Recent Posts

Monday, January 20, 2025
ಸುದ್ದಿ

ಆನ್ ಲೈನ್‌ನಲ್ಲಿ ಫುಡ್ ತರಿಸಿ ಸೇವಿಸಿದ್ದ ವಿದ್ಯಾರ್ಥಿನಿ ಸಾವು – ಕಹಳೆ ನ್ಯೂಸ್

ಕಾಸರಗೋಡು : ಆನ್ ಲೈನ್‌ನಲ್ಲಿ ಫುಡ್ ತರಿಸಿ ಸೇವಿಸಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಕಾಸರಗೋಡಿನ ಪೆರುಂಬಳ ಬೇನೂರಿನಲ್ಲಿ ನಡೆದಿದೆ. ಬೇನೂರು ತಲಕ್ಲಾಯಿಯ ಅಂಜುಶ್ರಿ ಪಾರ್ವತಿ(19) ಮೃತಪಟ್ಟ ದುರ್ಧೈವಿ. ಈಕೆ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಶಾಲೆಯ ಬಿ.ಕಾಂ ವಿದ್ಯಾರ್ಥಿನಿಯಾಗಿದ್ದಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೋಟೆಲ್‌ನಿಂದ ತರಿಸಿದ್ದ ಆಹಾರ ಸೇವಿಸಿ ಅಸ್ವಸ್ಥಳಾಗಿದ್ದ ಪಾರ್ವತಿ ಗಂಭೀರ ಸ್ಥಿತಿಗೆ ತಲುಪಿದ್ದಳು. ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾಳೆ.
ಅಂಜುಶ್ರೀ ಮತ್ತು ಆಕೆಯ ಸ್ನೇಹಿತರು ಡಿಸೆಂಬರ್ 31 ರಂದು ಅಲ್ ರೊಮ್ಯಾನ್ಸಿಯಾ ಹೋಟೆಲ್‌ನಿಂದ ಕೇರಳದ ವಿಶೇಷ ಬಿರಿಯಾನಿ ಕುಜಿಮಂತಿಯನ್ನು ಆರ್ಡರ್ ಮಾಡಿ ಸೇವಿಸಿದರು. ಮರುದಿನ ಅಂಜುಶ್ರೀ ಕೂಡ ಅದೇ ಆಹಾರವನ್ನು ಸೇವಿಸಿದಳು ಎಂದು ಅಂಜುಶ್ರೀ ಸಹೋದರಿ ಅನುಶ್ರೀ ಬಹಿರಂಗಪಡಿಸಿದ್ದಾರೆ. ಅನುಶ್ರೀ ಪ್ರಕಾರ, ಆಕೆಯು ಸೇರಿದಂತೆ ನಾಲ್ಕು ಜನರು ಆಹಾರವನ್ನು ಸೇವಿಸಿದ್ದಾರೆ ಮತ್ತು ಅವರಲ್ಲಿ ಇಬ್ಬರಿಗೆ ತಕ್ಷಣ ವಾಂತಿ ಮತ್ತು ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕಾಸರಗೋಡಿನ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದಾಗ್ಯೂ, ಚಿಕಿತ್ಸೆ ಫಲಿಸದೇ ಅಂಜುಶ್ರೀ ಕೊನೆಯುಸಿರೆಳೆದಳು.

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಂದು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗುವುದು. ಮೇಲ್ಪರಂಬ ಠಾಣಾ ಪೊಲೀಸರು ಅಸಹಜ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ವಿಷಹಾರ ಸೇವನೆಯಿಂದ ವಿದ್ಯಾರ್ಥಿನಿ ಮೃತಪಟ್ಟ ಹಿನ್ನಲೆಯಲ್ಲಿ ಸಮಗ್ರ ತನಿಖೆಗೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಆದೇಶ ನೀಡಿದ್ದಾರೆ. ಈ ಕುರಿತು ತುರ್ತು ವರದಿ ನೀಡುವಂತೆ ಆಹಾರ ಸುರಕ್ಷಾ ಆಯುಕ್ತರಿಗೆ ಆದೇಶ ನೀಡಿದ್ದಾರೆ ಜಿಲ್ಲಾ ವೈದ್ಯಾಧಿಕಾರಿಯವರಿಂದ ಸಚಿವರು ವರದಿ ನೀಡುವಂತೆ ಆದೇಶಿದ್ದಾರೆ.

ಇತ್ತೀಚೆಗಷ್ಟೇ ಕೇರಳದ 33 ವರ್ಷ ವಯಸ್ಸಿನ ನರ್ಸ್ವೊಬ್ಬರು ಫುಡ್‌ಪಾಯ್ಸನ್‌ನಿಂದ ಮೃತಪಟ್ಟಿದ್ದು ವರದಿಯಾಗಿತ್ತು. ಈ ನರ್ಸ್ ‘ಹೋಟೆಲ್ ಪಾರ್ಕ್’ ಎಂಬ ಹೆಸರಿನ ರೆಸ್ಟೋರೆಂಟ್‌ನಿAದ ಅಲ್ ಫಹಾಮ್ (ಅರೇಬಿಯನ್ ಚಿಕನ್) ಆರ್ಡರ್ ಮಾಡಿ ತರಿಸಿ ತಿಂದು ಕೆಲವೇ ಹೊತ್ತಲ್ಲಿ ತೀವ್ರ ಅಸ್ವಸ್ಥರಾಗಿ ಮೃತಪಟ್ಟಿದ್ದರು.
ನರ್ಸ್ ಸಾವಿನ ಬೆನ್ನಲ್ಲೇ ಕೇರಳ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು, ಕೊಟ್ಟಾಯಂ, ಎರ್ನಾಕುಲಂ, ಕೊಲ್ಲಂ ಮತ್ತು ತಿರುವನಂತಪುರA ಜಿಲ್ಲೆಗಳ ಒಟ್ಟು 40 ಹೋಟೆಲ್‌ಗಳ ಬಾಗಿಲು ಮುಚ್ಚಿಸಿ, 62 ಹೋಟೆಲ್/ರೆಸ್ಟೋರೆಂಟ್‌ಗಳಿಗೆ ದಂಡ ವಿಧಿಸಿದ್ದರು. ಹಾಗೇ, ರಾಜ್ಯಾದ್ಯಂತ ಎಲ್ಲ ಹೋಟೆಲ್/ರೆಸ್ಟೋರೆಂಟ್‌ಗಳನ್ನೂ ಪರಿಶೀಲನೆ ಮಾಡಬೇಕು. ಆಹಾರ ಸುರಕ್ಷತಾ ನಿಯಮಗಳ ಪಾಲನೆ ಮಾಡುತ್ತಿಲ್ಲದ ಹೋಟೆಲ್/ರೆಸ್ಟೋರೆಂಟ್ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಅಲ್ಲಿನ ಆರೋಗ್ಯ ಸಚಿವ ವೀಣಾ ಜಾರ್ಜ್ ಈಗಾಗಲೇ ಆದೇಶ ಕೂಡ ನೀಡಿದ್ದಾರೆ.