ನಾಡಕಚೇರಿಗೆ ಸುಸಜ್ಜಿತ ಕಟ್ಟಡ ನಿರ್ಮಿಸುವ ಮೂಲಕ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದ ಬಳಿ 18.84 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಗುರುಪುರ ಹೋಬಳಿಯ ನೂತನ ನಾಡಕಚೇರಿಗೆ ಶಿಲಾನ್ಯಾಸಗೈದು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ, ಗಂಜಿಮಠ ಪಂ. ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಕುಪ್ಪೆಪದವು ಪಂ. ಅಧ್ಯಕ್ಷ ಡಿ. ಪಿ. ಹಮ್ಮಬ್ಬ, ಮುತ್ತೂರು ಪಂ. ಅಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಎಡಪದವು ಪಂ. ಅಧ್ಯಕ್ಷ ಸುಕುಮಾರ ದೇವಾಡಿಗ, ನೀರುಮಾರ್ಗ ಪಂ. ಅಧ್ಯಕ್ಷೆ ಧನವಂತಿ, ಉಳಾಯಿಬೆಟ್ಟು ಪಂ. ಅಧ್ಯಕ್ಷ ಹರಿಕೇಶ್ ಶೆಟ್ಟಿ ನಡಿಗುತ್ತು, ಕಂದಾವರ ಪಂ. ಅಧ್ಯಕ್ಷ ಉಮೇಶ್ ಮೂಲ್ಯ, ಗುರುಪುರ ಪಂ. ಉಪಾಧ್ಯಕ್ಷೆ ದಿಲ್ಶಾದ್, ಕಂದಾಯ ನಿರೀಕ್ಷಕ ಪೂರ್ಣಚಂದ್ರ, ಗ್ರಾಮ ಕರಣಿಕರಾದ ಯಮನಪ್ಪ, ಮುತ್ತಪ್ಪ, ಮೆಹಬೂಬ್, ದಿನೇಶ್, ಪಿಡಿಒಗಳಾದ ಪಂಕಜ್ ಶೆಟ್ಟಿ, ಶ್ವೇತಾ, ಪ್ರಮುಖರಾದ ಕೃಷ್ಣ ಅಮೀನ್, ಗಣೇಶ್ ಜಿ, ಪಂಚಾಯತ್ ವಾರ್ಡ್ ಸದಸ್ಯ ಅದ್ರಮೋನ್(ಅದ್ದ), ರಾಜೇಶ್ ಸುವರ್ಣ, ಸೋಹನ್ ಅತಿಕಾರಿ, ಭರತ್‌ರಾಜ್ ಕೃಷ್ಣಾಪುರ, ನಿರ್ಮಿತಿ ಕೇಂದ್ರದ ಇಂಜಿನಿಯರ್ ನವೀತ್, ಸಹಾಯಕ ಯೋಜನಾ ನಿರ್ದೇಶಕ ಶರತ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.