Sunday, January 19, 2025
ಕಾಸರಗೋಡುಕ್ರೈಮ್ಸುದ್ದಿ

ಚಿಕನ್​ ತಿಂದು ಯುವತಿ ಸಾವು ಪ್ರಕರಣಕ್ಕೆ ಟ್ವಿಸ್ಟ್​: ಶವಪರೀಕ್ಷೆ ಬೆನ್ನಲ್ಲೇ ಮೃತಳ ಮೊಬೈಲ್​ನಲ್ಲಿದ್ದ ಸ್ಫೋಟಕ ಮಾಹಿತಿ ಬಯಲು – ಕಹಳೆ ನ್ಯೂಸ್

ಕಾಸರಗೋಡು: ಚಿಕನ್​ ಬಿರಿಯಾನಿ ತಿಂದ ಬಳಿಕ ಫುಡ್ ಪಾಯ್ಸನಿಂಗ್​ನಿಂದ ಕಾಸರಗೋಡು ಮೂಲದ ಅಂಜುಶ್ರೀ ಪಾರ್ವತಿ (19) ಮೃತಪಟ್ಟ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ. ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ ಅಂಜುಶ್ರೀ ಫುಡ್​ ಪಾಯ್ಸನಿಂಗ್​ನಿಂದ ಮೃತಪಟ್ಟಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬದಲಾಗಿ ಆಕೆಯ ದೇಹದಲ್ಲಿ ವಿಷದ ಕುರುಹುಗಳು ಸಹ ಪತ್ತೆಯಾಗಿದ್ದು, ವಿಷವು ಆಕೆಯ ಲಿವರ್​ ಮೇಲೆ ಪರಿಣಾಮ ಬೀರಿ ಸಾವಿಗೀಡಾಗಿದ್ದಾಳೆ ಎಂಬ ಸ್ಫೋಟಕ ಸಂಗತಿ ಬಯಲಾಗಿದೆ.

ನಿನ್ನೆಯವರೆಗೂ ಅಂಜುಶ್ರೀ ಫುಡ್​ ಪಾಯ್ಸನಿಂಗ್​ನಿಂದ ಮೃತಪಟ್ಟಿದ್ದಾಳೆ ಎಂದೇ ನಂಬಲಾಗಿತ್ತು. ಪೇಸ್ಟ್ ರೂಪದಲ್ಲಿ ಇಲಿ ವಿಷವು ಅಂಜುಶ್ರೀ ದೇಹದಲ್ಲಿ ಪತ್ತೆಯಾಗಿರುವುದಾಗಿ ಶವ ಪರೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಾವಿಗೂ ಮುನ್ನ ಅಂಜುಶ್ರೀ ಗೂಗಲ್​ನಲ್ಲಿ ಇಲಿ ಪಾಷಾಣಕ್ಕಾಗಿ ಹುಡುಕಾಟ ನಡೆಸಿರುವುದು ಮತ್ತು ಡೆತ್​ನೋಟ್​ ಸಹ ಮೊಬೈಲ್​ನಲ್ಲಿ ಪತ್ತೆಯಾಗಿದೆ. ಆದಾಗ್ಯೂ ಕೆಮಿಕಲ್​ ಪರೀಕ್ಷಾ ವರದಿ ಬಂದ ಬಳಿಕವಷ್ಟೇ ಇದು ಆತ್ಮಹತ್ಯೆಯೋ? ಅಥವಾ ಫುಡ್​ ಪಾಯ್ಸನಿಂಗ್​​ನಿಂದ ಆದ ಸಾವೋ? ಎಂದು ಅಧಿಕೃತವಾಗಿ ಖಚಿತಪಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಅಂಜುಶ್ರೀ ಸಾವಿನ ಸುತ್ತ ಎಬ್ಬಿರುವ ನಿಗೂಢತೆಗೆ ಆದಷ್ಟು ಬೇಗ ತೆರೆ ಎಳೆಯಬೇಕೆಂದು ಆಕೆಯ ಕುಟುಂಬಸ್ಥರು ಒತ್ತಾಯ ಮಾಡಿದ್ದಾರೆ. ಆಹಾರ ಸೇವಿಸಿದ ಬಳಿಕ ಅಂಜುಶ್ರೀ ಸೇರಿದಂತೆ ಮೂವರಿಗೆ ದೈಹಿಕ ಅಸ್ವಸ್ಥತೆ ಉಂಟಾಗಿದೆ ಎಂದು ಯುವತಿಯ ಚಿಕ್ಕಪ್ಪ ಕರುಣಾಕರನ್ ತಿಳಿಸಿದ್ದಾರೆ. ಒಂದು ವೇಳೆ ಇದು ಫುಡ್ ಪಾಯ್ಸನಿಂಗ್ ಆಗದಿದ್ದರೆ ಸಾವಿಗೆ ಬೇರೆ ಕಾರಣಗಳನ್ನು ಪತ್ತೆ ಮಾಡಬೇಕು ಎಂದು ಸಂಬಂಧಿಕರು ಒತ್ತಾಯಿಸಿದ್ದಾರೆ.

ಕಾಸರಗೋಡಿನ ಚೆಮ್ನಾಡ್ ಗ್ರಾಮ ಪಂಚಾಯಿತಿಯ ತಳಕಳಾಯಿ ಗ್ರಾಮದ ಅಂಜುಶ್ರೀ, ಡಿಸೆಂಬರ್ 31 ರಂದು ಕಾಸರಗೋಡು ಪಟ್ಟಣದ ಅಡ್ಕತ್‌ಬೈಲ್‌ನಲ್ಲಿರುವ ಅಲ್ ರೊಮ್ಯಾನ್ಶಿಯಾ ರೆಸ್ಟೊರೆಂಟ್‌ನಲ್ಲಿ ಒಂದು ಫುಲ್ ಚಿಕನ್ 65, ಮಯೋನೈಸ್ ಮತ್ತು ಸಲಾಡ್ ಅನ್ನು ಆರ್ಡರ್ ಮಾಡಿದ್ದರು. ಮಧ್ಯಾಹ್ನದ ಊಟಕ್ಕೆ ಮನೆಗೆ ತಲುಪಿಸಿದ ಆಹಾರವನ್ನು ಅಂಜುಶ್ರೀ, ಆಕೆಯ ತಾಯಿ ಅಂಬಿಕಾ, ಸಹೋದರ ಶ್ರೀಕುಮಾರ್ (18) ಮತ್ತು ಸಂಬಂಧಿಕರಾದ ಶ್ರೀನಂದನ ಮತ್ತು ಸಹೋದರಿ ಅನುಶ್ರೀ ಸೇವಿಸಿದ್ದರು.

ಆಹಾರ ಸೇವಿಸಿದ ಅಂಜುಶ್ರೀ ಅಸ್ವಸ್ಥಗೊಂಡಿದ್ದಳು. ಬಳಿಕ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಾಥಮಿಕ ಚಿಕಿತ್ಸೆ ಬಳಿಕ ಆಕೆ ಮನೆಗೆ ಮರಳಿದ್ದಳು. ಆದರೆ, ಶುಕ್ರವಾರ ಬೆಳಗ್ಗೆ ಮತ್ತೆ ಪ್ರಜ್ಞಾಹೀನಳಾಗಿ ಬಿದ್ದಿದ್ದ ಆಕೆಯನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತು. ಆದಾಗ್ಯೂ, ಚಿಕಿತ್ಸೆ ಫಲಿಸದೇ ಅಂಜುಶ್ರೀ ಕೊನೆಯುಸಿರೆಳೆದಳು.

ವರ್ಷದೊಳಗೆ ಎರಡನೇ ಪ್ರಕರಣ: ಕಾಸರಗೋಡು ಜಿಲ್ಲೆಯಲ್ಲಿ ವಿಷಾಹಾರ ಸೇವಿಸಿ ಸಾವಿಗೀಡಾಗುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಕಳೆದ ಮೇ 1ರಂದು ಹೋಟೆಲ್ ಒಂದರಿಂದ ಶವರ್ಮ ಸೇವಿಸಿದ್ದ ಪ್ಲಸ್‌ಟು ವಿದ್ಯಾರ್ಥಿನಿ ಕರಿವೆಳ್ಳೂರು ನಿವಾಸಿ ದೇವನಂದಾ(17) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಈ ಘಟನೆ ಕೇರಳಾದ್ಯಂತ ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು.

ಅಧಿಕಾರಿಗಳಿಂದ ದಾಳಿ: ಆಹಾರ ವಿತರಿಸಿದ ಅಡ್ಕತ್ತಬೈಲಿನ ಹೋಟೆಲ್‌ಗೆ ಆಹಾರ ಸುರಕ್ಷಾ ವಿಭಾಗದ ಕಾಸರಗೋಡು ಜಿಲ್ಲಾ ಸಹಾಯಕ ಆಯುಕ್ತರು ಹಾಗೂ ನಗರಸಭಾ ಆರೋಗ್ಯ ವಿಭಾಗದ ಅಧಿಕಾರಿಗಳ ತಂಡ ಶನಿವಾರ ದಾಳಿ ನಡೆಸಿ, ಹೋಟೆಲ್‌ಗೆ ಬೀಗ ಜಡಿದಿದ್ದಾರೆ.

ಇಡುಕ್ಕಿಯಲ್ಲೂ ಶವರ್ಮ ಸೇವಿಸಿ ಅಸೌಖ್ಯ: ಇಡುಕ್ಕಿಯಲ್ಲಿ ಶವರ್ಮ ಸೇವಿಸಿದ ಏಳರ ಹರೆಯದ ಬಾಲಕ ಸೇರಿದಂತೆ ಒಂದೇ ಕುಟುಂಬದ ಮೂವರು ಶನಿವಾರ ಅಸೌಖ್ಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ನಡೆದಿದೆ. ಶವರ್ಮ ತಯಾರಿಸಿ ನೀಡಿದ ನೆಡುಕಂಡಂನ ಹೋಟೆಲನ್ನು ಆಹಾರ ಸುರಕ್ಷಾ ವಿಭಾಗದ ಅಧಿಕಾರಿಗಳು ಮುಚ್ಚಿದ್ದಾರೆ. (ಏಜೆನ್ಸೀಸ್​)