Tuesday, January 21, 2025
ಸುದ್ದಿ

ಜ.7ರಂದು ಶಿವಫ್ರೆಂಡ್ಸ್ ಖಂಡಿಗ-ಮೈರೋಳ್ತಡ್ಕದಲ್ಲಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ – ಕಹಳೆ ನ್ಯೂಸ್

ಶಿವ ಫ್ರೆಂಡ್ಸ್ ಕುರಾಯ –ಖಂಡಿಗ ಬಂದಾರು ವತಿಯಿಂದ ತಾಲೂಕು ವಾಲಿಬಾಲ್ ಅಸೋಸಿಯೇಶನ್ ಬೆಳ್ತಂಗಡಿ ಇದರ ಸಹಯೋಗದೊಂದಿಗೆ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ 2023 ಇದೇ ಬರುವ ಜ.7ರಂದು ಶಿವಫ್ರೆಂಡ್ಸ್ ಖಂಡಿಗ-ಮೈರೋಳ್ತಡ್ಕದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಮಂಡೂರಿನ ಧರ್ಮದರ್ಶಿಗಳಾದ ಆನಂದ ಗೌಡ ಉದ್ಘಾಟಿಸಲಿದ್ದಾರೆ. ಸಭಾಧ್ಯಕ್ಷತೆಯನ್ನು ಪ್ರಗತಿಪರ ಕೃಷಿಕರಾದ ಸುಂದರ ಗೌಡ ಖಂಡಿಗ ವಹಿಸಲಿದ್ದಾರೆ. ಇನ್ನು ಕ್ರೀಡಾಂಗಣವನ್ನು ಪದ್ಮುಂಜ ಸಿಎ ಬ್ಯಾಂಕ್ ಮ್ಯಾನೇಜರ್ ರಘುಪತಿ ಭಟ್, ಚಿರಶ್ರೀ ಅನಾಬೆ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜಾ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಪರಮೇಶ್ವರಿ ಕೆ ಗೌಡ, ಸತ್ಯಧರ್ಮ ಕಂಬಳ ಸಮಿತಿ ಅಧ್ಯಕ್ಷ ಕುಸುಮಾಧರ ಉರ್ಕಿ, ಸಿಎ ಬ್ಯಾಂಕ್ ಅಧ್ಯಕ್ಷ ರಕ್ಷಿತ ಪಣೆಕ್ಕರ, ಬಂದಾರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಬಂಗೇರ ನಾವೂರು, ವಾಲಿಬಾಲ್ ಅಸೋಸಿಯೇಶ್ನ್ ಅಧ್ಯಕ್ಷ ಯಶವಂತ ಗೌಡ ಬೆಳಾಲು, ದೇವಿಪ್ರಸಾದ್, ಮಂಜುಶ್ರೀ ಪೆಟ್ರೋಲ್ ಪಂಪ್‌ನ ಮಾಲಕ ದುರ್ಗೇಶ್, ಉಪನ್ಯಾಸಕ ಶಂಕರ್ ರಾವ್, ಸಹಶಿಕ್ಷಕ ಮಾಧವ ಗೌಡ, ಗ್ರಾ.ಪಂ ಸದಸ್ಯ ದಿನೇಶ್ ಗೌಡ ಖಂಡಿಗ, ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ರುಕ್ಮಯ ಪೂಜಾರಿ ಮುರ್ತಾಜೆ, ಗ್ರಾ.ಪಂ ಸದಸ್ಯೆ ಸುಚಿತ್ರ ಮುರ್ತಾಜೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಮೆಸ್ಕಾಂ ಪವರ್ ಮ್ಯಾನ್ ಸಮದೀಪ್ ಎಂ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.