Sunday, January 19, 2025
ಕಾಸರಗೋಡುಯಕ್ಷಗಾನ / ಕಲೆಸುದ್ದಿ

ಕಲ್ಲಿಕೋಟೆಯ ಕಲೋತ್ಸವದಲ್ಲಿ ಯಕ್ಷಗಾನಕ್ಕೆ ಅವಮಾನ : ಚೌಕಿ ಪೂಜೆ ಸಂದರ್ಭದಲ್ಲಿ ಗಣಪತಿ ವಿಗ್ರಹದ ಮುಂದೆ ಹಚ್ಚಿದ್ದ ದೀಪವನ್ನು ಬಲವಂತವಾಗಿ ನಂದಿಸಿದ ಸಂಘಟಕರು – ಕಹಳೆ ನ್ಯೂಸ್

ಕುಂಬಳೆ: ಕಲ್ಲಿಕೋಟೆಯಲ್ಲಿನ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಸಂದರ್ಭ ಯಕ್ಷಗಾನ ಕಲೆಯನ್ನು ಸಂಘಟಕರೇ ಅವಮಾನಿಸಿದ ಘಟನೆ ಗುರುವಾರ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರದರ್ಶನ ಪೂರ್ವದಲ್ಲಿ ನಡೆಯುವ ಚೌಕಿ ಪೂಜೆ ಸಂದರ್ಭ ನುಗ್ಗಿ ಬಂದ ಸಂಘಟಕರು ಗಣಪತಿ ವಿಗ್ರಹದ ಮುಂದೆ ಹಚ್ಚಿದ್ದ ದೀಪವನ್ನು ಬಲವಂತವಾಗಿ ನಂದಿಸಿದರು.

ಈ ಸಂದರ್ಭ ಮಾಧ್ಯಮದವರನ್ನು ತಡೆಹಿಡಿದಿದ್ದರಿಂದ ಕೃತ್ಯದ ಚಿತ್ರೀಕರಣಕ್ಕೆ ಅವಕಾಶವಾಗಿರಲಿಲ್ಲ.ಕೃತ್ಯದ ಬಗ್ಗೆ ಪೊಲೀಸರಿಗೆ ದೂರು ನೀಡಲಾಯಿತು. ಕೊನೆಗೆ ಪೊಲೀಸರು ಕಲಾವಿದರ ಮನವೊಲಿಸಿ ವೇದಿಕೆಯಲ್ಲಿ ಪ್ರದರ್ಶನ ನೀಡುವಂತೆ ಮಾಡಿದರು.

ದೇವರು ಕ್ಷಮಿಸಲಾರ
ಸಂಘಟಕರ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ನನ್ನ 22 ವರ್ಷಗಳ ಕಲಾ ಜೀವನದಲ್ಲಿ ಇಂತಹ ಅನುಭವ ಪ್ರಥಮ ಎಂದು ಯಕ್ಷಗಾನ ಗುರು ಮಾಧವ ನೆಟ್ಟಣಿಗೆ ಪ್ರತಿಕ್ರಿಯಿಸಿದರಲ್ಲದೆ, ಸಂಘಟನ ಸಮಿತಿಯವರು ಬಹಿರಂಗ ಕ್ಷಮೆ ಯಾಚಿಸದೆ ವೇದಿಕೆ ಏರುವುದಿಲ್ಲ ಎಂದು ಪ್ರತಿಭಟಿಸಿದರು. “ನಾವು ಅವರನ್ನು ಕ್ಷಮಿಸಿದರೂ ದೇವರು ಕ್ಷಮಿಸಲಾರ’ ಎಂದು ಆಕ್ರೋಶ ವ್ಯಕ್ತಪಡಿಸಿದರು.