Sunday, January 19, 2025
ಕ್ರೈಮ್ದಕ್ಷಿಣ ಕನ್ನಡರಾಜ್ಯಸುದ್ದಿಸುಬ್ರಹ್ಮಣ್ಯಸುಳ್ಯ

ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಅಪ್ರಾಪ್ತ ಹಿಂದೂ ಯುವತಿಯೊಂದಿಗೆ ಸಿಕ್ಕಿಬಿದ್ದು ಧರ್ಮದೇಟು ತಿಂದ ಮುಸ್ಲಿಂ ಯುವಕ ಅಫೀದ್..! ; ಲವ್ ಜಿಹಾದ್ ನಡೆಸಲು ಯತ್ನಿಸಿದ ಜಿಹಾದಿಯ ವಿರುದ್ಧ ಸುಬ್ರಹ್ಮಣ್ಯ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲು – ಕಹಳೆ ನ್ಯೂಸ್

ಸುಳ್ಯ/ಕಡಬ : ಸುಬ್ರಹ್ಮಣ್ಯದಲ್ಲಿ ಹಿಂದೂ ಹುಡುಗಿಯ ಜತೆಗೆ ಸಿಕ್ಕಿಬಿದ್ದ ಕಲ್ಲುಗುಂಡಿ ಮೂಲದ ಮುಸ್ಲಿಂ ಹುಡುಗನಿಗೆ ಥಳಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೀಗ ಹುಡುಗಿಯ ತಂದೆ ಸುಬ್ರಹ್ಮಣ್ಯ ಠಾಣೆಯಲ್ಲಿ ಫೋಕ್ಸೋ ಪ್ರಕರಣದಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಮಗಳ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ದೂರಿನಲ್ಲಿ ತಂದೆ ಉಲ್ಲೇಖಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಯುವತಿಯನ್ನು ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ಯುವಕ ಅಫೀದ್ (20 ವರ್ಷ) ಆಕೆಯ ಜತೆಗೆ ಕಳೆದ ಒಂದು ವರ್ಷದಿಂದ ಮೊಬೈಲ್ ನಲ್ಲಿ ಚಾಟ್ ಮಾಡುತ್ತಿದ್ದ. ಸಾಲದು ಎನ್ನುವಂತೆ ಆಕೆಯನ್ನು ಎರಡು ಮೂರು ಸಲ ಭೇಟಿಯಾಗಿಯೂ ಬಂದಿದ್ದ. ಗುಟ್ಟಾಗಿ ಭೇಟಿಯಾಗಿದ್ದರಿಂದ ಯಾರಿಗೂ ಏನೂ ಗೊತ್ತಾಗಿರಲಿಲ್ಲ. ಆದರೆ ಇಬ್ಬರು ಗುರುವಾರ ಸುಬ್ರಹ್ಮಣ್ಯದ ಕುಮಾರಧಾರ ಸಮೀಪ ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ವೇಳೆ ಸಂಶಯಗೊಂಡವರು ಆತನನ್ನು ವಿಚಾರಿಸಿದ್ದಾರೆ. ಆದರೆ ಆತ ಸರಿಯಾಗಿ ಉತ್ತರಿಸದ ಹಿನ್ನೆಲೆಯಲ್ಲಿ ಆತನನ್ನು ಬೆದರಿಸಿದಾಗ ಸತ್ಯ ಮಾಹಿತಿ ಬಹಿರಂಗವಾಗಿದೆ. ಈ ವಿಚಾರ ತಿಳಿದ ವೇಳೆ ಆತನ ಮೇಲೆ ಹಿಗ್ಗಾಮುಗ್ಗಾ ಥಳಿತವಾಗಿದೆ. ರಕ್ತ ಸೋರಿಕೊಂಡು ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಸುಳ್ಯ ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಹೇಳಲಾಗುತ್ತಿದೆ.