Recent Posts

Monday, January 20, 2025
ಸುದ್ದಿ

ಹೆತ್ತವರ ಬಳಿ ಮುನಿಸಿಕೊಂಡು ಗದಗದಿಂದ ಕೃಷ್ಣನಗರಿಗೆ ಬಂದಿದ್ದ ಬಾಲಕನ ರಕ್ಷಣೆ – ಕಹಳೆ ನ್ಯೂ ಸ್

ಉಡುಪಿ : ಹೆತ್ತವರ ಬಳಿ ಮುನಿಸಿಕೊಂಡು ಮನೆ ಬಿಟ್ಟು ಗದಗದಿಂದ ಉಡುಪಿ ಸೇರಿದ ಅಪ್ರಾಪ್ತ ಬಾಲಕನನ್ನು ಸಮಾಜ ಸೇವಕ ವಿಶು ಶೆಟ್ಟಿ ಸಕಾಲದಲ್ಲಿ ರಕ್ಷಿಸಿ ಉಡುಪಿಯ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸುವ ಮೂಲಕ ಸಂಭಾವ್ಯ ದುರಂತವನ್ನು ತಪ್ಪಿಸಿದ್ದಾರೆ. ಬಾಲಕ 8ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಶನಿವಾರ ಬೆಳಗಿನ ಜಾವ 3 ಗಂಟೆಗೆ ನಗರದಲ್ಲಿ ವಿಶು ಶೆಟ್ಟಿ ಅವರ ಕಣ್ಣಿಗೆ ಬಿದ್ದಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾತನಾಡಿಸಿದಾಗ ಬಾಲಕ ಕೆಲಸಕ್ಕಾಗಿ ಉಡುಪಿಗೆ ಬಂದಿರುವುದಾಗಿ ತಿಳಿಸಿದ್ದಾನೆ. ಮತ್ತಷ್ಟು ಆಳವಾಗಿ ವಿಚಾರಿಸಿದಾಗ ಹೆತ್ತವರ ಬಳಿ ಮುನಿಸಿಕೊಂಡು ಮನೆ ಬಿಟ್ಟು ಉಡುಪಿಗೆ ಬಂದಿರುವ ವಿಷಯವನ್ನು ಹೇಳಿದ್ದಾನೆ. ವಿಶು ಶೆಟ್ಟಿ ತಕ್ಷಣ ಬಾಲಕನನ್ನು ವಶಕ್ಕೆ ಪಡೆದು ಆತನ ಹೆತ್ತವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಇದೀಗ ಬಾಲಕನನ್ನು ಕರೆದೊಯ್ಯಲು ಹೆತ್ತವರು ಉಡುಪಿಗೆ ಹೊರಟಿರುವ ಬಗ್ಗೆ ಮಾಹಿತಿ ಲಭಿಸಿದೆ.

ಉಡುಪಿಯಲ್ಲಿ ಬೀದಿಪಾಲಾದ ವೃದ್ಧರಿಗೆ, ನಿರ್ಗತಿಕರಿಗೆ ಸರ್ಕಾರಿ ಪುನರ್ವಸತಿ ಕೇಂದ್ರವಿಲ್ಲದಿರುವುದರ ಬಗ್ಗೆ ಜಿಲ್ಲಾಡಳಿತಕ್ಕೆ, ಇಲಾಖೆಗಳಿಗೆ ಮಾಹಿತಿ ನೀಡಿ ನೀಡಿ ಸಾಕಾಗಿದೆ. ಇಂತಹ ಅಪ್ರಾಪ್ತ ಬಾಲಕರು ಬೀದಿಯಲ್ಲಿ ಪತ್ತೆಯಾದಾಗ ಅವರನ್ನು ಎಲ್ಲಿ ಸೇರಿಸುವುದು ಎಂಬುದೇ ಯಕ್ಷ ಪ್ರಶ್ನೆಯಾಗಿದೆ ಎಂದು ವಿಶು ಶೆಟ್ಟಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.