Recent Posts

Monday, January 20, 2025
ಮೈಸೂರುರಾಷ್ಟ್ರೀಯಸಿನಿಮಾಸುದ್ದಿ

ಮೈಸೂರು ಮೂಲದ ಉದ್ಯಮಿ ಆದಿಲ್‌ ಜೊತೆ ಹಾಟ್ ಬೆಡಗಿ ರಾಖಿ ಸಾವಂತ್‌ ರಹಸ್ಯ ಮದುವೆ..? ಫೋಟೋ ವೈರಲ್ – ಕಹಳೆ ನ್ಯೂಸ್

ಮೈಸೂರು : ಮನೊರಂಜನಾ ಲೋಕದ ಡ್ರಾಮಾ ಕ್ವೀನ್ ಎಂದೇ ಖ್ಯಾತರಾಗಿರುವ ರಾಖಿ ಸಾವಂತ್ ಬಗ್ಗೆ ಇತ್ತೀಗೆ ಸಾಕಷ್ಟು ಸುದ್ದಿಗಳು ಕೇಳಿ ಬರುತ್ತಿವೆ. ರಿತೇಶ್ ರಾಜ್ ರೊಂದಿಗೆ ಮೊದಲು ಮದುವೆಯಾಗಿದ್ದ ರಾಖಿ ಸಾವಂತ್‌ ಆ ಬಳಿಕ ಅವರಿಗೆ ಡೈವೋರ್ಸ್‌ ಕೊಟ್ಟು, ಮೈಸೂರು ಮೂಲದ ಉದ್ಯಮಿ ಆದಿಲ್ ದುರಾನಿ ಅವರೊಂದಿಗೆ ಕಾಣಿಸಿಕೊಂಡಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಇವರಿಬ್ಬರ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗಿದೆ.

ಈ ನಡುವೆ ರಾಖಿ ಮತ್ತೊಮ್ಮೆ ಮದುವೆಯಾಗಿದ್ದು, ಈ ಬಾರಿ ಆದಿಲ್ ಅವರನ್ನು ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾರೆ. ಅವರಿಬ್ಬರ ಚಿತ್ರಗಳು ವೈರಲ್ ಆಗುತ್ತಿದ್ದು, ಒಂದು ಚಿತ್ರದಲ್ಲಿ ಅವರು ನ್ಯಾಯಾಲಯದ ಎದುರು ಮದುವೆ ಪ್ರಮಾಣಪತ್ರವನ್ನು ಕೈಯಲ್ಲಿ ಹಿಡಿದು ನಿಂತಿದ್ದಾರೆ. ರಾಖಿಯ ಇಂತಹ ಫೋಟೋ ನೋಡಿ ಅಭಿಮಾನಿಗಳು ಕೂಡ ಆಶ್ಚರ್ಯ ಪಡುತ್ತಿದ್ದಾರೆ.

ರಾಖಿ ಮತ್ತು ಆದಿಲ್ ಸಂಬಂಧ ಯಾವಾಗಲೂ ಪ್ರಚಾರದಲ್ಲಿತ್ತು. ಸಾರ್ವಜನಿಕವಾಗಿ, ಇಬ್ಬರೂ ಬಹಿರಂಗವಾಗಿ ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಈ ಜೋಡಿ ರಿಜಿಸ್ಟರ್ಡ್​ ಮ್ಯಾರೇಜ್ ಆಗಿದ್ದು ಬಳಿಕ ಇಬ್ಬರ ಮೊದಲ ಚಿತ್ರವೂ ಮುನ್ನೆಲೆಗೆ ಬಂದಿದೆ. ಇದರಲ್ಲಿ ಇಬ್ಬರ ಕೊರಳಲ್ಲಿ ಹಾರ ಇರುವುದು ಕಂಡುಬಂದಿದೆ.. (ಏಜೆನ್ಸೀಸ್​)