Recent Posts

Monday, April 14, 2025
ಸುದ್ದಿ

RRR​ ಐತಿಹಾಸಿಕ ಸಾಧನೆ : ನಾಟು ನಾಟು ಹಾಡಿಗೆ ಅಂತಾರಾಷ್ಟ್ರೀಯ ಗೋಲ್ಡನ್​ ಗ್ಲೋಬ್ಸ್​-2023 ಗೌರವ – ಕಹಳೆ ನ್ಯೂಸ್

ಕಳೆದ ವರ್ಷದ ಸೂಪರ್ ಹಿಟ್ ಸಿನೆಮಾ ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡು 2023ರ ಗೋಲ್ಡನ್ ಗ್ಲೋಬ್ ನಲ್ಲಿ ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೆದ್ದಿದೆ. ಗೋಲ್ಡನ್ ಗ್ಲೋಬ್ ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಗೆ ಆರ್ ಆರ್ ಆರ್ ನದ್ದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗೋಲ್ಡನ್ ಗ್ಲೋಬ್ ಸಮಾರಂಭದಲ್ಲಿ ತೆಲುಗು ಬ್ಲಾಕ್ ಬಸ್ಟರ್ ಆರ್ ಆರ್ ಆರ್ ಚಿತ್ರವು ‘ಅತ್ಯುತ್ತಮ ಇಂಗ್ಲೀಷೇತರ ಚಿತ್ರ’ ಎಂದು ನಾಮನಿರ್ದೇಶನಗೊಂಡಿದೆ. ಚಿತ್ರದಲ್ಲಿ ತೆಲುಗು ಟ್ರ್ಯಾಕ್ “ನಾಟು ನಾಟು” ನ್ನು ಹಿರಿಯ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಯೋಜಿಸಿದ್ದು, ಕಾಲ ಭೈರವ ಮತ್ತು ರಾಹುಲ್ ಸಿಪ್ಲಿಗುಂಜ್ ಸಾಹಿತ್ಯ ಬರೆದಿದ್ದಾರೆ. ಸಮಾರಂಭದಲ್ಲಿ ಸಂಗೀತ ನಿರ್ದೇಶಕ ಕೀರವಾಣಿ ಟ್ರೋಫಿಯನ್ನು ಸ್ವೀಕರಿಸಿ ಸಂಭ್ರಮಿಸಿದರು.

RRR 1920 ರ ದಶಕದಲ್ಲಿ ಇಬ್ಬರು ಭಾರತೀಯ ಕ್ರಾಂತಿಕಾರಿಗಳಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ – ಸುತ್ತ ಹೆಣೆದ ಸ್ವಾತಂತ್ರ್ಯ ಪೂರ್ವದ ಕಾಲ್ಪನಿಕ ಕಥೆಯನ್ನು ಅನುಸರಿಸುತ್ತದೆ. ಚಿತ್ರದಲ್ಲಿ ರಾಮ್ ಚರಣ್, ಜೂನಿಯರ್ NTR, ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ