Sunday, January 19, 2025
ಸುದ್ದಿ

ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ನಿಧಿ ಯು ಆಚಾರ್‌ ಗೆ ಅಂತರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ – ಕಹಳೆ ನ್ಯೂಸ್

ದಿನಾಂಕ : 26-12-2022 ರಿಂದ 28-12-2022 ರ ವರೆಗೆ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪದಲ್ಲಿ ಇಂಡಿಯಾ ಸ್ಕೂಲ್‌ ಗೇಮ್ಸ್‌ ಸ್ಪೋರ್ಟ್ಸ್‌ ಫೌಂಡೇಶನ್‌ ನ (S. G. S. D. F India) ವತಿಯಿಂದ ನಡೆಸಲಾದ ಮೂರನೇ ಅಂತರಾಷ್ಟ್ರೀಯ 19 ವರ್ಷದೊಳಗಿನ ಯೋಗ ಚಾಂಪಿಯನ್‌ ಶಿಪ್ ನಲ್ಲಿ ಕಾರ್ಕಳ ಕ್ರಿಯೇಟಿವ್‌ ಕಾಲೇಜಿನ ಪೂರ್ವ ವಿದ್ಯಾರ್ಥಿನಿ ನಿಧಿ ಯು ಆಚಾರ್‌ ಭಾರತವನ್ನು ಪ್ರತಿನಿಧಿಸಿ ಬಂಗಾರದ ಪದಕವನ್ನು ಗಳಿಸಿರುತ್ತಾರೆ. ನಿಧಿ ಯು ಆಚಾರ್‌ ಬಾಲ್ಯದಿಂದಲೂ ಅನೇಕ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ಪ್ರತಿಭೆಯಾಗಿದ್ದಾರೆ. ಕುಮಾರಿ ನಿಧಿ ಕಾರ್ಕಳದಉದಯ ಆಚಾರ್‌ ಮತ್ತು ಲತಾ ರವರ ಪುತ್ರಿ. ವಿದ್ಯಾರ್ಥಿನಿಯ ಈ ಸಾಧನೆಯನ್ನು ಕ್ರಿಯೇಟಿವ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿದ್ವಾನ್‌ ಗಣಪತಿ ಭಟ್‌, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಅಭಿನಂದಿಸಿದ್ದಾರೆ. ಈಕೆ ಅಂತರಾಷ್ಟ್ರೀಯ ಯೋಗಗುರು ಶ್ರೀ ನರೇಂದ್ರ ಕಾಮತ್‌ ರವರಲ್ಲಿ ಯೋಗಭ್ಯಾಸ ತರಬೇತಿಯನ್ನು ಪಡೆಯುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು