Friday, November 22, 2024
ಕ್ರೈಮ್ಸುದ್ದಿ

ಸೋಷಿಯಲ್ ಮೀಡಿಯಾದಲ್ಲಿ ಮೋಹದ ಜಾಲ; ಹನಿಟ್ರ್ಯಾಪ್‌ಗೆ ಬಿದ್ದವನಿಂದ 28 ಕೋಟಿ ಮೌಲ್ಯದ ಕೊಕೇನ್ ಸೀಜ್ – ಕಹಳೆ ನ್ಯೂಸ್

ಮುಂಬೈ: ಹನಿಟ್ರ್ಯಾಪ್ ಅನ್ನೋ ಮೋಹದ ಜಾಲ ಸಾಮಾನ್ಯರಿಗೆ ಅರ್ಥವಾಗಲ್ಲ. ಅದು ಅರ್ಥವಾಗುವಷ್ಟರಲ್ಲಿ ಮೋಸದ ಮೋಹನಾಂಗಿಯರ ಬಲೆಗೆ ಬಿದ್ದಾಗಿರುತ್ತೆ. ಇಲ್ಲಿ ಆಗಿರೋದು ಅದೇ. ಮುಂಬೈ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಓರ್ವ ಪ್ರಯಾಣಿಕನನ್ನ ಅರೆಸ್ಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆ ಪ್ಯಾಸೆಂಜರ್ ಬಾಯ್ಬಿಟ್ಟ ಹನಿಟ್ರ್ಯಾಪ್ ಜಾಲದ ವಿಷಯವನ್ನ ಕೇಳಿ ಶಾಕ್ ಆಗಿದ್ದಾರೆ.

28 ಕೋಟಿ ಕೊಕೇನ್ ಸಾಗಾಟ
ಮುಂಬೈ ಏರ್‌ಪೋರ್ಟ್‌ನಲ್ಲಿ ಸಿಕ್ಕಿಬಿದ್ದ ಆರೋಪಿ 28 ಕೋಟಿ ಮೌಲ್ಯದ 2.81 ಕೆಜಿ ಕೊಕೇನ್ ಸಾಗಿಸುತ್ತಿದ್ದ. ಪ್ಯಾಸೇಂಜರ್ ಬ್ಯಾಗ್‌ಗಳನ್ನ ತಪಾಸಣೆ ನಡೆಸುವಾಗ ಕೊಕೇನ್ ಬ್ಯಾಗ್ ಒಳಗೆ ಬಚ್ಚಿಟ್ಟಿದ್ದು ಪತ್ತೆಯಾಗಿದೆ. ಆ ಪ್ರಯಾಣಿಕ ಪೊಲೀಸರ ಮುಂದೆ ತಾನು ಹನಿಟ್ರ್ಯಾಪ್ ಜಾಲಕ್ಕೆ ಸಿಕ್ಕಿಬಿದ್ದ ಕಥೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಸೋಷಿಯಲ್ ಮೀಡಿಯಾದಲ್ಲಿ ಈತನಿಗೆ ಕೊಕೇನ್ ಸ್ಮಗ್ಲರ್‌ ಒಬ್ಬನ ಪರಿಚಯವಾಗಿದೆ. ಆತ ಇವನನ್ನ ಮರುಳು ಮಾಡಿ ಹನಿಟ್ರ್ಯಾಪ್ ಜಾಲಕ್ಕೆ ಬೀಳಿಸಿದ್ದಾನೆ ಎನ್ನಲಾಗಿದೆ. ಈ ಘಟನೆ ನೋಡಿದ್ರೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗೋ ಅಪರಿಚಿತರ ಬಗ್ಗೆ ಎಚ್ಚರದಿಂದ ಇರೋದೇ ಒಳ್ಳೆಯದು.