ಮಂಗಳೂರು: ಗಾಂಜಾ ಸಾಗಾಟ ಹಾಗೂ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿನಿಯರನ್ನು ಬಂಧಿಸಿದ್ದ ಮಂಗಳೂರು ಪೊಲೀಸರು, ಇಂದು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಇದರಲ್ಲಿ ಇಬ್ಬರು ವೈದ್ಯರು ಹಾಗೂ ಮತ್ತೋರ್ವ ಹಣ್ಣಿನ ಅಂಗಡಿಯ ವ್ಯಾಪಾರಿಯಾಗಿದ್ದಾನೆ.
ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಅಂತಿಮ ವರ್ಷದ Pathology MD ಮಾಡುತ್ತಿರುವ ಡಾ.ಹರ್ಷ ಕುಮಾರ್, D Pharm ವಿದ್ಯಾರ್ಥಿ ಕೇರಳದ ಕೊಚ್ಚಿನ್ ಮೂಲದ ಅಡಾನ್ ದೇವ್ ಮತ್ತು ಮಂಗಳೂರು ಕಸಬ ಬೆಂಗ್ರೆ ನಿವಾಸ ಮುಹಮ್ಮದ್ ಅಫ್ರಾರ್ (23) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ ಕೇರಳ ಮೂಲದ ಡಾ ಸಮೀರ್ (32), ಡಾ. ನಾದಿಯಾ ಸಿರಾಜ್ (24), ತಮಿಳುನಾಡಿನ ಡಾ ಮಣಿಮಾರನ್ ಮುತ್ತು (28), ಆಂಧ್ರದ ಡಾ ವರ್ಷಿಣಿ ಪ್ರತಿ (26), ಪಂಜಾಬ್’ನ ಡಾ ಭಾನು ಧಾಹಿಯಾ (27), ಚಂಡಿಘಡದ ಡಾ. ರಿಯಾ ಚಡ್ಡಾ (22), ದೆಹಲಿಯ ಡಾ. ಕ್ಷಿತಿಜ್ ಗುಪ್ತಾ (25), ಮಹಾರಾಷ್ಟ್ರದ ಡಾ ಇರಾ ಬಸಿನ್ (23) ಮತ್ತು ಬಂಟ್ವಾಳ ಮಾರಿಪಳ್ಳದ ಮುಹಮ್ಮದ್ ರವೂಫ್ ಗೌಸ್ (34) ಸೇರಿ ಒಟ್ಟು 10 ಮಂದಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದರು.