ಮಂಗಳೂರು: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿಎಸ್ಟಿ) ಪ್ರಾಯೋಜಕತ್ವದ ‘ವಸ್ತುಗಳ ಗುಣಲಕ್ಷಣ ಪತ್ತೆಗಾಗಿ ಅತ್ಯಾಧುನಿಕ ಉಪಕರಣಗಳು ಎಂಬ ವಿಷಯದ ಕುರಿತು ಏಳು ದಿನಗಳ ರಾಷ್ಟ್ರೀಯ ಮಟ್ಟದ ತರಬೇತಿ ಕಾರ್ಯಕ್ರಮ ಭಾರತ ಸರಕಾರದ STUTI-21 ಯೋಜನೆಯಡಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉದ್ಘಾಟಿಸಲ್ಪಟ್ಟಿತು.
ಜ.10, 2023 ರವರೆಗೆ ಮುಂದುವರಿಯುವ ಕಾರ್ಯಕ್ರಮವನ್ನು ಡಿಎಸ್ಟಿ ಪರ್ಸ್ ಇನ್ಸ್ಟ್ರುಮೆಂಟೇಶನ್ ಸೆಂಟರ್ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಎಂಹೆಚ್ಆರ್ಡಿ ಎನ್ಎಂಆರ್ ಇನ್ಸ್ಟ್ರುಮೆಂಟ್ ಸೆಂಟರ್ ಜಂಟಿಯಾಗಿ ಎನ್ಐಟಿ ವಾರಂಗಲ್, ತೆಲಂಗಾಣದ ಸಹಯೋಗದೊಂದಿಗೆ ಆಯೋಜಿಸಲಾಗಿದೆ.
ಎನ್ ಐಟಿಕೆ ಸುರತ್ಕಲ್ ಡೀನ್ (ಸಂಶೋಧನೆ ಮತ್ತು ಸಲಹೆ), ಪ್ರೊ.ಎಸ್.ಎಂ. ಕುಲಕರ್ಣಿ ಅವರು ತಮ್ಮ ಉದ್ಘಾಟನಾ ಭಾಷಣದಲ್ಲಿ ಸಂಶೋಧನಾ ಸಂಸ್ಥೆಗಳು, ಕೈಗಾರಿಕೆಗಳು ಮತ್ತು ಸರ್ಕಾರ ಇವುಗಳ ನಡುವೆ ಸ್ಥಾಪಿಸಬೇಕಾದ ಪ್ರಗತಿಯ ಮೂರು ಸ್ತಂಭಗಳಾಗಿವೆ ಎಂದು ಅಭಿಪ್ರಾಯಪಟ್ಟರು. STUTI-21 ಈ ಉದ್ದೇಶವನ್ನು ಪೂರೈಸುವ DST ಯ ಉತ್ತಮ ಚಿಂತನೆಯ ಕಾರ್ಯಕ್ರಮವಾಗಿದೆ. ಇದು ಉದ್ಯಮಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ ಮತ್ತು ‘ಆತ್ಮ ನಿರ್ಭರ್ ಭಾರತ್’ ಮಿಷನ್ನ ಉದ್ದೇಶಗಳನ್ನು ಸಾಧಿಸುತ್ತದೆ.
ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಡೀನ್ ಪ್ರೊ.ಎಂ.ಜಯಶಂಕರ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಭಾಗವಹಿಸುವವರು ಅತ್ಯಾಧುನಿಕ ಉಪಕರಣಗಳನ್ನು ಬಳಸುವ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಮತ್ತು ದೇಶದ ಪ್ರಗತಿಗೆ ಕೊಡುಗೆ ನೀಡಲು ತರಬೇತಿ ಕಾರ್ಯಕ್ರಮವನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.
ಡಿಎಸ್ಟಿ ಪರ್ಸ್ ಇನ್ಸ್ಟ್ರುಮೆಂಟೇಶನ್ ಸೆಂಟರ್ನ ಸಂಯೋಜಕಿ ಹಾಗೂ ತರಬೇತಿ ಕಾರ್ಯಕ್ರಮದ ಸಂಚಾಲಕಿ ಪ್ರೊ.ಬಿ.ವಿಶಾಲಾಕ್ಷಿ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. STUTI-21 ರ ತಾಂತ್ರಿಕ ಅಧಿಕಾರಿ ಮತ್ತು ಸಂಯೋಜಕರು. ಎನ್ಐಟಿ ವಾರಂಗಲ್ನ ಡಿ.ರವಿಕುಮಾರ್, ಯೋಜನೆ ಕುರಿತು ಸಭಿಕರಿಗೆ ಮಾಹಿತಿ ನೀಡಿದರು.
ಗೌರವ ಅತಿಥಿ ಪ್ರೊ. ಎನ್ ರಾಜೇಶ್ವರ್ ರಾವ್, ಮಾಜಿ ಡೀನ್ ಆರ್&ಸಿ, ವಾರಂಗಲ್ ಅವರು ವರ್ಚುವಲ್ಮೋಡ್ನಲ್ಲಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು.
ಡಿಎಸ್ಟಿ ಪರ್ಸ್ ಉಪಕರಣ ಕೇಂದ್ರದ ಉಪ ಸಂಯೋಜಕ ಹಾಗೂ ತರಬೇತಿ ಕಾರ್ಯಕ್ರಮದ ಸಹ ಸಂಚಾಲಕ ಪ್ರೊ.ಬೋಜ ಪೂಜಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ಸಂಯೋಜಕರಾದ ಪ್ರೊ.ಮಂಜುನಾಥ ಪಟ್ಟಾಬಿ, ಪ್ರೊ.ಭಾಸ್ಕರ್ ಶೆಣೈ, ವಿವಿಧ ವಿಭಾಗಗಳ ಅಧ್ಯಾಪಕರು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕಿ ಶಬೀನಾ ಎಂ ಖಾನ್ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ 30 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ.