Monday, January 20, 2025
ಸುದ್ದಿ

ಪರಿಚಿತನಂತೆ ವರ್ತಿಸಿ ಪೇಟಿಎಂನಲ್ಲಿ 2.13 ಲಕ್ಷ ಪಂಗನಾಮ – ಕಹಳೆ ನ್ಯೂಸ್

ಪರಿಚಿತನಂತೆ ವರ್ತಿಸಿ ವ್ಯಕ್ತಿಯೊಬ್ಬರಿಂದ 2.13 ಲಕ್ಷ ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಣಿಪಾಲ ನಿವಾಸಿ ಚಿತ್ರಾಂಗ್ ಜುನಿವಾಲ್ ಮೋಸ ಹೋದವರು. ಅಪರಿಚಿತ ವ್ಯಕ್ತಿಯೊಬ್ಬ ಇವರ ಮೊಬೈಲ್‌ಗೆ ಕರೆ ಮಾಡಿ ನಾನು ನಿಮ್ಮ ಅಂಕಲ್, ತಂದೆ ನಿಮ್ಮ ನಂಬರ್ ನೀಡಿದ್ರು. ತಪ್ಪಾಗಿ ನಿಮ್ಮ ಖಾತೆಗೆ 25 ಸಾವಿರ ರೂ. ಹಣ ಪಾವತಿಯಾಗಿದೆ. ಕೂಡಲೇ ಅದನ್ನು ಪೇಟಿಎಂ ಮುಖಾಂತರ ಹಿಂತಿರುಗಿಸಿ ಎಂದು ಕೇಳಿದ್ದಾನೆ.

ಆತನ ಮಾತನ್ನು ನಂಬಿದ ಚಿತ್ರಾಂಗ್ ಆತ ಹೇಳಿದ ಮೊತ್ತವನ್ನು ಆತನ ಪೇಟಿಎಂ ಖಾತೆಗೆ ಪಾವತಿ ಮಾಡಿದ್ದರು. ಆದರೆ ಖಾತೆಗೆ ಹಣ ಜಮೆ ಆಗಿಲ್ಲ ಎಂದು ಪದೇ ಪದೇ ವ್ಯಕ್ತಿ ಕರೆ ಮಾಡಿದ್ದು, ಒಟ್ಟು 2.13 ಲಕ್ಷ ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಬಳಿಕ ಮೋಸ ಹೋಗಿರುವ ವಿಚಾರ ಗೊತ್ತಾಗಿ ಕೂಡಲೇ ಚಿತ್ರಾಂಗ್ ಅವರು ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.