Recent Posts

Sunday, January 19, 2025
ಕ್ರೈಮ್ದಕ್ಷಿಣ ಕನ್ನಡರಾಜ್ಯಸುದ್ದಿ

ಮಂಗಳಮುಖಿಯಾಗಿ ಲಿಂಗಪರಿವರ್ತನೆ ಮಾಡಿಸಿಕೊಂಡ ಬಂಟ್ವಾಳ ಮೂಲದ ಮುಸ್ಲಿಂ ಯುವಕ.! ಆಡಿಯೋ ವೈರಲ್​ ಬೆನ್ನಲ್ಲೇ ಆಘಾತಕಾರಿ ವಿಷಯ ಚರ್ಚೆ – ಕಹಳೆ ನ್ಯೂಸ್

ಮಂಗಳೂರು: ಬಂಟ್ವಾಳ ಮೂಲದ ಮುಸ್ಲಿಂ ಯುವಕನೊಬ್ಬ ಮಂಗಳಮುಖಿಯರ ಜಾಲಕ್ಕೆ ಸಿಲುಕಿ ಲಿಂಗಪರಿವರ್ತನೆ ಮಾಡಿಸಿಕೊಂಡ ಆತಂಕಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈತನ ಜತೆ ಸಂಬಂಧಿಕರು ಮಾತುಕತೆ ನಡೆಸಿರುವ ಆಡಿಯೋ ವೈರಲ್​ ಆಗಿದ್ದು, ಇಂತಹ ಹಲವು ಘಟನೆಗಳು ಮಂಗಳೂರನ್ನು ಕೇಂದ್ರೀಕರಿಸಿ ನಡೆಯುತ್ತಿರುವ ಆತಂಕಕಾರಿ ಮಾಹಿತಿಗಳು ಹರಿದಾಡುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಾಗಲೇ ಮದ್ವೆ ಆಗಿ ಮಕ್ಕಳು ಇರುವವರೂ ಕೂಡ ಪತ್ನಿಗೆ ವಿಚ್ಛೇದನ ನೀಡಿ ಲಿಂಗ ಪರಿವರ್ತಿಸಿಕೊಂಡು ಹೆಣ್ಣಾಗಿದ್ದಾರೆ..!

ಪ್ರಸಕ್ತ ತುಮಕೂರಿನಲ್ಲಿ ನೆಲೆಸಿರುವ ಬಂಟ್ವಾಳ ಮೂಲದ ಯುವಕ ಮಂಗಳಮುಖಿಯಾಗಿ ಲಿಂಗ ಬದಲಾಯಿಸಿಕೊಂಡಿದ್ದಾನೆ. ಇದೇ ರೀತಿ ಹಲವು ಯುವಕರು ಈ ರೀತಿಯ ಜಾಲಕ್ಕೆ ಬಲಿಯಾಗಿರುವ ಸಾಧ್ಯತೆ ಬಗ್ಗೆ ಶಂಕೆ ವ್ಯಕ್ತವಾಗುತ್ತಿದೆ.

ಈ ಜಾಲದ ಬೆನ್ನುಹತ್ತಿರುವ ಯುವ ಪಡೆಯೊಂದು ಇದರ ಹಿಂದಿರುವ ಶಕ್ತಿ ಹಾಗೂ ಅವರಿಗಿರುವ ಲಾಭ ಏನು ಎಂಬುದರ ಪತ್ತೆಗೆ ಮುಂದಾಗಿದೆ. ವಿವಾಹಿತರಾಗಿ ಮಕ್ಕಳು ಹೊಂದಿದ್ದವರು ಕೂಡ ವಿಚ್ಛೇದನ ನೀಡಿ ಲಿಂಗ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಬಂಟ್ವಾಳ, ದೇರಳಕಟ್ಟೆ, ಮಂಗಳೂರು ಭಾಗದಲ್ಲಿ ನಾಪತ್ತೆಯಾಗಿರುವ ಹಲವು ಯುವಕರು ಲಿಂಗಪರಿವರ್ತನೆ ಮಾಡಿಕೊಂಡು ಹೆಣ್ಣಾಗಿ ಬದಲಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಜಾಲದ ವಿರುದ್ಧ ಮುಸ್ಲಿಂ ಧಾರ್ಮಿಕ ಗುರುಗಳು ಜಾಗೃತಿ ಮೂಡಿಸುವಂತೆ ಜಾಲತಾಣಗಳಲ್ಲಿ ಸಂದೇಶಗಳು ರವಾನೆಯಾಗುತ್ತಿವೆ.