Saturday, November 23, 2024
ಸುದ್ದಿ

ವಿಶೇಷಚೇತನ ಮಕ್ಕಳನ್ನ ಕೋರ್ಟ್ ಗೆ ಕರೆತಂದು ಅಚ್ಚರಿ ಮೂಡಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ –ಕಹಳೆ ನ್ಯೂಸ್

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರು ತಮ್ಮ ಇಬ್ಬರು ಅಂಗವಿಕಲ ಸಾಕು ಪುತ್ರಿಯರೊಂದಿಗೆ ಕೋರ್ಟ್ಗೆ ಆಗಮಿಸಿ, ಅಲ್ಲಿದ್ದ ನ್ಯಾಯಮೂರ್ತಿಗಳು ಹಾಗೂ ವಕೀಲರಿಗೆ ಅಚ್ಚರಿ ಮೂಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಜೆಐ ಡಿ.ವೈ. ಚಂದ್ರಚೂಡ್ ಅವರಿಗೆ ಮಾಹಿ (೧೬) ಹಾಗೂ ಪ್ರಿಯಾಂಕಾ (೨೦) ಇಬ್ಬರು ಸಾಕು ಪುತ್ರಿಯರಿದ್ದಾರೆ. ಇವರಿಬ್ಬರೂ ವಿಶೇಷಚೇತನರಾಗಿದ್ದು, ಮಕ್ಕಳು ತಮ್ಮ ತಂದೆಯ ಮುಂದೆ ಸುಪ್ರೀಂ ಕೋರ್ಟ್ ಕಾರ್ಯಕಲಾಪಗಳನ್ನು ನೋಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ಮಕ್ಕಳ ಆಸೆಯನ್ನು ಪೂರೈಸುವ ಉದ್ದೇಶದಿಂದ ಚಂದ್ರಚೂಡ್ ಅವರು ಎಲೆಕ್ಟ್ರಿಕ್ ಚೇರ್‌ಗಳಲ್ಲಿ ಕುಳಿತಿದ್ದ ತಮ್ಮ ಇಬ್ಬರು ಹೆಣ್ಣುಮಕ್ಕಳ ಜತೆ ಬೆಳಿಗ್ಗೆ ೧೦.೩೦ಕ್ಕೆ ನ್ಯಾಯಾಂಗದ ಕಾರ್ಯಗಳು ಆರಂಭವಾಗುವುದಕ್ಕೂ ಮುನ್ನ ಆಗಮಿಸಿ, ವಕೀಲರ ಪ್ರವೇಶ ದ್ವಾರದ ಮೂಲಕ ಕೋರ್ಟ್ ಕೊಠಡಿಗೆ ಕರೆದುಕೊಂಡು ಹೋಗಿದ್ದಾರೆ. ಪೇಕ್ಷ್ಷಕರ ಗ್ಯಾಲರಿ ಮೂಲಕ ನ್ಯಾಯಾಲಯದ ಕೊಠಡಿ ತೋರಿಸಿ, ಕೋರ್ಟ್ ಕಾರ್ಯ ನಿರ್ವಹಣೆ ಬಗ್ಗೆ ವಿವರಿಸಿದರು.

ಬಳಿಕ ರೂಮ್ ನಂಬರ್ ೧ರಲ್ಲಿ ಸಿಜೆಐ ಕೊಠಡಿಗೆ ಕರೆದುಕೊಂಡು ಹೋಗಿ ಕೋರ್ಟ್ ಹೇಗೆ ಕಾರ್ಯ ನಿರ್ವಹಿಸುತ್ತದೆ? ನ್ಯಾಯಮೂರ್ತಿಗಳು ಎಲ್ಲಿ ಕುಳಿತುಕೊಳ್ಳುತ್ತಾರೆ? ವಕೀಲರು ಯಾವ ಸ್ಥಳದಲ್ಲಿ ನಿಂತು ವಾದ ಮಂಡಿಸುತ್ತಾರೆ..? ಎಂಬ ಸಂಗತಿಗಳನ್ನು ತಿಳಿಸಿಕೊಟ್ಟರು. ಬಳಿಕ ತಮ್ಮ ಚೇಂಬರ್‌ಗೆ ಕರೆದುಕೊಂಡು ಹೋಗಿ ಅಲ್ಲಿದ್ದ ಸಿಬ್ಬಂದಿಗೆ ತಮ್ಮ ಮಕ್ಕಳನ್ನು ಪರಿಚಯಿಸಿದರು.

ನ್ಯಾ. ಚಂದ್ರಚೂಡ್ ಅವರಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. ಅಭಿನವ್ ಬಾಂಬೆ ಹೈಕೋರ್ಟ್ ವಕೀಲರಾಗಿದ್ದರೆ, ಮತ್ತೊಬ್ಬ ಮಗ ಚಿಂತನ್ ಲಂಡನ್‌ನ ಬ್ರಿಕ್ ಕೋರ್ಟ್ ಚೇಂಬರ್ ನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ.
ಚಂದ್ರಚೂಡ್ ಅವರು ಮೇ ೧೩, ೨೦೧೬ ರಂದು ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರಾಗಿ ನೇಮಕಗೊಂಡರು. ಅದಕ್ಕೂ ಮೊದಲು, ಅವರು ಅಕ್ಟೋಬರ್ ೩೧, ೨೦೧೩ ರಿಂದ ಅಲಹಾಬಾದ್ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು.ಅವರು ಮಾರ್ಚ್ ೨೯, ೨೦೦೦ ರಿಂದ ಬಾಂಬೆ ಹೈಕೋರ್ಟ್ನ ನ್ಯಾಯಾಧೀಶರೂ ಆಗಿದ್ದಾರೆ. ಡಿವೈ ಚಂದ್ರಚೂಡ್ ಅವರು ಮಹಾರಾಷ್ಟ್ರ ನ್ಯಾಯಾಂಗ ಅಕಾಡೆಮಿಯ ನಿರ್ದೇಶಕರೂ ಆಗಿದ್ದರು. ನ್ಯಾಯಾಧೀಶರಾಗಿ ನೇಮಕಗೊಳ್ಳುವವರೆಗೆ, ಅವರು ೧೯೯೮ ರಿಂದ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದರು.