Recent Posts

Monday, April 14, 2025
ಸುದ್ದಿ

ನಾಳೆ ಧಾರವಾಡದಲ್ಲಿ `ರಾಷ್ಟ್ರೀಯ ಯುವಜನೋತ್ಸವ’ಕ್ಕೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ – ಕಹಳೆ ನ್ಯೂಸ್

ಧಾರವಾಡ : ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ 26ನೇಯ ಯುವಜನೋತ್ಸವ ಜರುಗುತ್ತಿದ್ದು, ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ರಾಷ್ಟ್ರೀಯ ಯುವಜನೋತ್ಸವದ ಯಶಸ್ವಿಗಾಗಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ವಸತಿ, ಊಟ, ಸಾರಿಗೆ, ವೇದಿಕೆ ಸೇರಿದಂತೆ ವಿವಿಧ ಕಾರ್ಯಗಳ ಕುರಿತು 17ಕ್ಕೂ ಹೆಚ್ಚು ಸಮಿತಿಗಳನ್ನು ರಚಿಸಿ, ಕಾರ್ಯಗಳ ಹಂಚಿಕೆ ಮಾಡಲಾಗಿದೆ.

ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನೆಯನ್ನು ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡುವರು. ಉದ್ಘಾಟನಾ ಕಾರ್ಯಕ್ರಮವು ಹುಬ್ಬಳ್ಳಿ ರೈಲ್ವೇ ಮೈದಾನದಲ್ಲಿ ಜರುಗುವುದು. ಜನವರಿ 13 ರಿಂದ 16 ರವರೆಗೆ ವಿವಿಧ ರೀತಿಯ ಸ್ಪರ್ಧೇಗಳು ಧಾರವಾಡ ನಗರದ ಕರ್ನಾಟಕ ಕಾಲೇಜು, ಕರ್ನಾಟಕ ವಿಶ್ವವಿದ್ಯಾಲಯ ಮತ್ತು ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯಲಿವೆ.

ರಾಷ್ಟ್ರೀಯ ಯುವಜನೋತ್ಸವದಲ್ಲಿ ಸ್ಥಳೀಯ ಕಲಾವಿದರಿಗೂ ಅವಕಾಶ ನೀಡಲು ನಿರ್ಧರಿಸಲಾಗಿದೆ. ಯುವಜನೋತ್ಸವದಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳ ಸುಮಾರು 7,500 ಜನ ಯುವ ಕಲಾವಿದರು ತಮ್ಮ ಪ್ರದರ್ಶನ ನೀಡಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಎಲ್ಲ ಪ್ರತಿನಿಧಿಗಳಗೆ, ಯೋಗಾ ಮ್ಯಾಟ್, ಧಾರವಾಡ ಪೇಢಾ, ಗರಗ ಖಾದಿ ಕೇಂದ್ರದಿಂದ ರಾಷ್ಟ್ರಧ್ವಜವಿರುವ ಒಂದು ಪ್ರೇಮ್ ಕೊಡಲು ತೀರ್ಮಾನಿಸಿದ್ದು ಈ ಎಲ್ಲ ವಸ್ತುಗಳನ್ನು ಸ್ಥಳೀಯ ಸಂಸ್ಥೆಗಳು ಹಾಗೂ ಇನ್ನಿತರ ಕಂಪನಿಗಳು ಪ್ರಾಯೋಜಕತ್ವವಹಿಸಿಕೊಳ್ಳುತ್ತಿವೆ.

ಯುವಜನೋತ್ಸವಕ್ಕೆ ಆಗಮಿಸುವ ಸ್ಪರ್ಧಾಳು ಮತ್ತು ಅತಿಥಿಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ವಿವಿಧ ವಿದ್ಯಾರ್ಥಿನಿಲಯ ಹಾಗೂ ಹೊಟೇಲ್‍ಗಳಲ್ಲಿ ಮಾಡಲಾಗುತ್ತಿದೆ. ಉತ್ತಮ ಮತ್ತು ಸಕಾಲಿಕ ಸಾರಿಗೆಯನ್ನು ಮಾಡಲು ಖಾಸಗಿ ಶಾಲಾ ಕಾಲೇಜುಗಳ ಬಸ್‍ಗಳನ್ನು ಪಡೆಯಲಾಗುತ್ತಿದೆ. ಯುವಜನೋತ್ಸವ ಕಾಲೇಜ ಕ್ಯಾಂಪಸ್‍ಗಳಲ್ಲಿ ನಡೆಯುತ್ತಿರುವುದರಿಂದ ಆಯಾ ವಿಶ್ವವಿದ್ಯಾಲಯಗಳು ಮತ್ತು ಶಾಲಾ-ಕಾಲೇಜುಗಳಿಗೆ ಯುವಜನೋತ್ಸವ ಅವಧಿಯಲ್ಲಿ ರಜೆ ಘೋಷಿಸಲು ಕ್ರಮಕೈಗೋಳ್ಳಲಾಗಿದೆ.

ಹು-ಧಾ ಅವಳಿನಗರದ ಎಲ್ಲ ಸರಕಾರಿ ಕಚೇರಿಗಳಿಗೆ ಒಂದು ವಾರಗಳ ಕಾಲ ವಿದ್ಯುತ್ ಅಲಂಕಾರ ಮಾಡಲಾಗುತ್ತಿದೆ. ಅವಳಿನಗರದ ಮುಖ್ಯ ರಸ್ತೆಗಳು, ಪ್ರವಾಸಿ ಸ್ಥಳಗಳನ್ನು ವೈಭವೀಕರಿಸಲಾಗುತ್ತಿದೆ. ಮಹಾನಗರದ ಮುಖ್ಯ ರಸ್ತೆಗಳು, ಉದ್ಯಾನವನಗಳು, ಸಾಂಸ್ಕøತಿಕ ಸ್ಥಳಗಳನ್ನು ಶೃಂಗರಿಸಲಾಗುತ್ತಿದೆ. ಒಟ್ಟಾರೆಯಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಒಂದು ವಾರಗಳ ಕಾಲ ಹಬ್ಬದ ವಾತಾವರಣ ಮೂಡುವಂತೆ ಮಾಡಲು ಕ್ರಮ ಕೈಕೊಳ್ಳಲಾಗಿದೆ.

ಕಾರ್ಯಕ್ರಮಕ್ಕೆ ಆಗಮಿಸುವ ಯುವಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಅನುಕೂಲಕ್ಕಾಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಒಂದು ಕಂಟ್ರೋಲ್ ರೂಂ ಪ್ರಾರಂಭಿಸಿ, ಅಲ್ಲಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವಂತೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲು ಸಾಂಸ್ಕøತಿಕ ಸಮಿತಿಯನ್ನು ರಚಿಸಲಾಗಿದೆ. ಆಸಕ್ತ ಸ್ಥಳೀಯ ಕಲಾವಿದರು. ಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರನ್ನು ಸಂಪರ್ಕಿಸಬಹುದು. ಕಲಾವಿದರು ತಮ್ಮ ಕಿರುಪರಿಚಯ, ಹಾಗೂ ಹಿಂದಿನ ಪ್ರದರ್ಶನಗಳ ಕಿರು ವಿಡಿಯೋಗಳನ್ನು ಇಮೇಲ್ ವಿಳಾಸ nyfculcommittee2023@gmail.com ಮುಖಾಂತರ ಸಾಂಸ್ಕøತಿಕ ಸಮಿತಿಗೆ ಕಳುಹಿಸಬಹುದಾಗಿದೆ. ಮತ್ತು ಯುವಜನೋತ್ಸವದ ಕುರಿತು ಸಾಮಾಜಿಕ ಜಾಲತಾಣಗಳನ್ನು ಬಳಸಿ ಕಾರ್ಯಕ್ರಮಗಳ ನೇರ ಪ್ರಸಾರ ರಾಷ್ಟ್ರಾದ್ಯಂತ ನಡೆಯಲಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ