Recent Posts

Sunday, January 19, 2025
ಸಿನಿಮಾ

ತನ್ನ ಸೀಮಂತದಲ್ಲಿ ಖುಷಿಯಾಗಿ ಕುಣಿದು ಕುಪ್ಪಳಿಸಿದ ನಟಿ ರಂಭಾ- ಫೋಟೋ ವೈರಲ್! – ಕಹಳೆ ನ್ಯೂಸ್

ಟೊರಂಟೊ: ಬಹುಭಾಷಾ ನಟಿ ರಂಭಾ ತಮ್ಮ ಮೂರನೇ ಮಗುವಿನ ಆಗಮನದ ಖುಷಿಯಲ್ಲಿದ್ದಾರೆ. ಇತ್ತೀಚಿಗೆ ಸೀಮಂತ ಕಾರ್ಯಕ್ರಮ ಕೆನಡಾದಲ್ಲಿ ಜರುಗಿದ್ದು, ರಂಭಾ ಕುಣಿದು ಕುಪ್ಪಳಿಸಿದ್ದಾರೆ.

ರಂಭಾ ಉದ್ಯಮಿ ಇಂದ್ರಕುಮಾರ್ ಪತ್ಮನಾಥನ್ ಅವರನ್ನು 2010ರಲ್ಲಿ ಮದುವೆಯಾಗಿದ್ದರು. ಈಗಾಗಲೇ ಅವರಿಗೆ ಲಾನ್ಯ ಹಾಗೂ ಸಾಶಾ ಹೆಣ್ಣು ಮಕ್ಕಳಿದ್ದು, ಈಗ ಮೂರನೇ ಮಗುವಿನ ಆಗಮನಕ್ಕೆ ಕಾಯುತ್ತಿದ್ದಾರೆ. ಸದ್ಯ ರಂಭಾ ತನ್ನ ಪತಿ ಹಾಗೂ ಮಕ್ಕಳ ಜೊತೆ ಕೆನಡಾದಲ್ಲಿ ವಾಸಿಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೆನಡಾದಲ್ಲಿರುವ ನಿವಾಸದಲ್ಲಿ ರಂಭಾ ಅವರ ಸೀಮಂತ ಕಾರ್ಯಕ್ರಮ ಸಂಪ್ರಾದಾಯದಂತೆ ನಡೆಯಿತು. ಈ ಕಾರ್ಯಕ್ರಮದಲ್ಲಿ ಅವರ ಪತಿ ಇಂದ್ರಕುಮಾರ್, ಲಾನ್ಯ ಹಾಗೂ ಸಾಶಾ ಕೂಡ ಭಾಗಿಯಾಗಿದ್ದರು.

ಸೋಮವಾರ ರಂಭಾ ಅವರ ಸೀಮಂತ ಕಾರ್ಯಕ್ರಮ ಜರುಗಿತ್ತು. ಕಾರ್ಯಕ್ರಮದ ಎಲ್ಲಾ ಫೋಟೋಗಳನ್ನು ರಂಭಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಂಭಾ ತುಂಬು ಗರ್ಭೀಣಿಯಾಗಿದ್ದರೂ, ತನ್ನ ಸೀಮಂತದ ಕಾರ್ಯಕ್ರಮದಲ್ಲಿ ಸಂಬಂಧಿಕರ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.