Recent Posts

Monday, January 20, 2025
ಸುದ್ದಿ

ಪಚ್ಚನಾಡಿ ಡಂಪಿ0ಗ್ ಯಾರ್ಡ್ ಗೆ ಬೆಂಕಿ : ದುರ್ವಾಸನೆ ಮತ್ತು ಉಸಿರಾಟದ ತೊಂದರೆಯಿ0ದ ಜನರಲ್ಲಿ ಆತಂಕ –ಕಹಳೆ ನ್ಯೂಸ್

ಮಂಗಳೂರು: ಮಂಗಳೂರಿನ ಪಚ್ಚನಾಡಿಯಲ್ಲಿರುವ ಮಹಾನಗರ ಪಾಲಿಕೆ ತಾಜ್ಯ ವಿಲೇವಾರಿ ಘಟಕದಲ್ಲಿ ನಿನ್ನೆ ಬೆಂಕಿ ಕಾಣಿಸಿಕೊಂಡಿದ್ದು, ಈ ಬೆಂಕಿ ಇನ್ನೂ ಆರಿಲ್ಲ. ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರಿಯುತ್ತಿದೆ.
ಡAಪಿAಗ್ ಯಾರ್ಡ್ನಲ್ಲಿ ಶುಕ್ರವಾರ ಅಪರಾಹ್ನ 2 ಗಂಟೆ ಸುಮಾರಿಗೆ ಭಾರೀ ಅಗ್ನಿ ಕಾಣಿಸಿಕೊಂಡಿದ್ದು, ಇದರಿಂದ ಕುಡುಪು ಪ್ರದೇಶ ಸೇರಿದಂತೆ ಆಸುಪಾಸಿನ ಜನತೆಗೆ ಆತಂಕಿತರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆAಕಿ ಅವಘಡದ ತಾಣದಿಂದ ಹೊರ ಸೂಸುತ್ತಿರುವ ದಟ್ಟವಾದ ಹೊಗೆ ಪಚ್ಚನಾಡಿ ಪ್ರದೇಶ ಮಾತ್ರವಲ್ಲದೆ, ಕಾವೂರು, ಬೋಂದೆಲ್, ಮೇರಿಹಿಲ್ ಹೆಲಿಪ್ಯಾಡ್ ಮತ್ತಿತರ ಕಡೆಗಳಿಗೂ ವ್ಯಾಪಿಸಿದ್ದು, ಸ್ಥಳೀಯ ಜನರು ದುರ್ವಾಸನೆ, ಉಸಿರಾಟದ ತೊಂದರೆ ಮತ್ತಿತರ ಸಮಸ್ಯೆಗಳಿಂದಾಗಿ ಆತಂಕಿತರಾಗಿದ್ದಾರೆ.

ಅಗ್ನಿಶಾಮಕ ಸೇವೆಯ ಪಾಂಡೇಶ್ವರ ಮತ್ತು ಕದ್ರಿ ಠಾಣೆಗಳ ಹಾಗೂ ನವ ಮಂಗಳೂರು ಬಂದರಿನ ಏಳೆಂಟು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದವು.

ಮಹಾನಗರ ಪಾಲಿಕೆಯ ಅರ್ಥ್ ಮೂವರ್‌ಗಳ ಹೊರತಾಗಿ, ಸರಕಾರದ ಅಗ್ನಿ ಶಾಮಕ ದಳ, ಎಂಎಸ್‌ಇಝಡ್, ಕೆಐಒಸಿಎಲ್, ಎಚ್‌ಪಿಸಿಎಲ್, ಎಂಸಿಎಫ್, ಏರ್‌ಪೋರ್ಟ್ ಗಳ ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದವು.

ಹೊಗೆ ಮತ್ತು ಗಾಳಿಯಿಂದಾಗಿ ಬೆಂಕಿ ತಗುಲಿದ ಕೆಲವು ಭಾಗಗಳು ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಅಂತಹ ಕಡೆಗಳಲ್ಲಿ ಬೆಂಕಿ ಶಮನಗೊಳಿಸುವ ಕಾರ್ಯ ನಡೆದಿದೆ.