Wednesday, January 22, 2025
ಸುದ್ದಿ

ಬೆಳ್ತಂಗಡಿ ಕುದ್ಯಾಡಿ ಗ್ರಾಮದಲ್ಲಿ ಚಿರತೆ ದಾಳಿಗೆ ಗೋವು ಬಲಿ – ಕಹಳೆ ನ್ಯೂಸ್

ಬೆಳ್ತಂಗಡಿ ಕುದ್ಯಾಡಿ ಗ್ರಾಮದಲ್ಲಿ ಚಿರತೆ ದಾಳಿಗೆ ಗೋವು ಬಲಿಯಾಗಿದೆ. ಇಲ್ಲಿನ ಕುದ್ಯಾಡಿ ಗ್ರಾಮದ ಕೆಳಗಿನಬೆಟ್ಟು ಮನೆಯ ಶೀನ ಪೂಜಾರಿ ಅವರು ದನವನ್ನು ಇಂದು ಬೆಳಿಗ್ಗೆ ತೋಟದಲ್ಲಿ ಮೇಯಲು ಬಿಟ್ಟಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು 11 ಗಂಟೆ ಸಮಯಕ್ಕೆ ಚಿರತೆ ದನದ ಮೇಲೆ ದಾಳಿ ಮಾಡಿದೆ. ಮನೆಯವರು ತೋಟಕ್ಕೆ ಬಂದಾಗ ಚಿರತೆ ಮನೆಯವರನ್ನು ಅಟ್ಟಾಡಿಸಿದೆ.

ಚಿರತೆಯ ದಾಳಿಗೆ ದನ ಬಲಿಯಾಗಿದೆ. ಕೂಡಲೇ ಶೀನ ಪೂಜಾರಿಯವರು ಸ್ಥಳೀಯ ಪಂಚಾಯತ್ ಸದಸ್ಯ ಶುಭಕರ್ ಅವರಿಗೆ ಕರೆ ಮಾಡಿ ತಿಳಿಸಿದ್ದು, ಅವರು ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಸುಲ್ಕೇರಿ ಪಂಚಾಯತ್ ಅಧ್ಯಕ್ಷ ನಾರಾಯಾಣ ಪೂಜಾರಿ, ಅಳದಂಗಡಿ ಉಪ ಅರಣ್ಯಧಿಕಾರಿ ಸುರೇಶ್ ಗೌಡ ಹಾಗೂ ಸ್ಥಳೀಯರು ಭೇಟಿ ನೀಡಿದ್ದಾರೆ.

ಈ ಭಾಗದಲ್ಲಿ ಕಳೆದ ಕೆಲ ಸಮಯದಿಂದ ಚಿರತೆ ನಾಯಿ, ದನ, ಕೋಳಿಗಳ ಮೇಲೆ ದಾಳಿ ಮಾಡಿದೆ. ಚಿರತೆ ಹಾವಳಿಯಿಂದ ಈ ಭಾಗದ ಜನ ಭಯಬೀತರಾಗಿದ್ದಾರೆ.

ಈಗಾಗಲೇ ಬೋನ್ ಅಳವಡಿಸಲಾಗಿದೆ. ಪರಾರಿಯಾಗಿರುವ ಚಿರತೆ ಪತ್ತೆಗೆ ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.