸಿಸ್ ಮತ್ತು ಔಷಧಿಗಳಿಗಾಗಿ ಹಣವನ್ನು ಪಾವತಿಸುತ್ತಿದ್ದೇವೆ. ಆದರೆ ಇದೀಗ ಅವರ ಜೀವ ಉಳಿಯಬೇಕಾದರೆ ಇವರು ಏಕೈಕ ಮಾರ್ಗವೆಂದರೆ ಕಿಡ್ನಿ ಕಸಿ ಮಾಡಿಸಿಕೊಳ್ಳಬೇಕು. ಆದ್ದರಿಂದ ನಾವು 20 ಲಕ್ಷ ರೂ.ಯನ್ನು ಕಿಡ್ನಿ ಕಸಿ ಮಾಡಿಸಿಕೊಳ್ಳಲು ನೀಡಿದ್ದೇವೆ.

ಪ್ರಭಾಕರ್ ಅವರು ಆದಷ್ಟು ಬೇಗ ಚಿಕಿತ್ಸೆ ಪಡೆದು ಚೇತರಿಸಿಕೊಂಡು ಅವರ ಹೆಂಡತಿ ಮತ್ತು ಅವರ ಮಕ್ಕಳಿಗಾಗಿ ಮನೆಗೆ ಹಿಂತಿರುಗಬೇಕು” ಎಂದು ಇನ್ಸ್ ಸ್ಟಾಗ್ರಾಂ ನಲ್ಲಿ ಬರೆದು ಸನ್ನಿ ಲಿಯೋನ್ ಫೋಟೋ ಅಪ್ಲೋಡ್ ಮಾಡಿದ್ದಾರೆ.