Monday, January 20, 2025
ಸುದ್ದಿ

ವೃತ್ತಿ ಬದುಕಿಗೆ ವಿದಾಯ ಹೇಳಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ –ಕಹಳೆ ನ್ಯೂಸ್

ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳುವ ನಿರ್ಧಾರಕ್ಕೆ ಬಂದಿದ್ದಾರೆ. ಅಲ್ಲದೆ ಕೊನೆಯ ಬಾರಿಗೆ ಟೆನಿಸ್ ಅಂಗಳಕ್ಕಿಳಿಯುವುದು ಯಾವಾಗ ಎಂಬುದರ ಬಗ್ಗೆಯೂ ಮಾತನಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ ವರ್ಷ, ಸಾನಿಯಾ ಅವರ ತಂದೆ ಇಮ್ರಾನ್ ಮಿರ್ಜಾ ಅವರು ವಿಂಬಲ್ಡನ್ ಅವರ ಕೊನೆಯ ಪಂದ್ಯ ಎಂದು ಹೇಳಿದ್ದರು. ಆದರೆ ಮಿಶ್ರ ಡಬಲ್ಸ್ನ ಸೆಮಿ-ಫೈನಲ್‌ನಲ್ಲಿ ಸೋಲನುಭವಿಸಿದ್ದ ಸಾನಿಯಾ ಟೂರ್ನಿಯಿಂದ ಬರಿಗೈಯಲ್ಲಿ ವಾಪಸ್ಸಾಗಿದ್ದರು. ಬಳಿಕ ನಿವೃತ್ತಿ ನಿರ್ಧಾರದಿಂದ ಯು ಟರ್ನ್ ತೆಗೆದುಕೊಂಡಿದ್ದ ಸಾನಿಯಾ ಗಾಯದ ಕಾರಣ ನೀಡಿ ಸ್ವಲ್ಪ ಸಮಯದವರೆಗೆ ತಮ್ಮ ನಿವೃತ್ತಿ ನಿರ್ಧಾರವನ್ನು ಮುಂದೂಡಲು ನಿರ್ಧರಿಸಿದ್ದರು.
ಮುಂದಿನ ತಿಂಗಳು ನಡೆಯಲಿರುವ ದುಬೈ ಡ್ಯೂಟಿ ಚಾಂಪಿಯನ್‌ಶಿಪ್ ಟೂರ್ನಮೆಂಟ್ ಬಳಿಕ ವೃತ್ತಿ ಬದುಕಿನಿಂದ ನಿವೃತ್ತಿ ಪಡೆದುಕೊಳ್ಳುತ್ತಿರುವುದಾಗಿ ಸಾನಿಯಾ ಮಿರ್ಜಾ ಘೋಷಿಸಿದ್ದಾರೆ.

ಆರು ಗ್ರ‍್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಸಾನಿಯಾ, 2016 ರಲ್ಲಿ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು. 2005ರಲ್ಲಿ ತವರು ಕ್ಷೇತ್ರ ಹೈದರಾಬಾದ್‌ನಲ್ಲಿ ಪಂದ್ಯ ಗೆಲ್ಲುವ ಮೂಲಕ ಡಬ್ಲ್ಯೂಟಿಎ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆರು ಗ್ರ‍್ಯಾಂಡ್ ಸ್ಲ್ಯಾಮ್ ಡಬಲ್ಸ್ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವ ಸಾನಿಯಾ, 2016 ರಲ್ಲಿ ಮಹಿಳಾ ಡಬಲ್ಸ್ ಪ್ರಶಸ್ತಿಯನ್ನು ಗೆದ್ದರು

2005ರಲ್ಲಿ ತವರು ಕ್ಷೇತ್ರ ಹೈದರಾಬಾದ್‌ನಲ್ಲಿ ಪಂದ್ಯ ಗೆಲ್ಲುವ ಮೂಲಕ ಡಬ್ಲ್ಯೂಟಿಎ ಸಿಂಗಲ್ಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2007ರ ವೇಳೆಗೆ ಅವರು ಅಗ್ರ 30ರೊಳಗೆ ಪ್ರವೇಶಿಸಿದರು ಮತ್ತು ವಿಶ್ವದ 27ನೇ ಶ್ರೇಯಾಂಕವನ್ನು ಪಡೆದರು.

ಇನ್ನು ನಿವೃತ್ತಿಯ ನಂತರ ಸಾನಿಯಾ ಮಿರ್ಜಾ ಏನು ಮಾಡಲಿದ್ದೇನೆ ಎಂಬುದಕ್ಕೂ ಸ್ಪಷ್ಟನೆ ನೀಡಿದ್ದು, ‘ನಿವೃತ್ತಿಯ ನಂತರ ದುಬೈನಲ್ಲಿರುವ ತನ್ನ ಅಕಾಡೆಮಿಯತ್ತ ಗಮನ ಹರಿಸಲು ಬಯಸುತ್ತೇನೆ ಎಂದಿದ್ದಾರೆ.
36 ವರ್ಷ ವಯಸ್ಸಿನ ಸಾನಿಯಾ ಮಿರ್ಜಾ ಕಳೆದೊಂದು ದಶಕದಿಂದ ದುಬೈಯಲ್ಲಿ ವಾಸಿಸುತ್ತಿದ್ದು ಪಾಕಿಸ್ತಾನಿ ಕ್ರಿಕೆಟಿಗ್ ಶೋಯೆಬ್ ಮಲಿಕ್ ಅವರನ್ನು ವಿವಾಹವಾಗಿ, ಬಳಿಕವೂ ಭಾರತಕ್ಕಾಗಿ ತಮ್ಮ ಟೆನಿಸ್ ಆಟವನ್ನು ಮುಂದುವರಿಸಿದ್ದರು. 30 ಅಕ್ಟೋಬರ್ 2018 ರಂದು ಇಝಹಾನ್ ಮಿರ್ಜಾ ಮಲಿಕ್ ಎಂಬ ಮಗನೂ ಜನಿಸಿದ್ದ.

ಇದೀಗ ಬರೋಬ್ಬರಿ 12 ವರ್ಷಗಳ ಈ ದಂಪತಿಗಳ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಕೆಲವು ತಿಂಗಳುಗಳಿAದ ಈ ಸ್ಟಾರ್ ಜೋಡಿ ವಿಚ್ಛೇದನ ಪಡೆಯಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಈ ಇಬ್ಬರೂ ಕೂಡ ಇಲ್ಲಿಯವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.