Sunday, January 19, 2025
ಸುದ್ದಿ

ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವು; ಆರೋಪಿಗಳು ವಶಕ್ಕೆ – ಕಹಳೆ ನ್ಯೂಸ್

ಕುಂದಾಪುರ ಕೋಟೇಶ್ವರ ಗ್ರಾಮದ ಕಾಮತ್ ಪೆಟ್ರೋಲ್ ಪಂಪ್ ಎದುರಿನ ಬೊಬ್ಬರ್ಯ ದೇವಸ್ಥಾನ ಬಳಿ ಇರುವ ಮನೆಯ ಎದುರಿನ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಹಾಗೂ ನಗದು ಕಳವಾದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಾರಾಯಣ ಕೃಷ್ಣ ಆಚಾರ್ಯ ಎಂಬವರಿಗೆ ಸೇರಿದ ಮನೆಯಾಗಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಪ್ರಕರಣ ಪತ್ತೆ ಬಗ್ಗೆ ಕುಂದಾಪುರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ಪಿಎಸ್‌ಐ ಸದಾಶಿವ ಗವರೋಜಿ ಮತ್ತು ಪಿಎಸ್‌ಐ ಪ್ರಸಾದ್ ಕಲಹಾಳ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರನ್ನೊಳಗೊAಡ ವಿಶೇಷ ತಂಡ ರಚಿಸಲಾಗಿದ್ದು, ವಿಸೇಷ ಕರ್ತವ್ಯದಲ್ಲಿದ್ದ ತಂಡವು ವೃತ್ತಿಪರ ಆರೋಪಿಗಳಾದ ಹಾಶಿಮ್, ಅಬೂಬಕ್ಕರ್ ಸಿದ್ದಿಕ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಗಳಿಂದ 15ಲಕ್ಷ ಮೌಲ್ಯದ ಒಟ್ಟು 300ಗ್ರಾಂ ಚಿನ್ನ ಹಾಗೂ 1ಲಕ್ಷ ಮೌಲ್ಯದ ಒಟ್ಟು 1481ಗ್ರಾಂ ಬೆಳ್ಳಿ ಸೇರಿ ಒಟ್ಟು 16ಲಕ್ಷ ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಇನ್ನು ಆರೋಪಿಗಳು ಅಂತರ್ ರಾಜ್ಯ ವೃತ್ತಿಪರ ಚೋರರಾಗಿದ್ದು, ಈಗಾಗಲೇ ಕೇರಳ ರಾಜ್ಯದ ವಿವಿಧೆಡೆಗಳಲ್ಲಿ ದ.ಕ ಜಿಲ್ಲೆಯಲ್ಲಿ ಕೂಡಾ ಕಳ್ಳತನ ಹಾಗೂ ಇತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿರುವುದ ತನಿಖೆಯ ಸಮಯ ತಿಳಿದುಬಂದಿದೆ.