Sunday, November 24, 2024
ಸುದ್ದಿ

PGCET ಪ್ರವೇಶ ಪರೀಕ್ಷೆಯಲ್ಲಿ ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯ ಅದ್ವಿತೀಯ ಸಾಧನೆ – ಕಹಳೆ ನ್ಯೂಸ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸುವ PGCET MBA ಸ್ನಾತಕೋತ್ತರ ಸಾಮಾನ್ಯ ಪರೀಕ್ಷೆಯಲ್ಲಿ ಹಾಜರಾದ ಸರಿಸುಮಾರು 50,000ಕ್ಕೂ ಅಧಿಕ ವಿದ್ಯಾರ್ಥಿಗಳ ಪೈಕಿ ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯ ಕು. ವೇದದೀಕ್ಷಾ ( 763 Rank), ಕು. ತನ್ವಿ( 1295 Rank) ಮತ್ತು ತರಬೇತಿ ಪಡೆದ ಎಲ್ಲಾ ಅಭ್ಯರ್ಥಿಗಳು 6000 Rank ಒಳಗೆ ಪಡೆದು ಅದ್ವಿತೀಯ ಸಾಧನೆಯನ್ನು ಮಾಡಿರುತ್ತಾರೆ. ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲೆಯ ಅತ್ಯುತ್ತಮ PGCET ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಐಆರ್‌ಸಿಎಂಡಿಯ ವೈಶಿಷ್ಟ್ಯತೆ
ಈ ಶಿಕ್ಷಣ ಸಂಸ್ಥೆಯಲ್ಲಿ PGCET ಪ್ರವೇಶ ಪರೀಕ್ಷೆಯ ಪಠ್ಯಕ್ರಮದ ಸಂಪೂರ್ಣ ಭಾಗಗಳಲ್ಲಿ ಹೊಂದಿರುವ ಉತ್ತಮ ಪುಸ್ತಕಗಳು, ಗಣಿತಕ್ಕೆ ಸಂಬಂದಿಸಿದ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವ 12 ವರ್ಷಕ್ಕೂ ಅಧಿಕ ಮೇಲ್ಪಟ್ಟು ಅನುಭವೀ ಅಧ್ಯಾಪಕರು, ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳು, ಕ್ಯಾಲ್ಕುಲೇಟರ್ ಅನ್ನು ಉಪಯೋಗಿಸದೆ ಮಾಡುವ ಸುಲಭ ವಿಧಾನದ ಸರಳ ಗಣಿತ ತರಬೇತಿ, ಪೇಪರ್ ಆಧಾರಿತ ಸ್ವರೂಪದಲ್ಲಿ ಪರಿಹರಿಸುವ ಅಣಕು ಪರೀಕ್ಷೆಗಳು, ಇಂಗ್ಲೀಷ್ ಗ್ರಾಮರ್ ತರಬೇತಿ, ಒಂದು ವರ್ಷದ ಸಂಪೂರ್ಣ ಪ್ರಚಲಿತ ವಿದ್ಯಮಾನ ಇತ್ಯಾದಿ ತರಬೇತಿ ನೀಡಲಾಗುತ್ತಿದೆ. ಪ್ರತಿ ವಿದ್ಯಾರ್ಥಿಯ ಮೇಲೆ ವೈಯಕ್ತಿಕ ಗಮನ, ಸಂಪೂರ್ಣ ಹವಾನಿಯಂತ್ರಿತ ಕೊಠಡಿ, PGCET MBA/MCA ಬಗ್ಗೆ ಸಂಪೂರ್ಣ ಮಾಹಿತಿಗಳನ್ನು ಕಲೆ ಹಾಕಿ ವಿದ್ಯಾರ್ಥಿಗಳಿಗೆ ಉಚಿತ ನೀಡುವ ಏಕೈಕ ಸಂಸ್ಥೆಯಾಗಿದೆ.

ಸಮಗ್ರ ತರಬೇತಿಗೆ ಒತ್ತು
ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳು ಇಲ್ಲಿ PGCET ತರಬೇತಿಯನ್ನು ಪಡೆದು ಒಳ್ಳೆಯ Rankಗಳನ್ನು ಗಳಿಸಿ ಕರ್ನಾಟಕ ಮತ್ತು ಹೊರ ರಾಜ್ಯಗಳ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ MBA/MCA ಸ್ನಾತಕೋತ್ತರ ಪದವಿಯ ಸೀಟುಗಳನ್ನು ಪಡೆದಿರುತ್ತಾರೆ.

ನೋಂದಾವಣೆಗಾಗಿ
ಐಆರ್‌ಸಿಎಂಡಿಯ ಶಿಕ್ಷಣ ಸಂಸ್ಥೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ತರಬೇತಿ, ಬ್ಯಾಂಕಿಂಗ್, PGCET ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮಗ್ರ ತರಬೇತಿ, ಮಕ್ಕಳಿಗೆ ಅಬಾಕಸ್‌ ಮತ್ತು ವೇದ ಗಣಿತ ತರಬೇತಿ ನೀಡುತ್ತಿದೆ. ಪುತ್ತೂರು ಮತ್ತು ಸುಳ್ಯದಲ್ಲಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯಲ್ಲಿ ದಾಖಲಾತಿಯನ್ನು ಬಯಸುವವರು 9945988118 / 9632320477 ಮೊಬೈಲ್ ನಂಬರಿಗೆ ನೇರವಾಗಿ ಸಂಪರ್ಕಿಸಬಹುದು ಎಂದು ಐಆರ್‌ಸಿಎಂಡಿ ಶಿಕ್ಷಣ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.